ಇಹಲೋಕ ತ್ಯಜಿಸಿದ ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ದೀಕ್ಷಿತ್..!

ಮಾಧುರಿ ದೀಕ್ಷಿತ್ ಅಬೋಧ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ದಯಾವಾನ್ ಮತ್ತು ವರ್ದಿಯಂತಹ ಚಿತ್ರಗಳಲ್ಲಿನ ಕೆಲವು ಚಿಕ್ಕ ಹಾಗೂ ಪೋಷಕ ಪಾತ್ರಗಳ ಬಳಿಕ, ಅವರು ತೇಜ಼ಾಬ್ ಚಿತ್ರದಲ್ಲಿ ಮುಖ್ಯ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಂಡರು ಮತ್ತು ಈ ಚಿತ್ರ ಅವರನ್ನು ತಾರಾಪಟ್ಟಕ್ಕೇರಿಸುವುದರ ಜೊತೆಗೆ ಅವರಿಗೆ ಅವರ ಮೊದಲ ಫ಼ಿಲ್ಮ್‌ಫ಼ೇರ್ ನಾಮನಿರ್ದೇಶನ ತಂದುಕೊಟ್ಟಿತು.

ನಂತರ, ಅವರು ರಾಮ್ ಲಖನ್, ಪರಿಂದಾ ತ್ರಿದೇವ್, ಕಿಶನ್ ಕನ್ಹೈಯಾ, ಮತ್ತು ಪ್ರಹಾರ್, ಚಿತ್ರಗಳನ್ನು ಒಳಗೊಂಡಂತೆ, ಅನೇಕ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದರು. ಅನಿಲ್ ಕಪೂರ್‌ರೊಂದಿಗೆ ಈ ಚಿತ್ರಗಳಲ್ಲಿ ಅಭಿನಯಿಸಿದ ನಂತರ, ಅವರಿಬ್ಬರ ಗೆಳೆತನ ಬೆಳೆಯಿತು.

ಮಾಧುರಿ ಇಂದ್ರ ಕುಮಾರ್‌ರ ಪ್ರಣಯ-ರೂಪಕ ದಿಲ್‌ನಲ್ಲಿ ಆಮಿರ್ ಖಾನ್‌ರೊಂದಿಗೆ ಅಭಿನಯಿಸಿದರು. ಅವರು, ಖಾನ್ ಪಾತ್ರವಹಿಸಿದ, ರಾಜಾನನ್ನು ಪ್ರೀತಿಸುವ, ಮತ್ತು ನಂತರ ಅವನನ್ನು ಮದುವೆಯಾಗಲು ಮನೆ ಬಿಟ್ಟುಹೋಗುವ, ಒಬ್ಬ ಶ್ರೀಮಂತ, ಅಹಂಕಾರದ ಯುವತಿ, ಮಧು ಮೆಹರಾಳ ಪಾತ್ರವಹಿಸಿದರು. ಈ ಚಿತ್ರ ಆ ವರ್ಷ ಭಾರತದಲ್ಲಿ ಭಾರಿ ಗಲ್ಲಾಪೆಟ್ಟಿಗೆ ಯಶಸ್ಸುಗಳ ಪೈಕಿ ಒಂದೆನಿಸಿತು, ಮತ್ತು ಮಾಧುರಿಯವರ ಅಭಿನಯ ಅವರಿಗೆ ಅವರ ವೃತ್ತಿಜೀವನದ ಮೊದಲ ಫ಼ಿಲ್ಮ್‌ಫ಼ೇರ್ ಅತ್ಯುತ್ತಮ ನಟಿ ಪ್ರಶಸ್ತಿ ತಂದುಕೊಟ್ಟಿತು.

ಮಾಧುರಿ ಧೀಕ್ಷೀತ್ ತಮ್ಮ ತಾಯಿಯ ಸಾವಿನ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ.

ಮಾಧುರಿ ದೀಕ್ಷಿತ್ ಅವರನ್ನು ಚಲನಚಿತ್ರ ಉದ್ಯಮದಲ್ಲಿ ಧಕ್-ಧಕ್ ಹುಡುಗಿ ಎಂದು ಕರೆಯಲಾಗುತ್ತದೆ. ಮಾಧುರಿ ಅವರ ವೃತ್ತಿಜೀವನದ ಸಮಯದಲ್ಲಿ ಅವರ ಹೆಸರು ಅನೇಕ ನಟರೊಂದಿಗೆ ಸಂಬಂಧ ಹೊಂದಿತ್ತು, ಆದರೆ ಮಾಧುರಿ ದೀಕ್ಷಿತ್ ಮತ್ತು ಕ್ರಿಕೆಟಿಗ ಅಜಯ್ ಜಡೇಜಾ ಅವರ ಪ್ರೇಮಕಥೆಯ ಬಗ್ಗೆ ನಿಮಗೆ ತಿಳಿದಿದೆಯೇ. ಹೌದು… ನಟ ಮಾತ್ರವಲ್ಲದೆ ಕ್ರಿಕೆಟಿಗರೂ ಮನಸೋತಿದ್ದ ಈ ಚೆಲುವೆ, ಜೋಡಿಯಾಗುತ್ತಲೇ ಬೇರ್ಪಟ್ಟು ಪ್ರೇಮಕಥೆಯೊಂದು ಅಪೂರ್ಣವಾಗಿಯೇ ಉಳಿಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಾಹನಕ್ಕೆ ವಿಮೆ ಇಲ್ಲದಿದ್ದಲ್ಲಿ ಮಾಲೀಕರ ಮೇಲಿದೆ ಪರಿಹಾರದ ಹೊಣೆ!

Sun Mar 12 , 2023
ರಸ್ತೆ ಅಪಘಾತಗಳು ನಡೆದಾಗ ಘಟನೆಗೆ ಕಾರಣವಾದ ವಾಹನಕ್ಕೆ ವಿಮೆ ನವೀಕರಣವಾಗದಿದ್ದರೆ ಅಂತಹ ಸಂದರ್ಭದಲ್ಲಿ ಮಾಲೀಕರು ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಕೋರ್ಟ್ ರಸ್ತೆ ಅಪಘಾತ ನಡೆದ ಮುನ್ನವೇ ವಿಮೆ ನವೀಕರಣವಾಗಿದ್ದರೂ, ಘಟನೆ ನಡೆದ ಮರು ದಿನದಿಂದ ಅನ್ವಯವಾಗುವಂತಿದ್ದಲ್ಲಿ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ರಸ್ತೆ ಅಪಘಾತ ಪ್ರಕರಣದಲ್ಲಿ ವಾಹನದ ಮಾಲೀಕರು ಪರಿಹಾರ ನೀಡಬೇಕೆಂದು ವಿಚಾರಣಾ ಕೋರ್ಟ್ ಆದೇಶ […]

Advertisement

Wordpress Social Share Plugin powered by Ultimatelysocial