‘ಮಧ್ಯರಾತ್ರಿಯಲ್ಲಿ ರೆಸ್ಟಾರೆಂಟ್​ ಬಾಗಿಲು ಮುಚ್ಚಿಸುವ ಅಧಿಕಾರ ಪೊಲೀಸರಿಗಿಲ್ಲ’ -​ ಹೈಕೋರ್ಟ್​ ಮಹತ್ವದ ಆದೇಶ

ಕೆಫೆ ಹಾಗೂ ರೆಸ್ಟಾರೆಂಟ್​ಗಳನ್ನು ಬಂದ್​ ಮಾಡುವಂತೆ ಒತ್ತಾಯಿಸುವಂತಿಲ್ಲ ಹಾಗೂ ತಡರಾತ್ರಿಯಲ್ಲಿ ವ್ಯಾಪಾರ ಮಾಡದಂತೆ ನಿರ್ಬಂಧಿಸುವಂತಿಲ್ಲ ಎಂದು ಮದ್ರಾಸ್​ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.ತಡರಾತ್ರಿಯಲ್ಲಿ ರೆಸ್ಟಾರೆಂಟ್​ಗಳನ್ನು ನಡೆಸುವುದಕ್ಕೆ ಕಿಲ್ವಾಕ್​ ಠಾಣೆ ಪೊಲೀಸರು ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ ಎನ್​ ಗುಣರಾಜ್​ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣನ್​ ರಾಮಸ್ವಾಮಿ ಈ ಮಹತ್ವದ ಆದೇಶವನ್ನು ನೀಡಿದ್ದಾರೆ.ಸಂವಿಧಾನದ ಪರಿಚ್ಛೇದ 19(1)(ಜಿ) ಅಡಿಯಲ್ಲಿ ತಮ್ಮ ಹೋಟೆಲ್​ ಅಥವಾ ರೆಸ್ಟಾರೆಂಟ್​ಗಳಲ್ಲಿ ವ್ಯಾಪಾರ ನಡೆಸುವ ಹಕ್ಕನ್ನು ಮಾಲೀಕರು ಹೊಂದಿದ್ದಾರೆ. ಅಲ್ಲದೇ 21ನೇ ವಿಧಿಯ ಅಡಿಯಲ್ಲಿ ಗ್ರಾಹಕರಿಗೂ ಆಹಾರ ಸೇವಿಸುವ ಹಕ್ಕು ಇದೆ. ಇಂತಹ ಸಂದರ್ಭದಲ್ಲಿ ಹೋಟೆಲ್​ಗಳನ್ನು ರಾತ್ರಿ ಸಮಯದಲ್ಲಿ ನಡೆಸದಂತೆ ತಡೆ ನೀಡಲು ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿ ಕೃಷ್ಣನ್​ ರಾಮಸ್ವಾಮಿ ಹೇಳಿದ್ದಾರೆ.ಸಂವಿಧಾನದ ಪರಿಚ್ಛೇದಗಳನ್ನು ಮೀರಿ ನಿಯಮಗಳನ್ನು ಜಾರಿಗೆ ತರವ ವೇಳೆಯಲ್ಲಿ ಸಮಂಜಸವಾದ ಹಾಗೂ ಪ್ರಾಮಾಣಿಕವಾದ ಕಾರಣವನ್ನು ಹೊಂದಿರಬೇಕು. ರೆಸ್ಟಾರೆಂಟ್ ಅಥವಾ ಕೆಫೆಗಳನ್ನು ನಡೆಸಲು ಕಾನೂನಿನ ಅಡಿಯಲ್ಲಿ ಯಾವುದೇ ಅಡ್ಡಿಯಿಲ್ಲ. ಕಾನೂನು ಸುವ್ಯವಸ್ಥೆಯನ್ನು ರಕ್ಷಿಸಬೇಕು ಎಂಬ ಕಾರಣಕ್ಕೆ ಪೊಲೀಸರು ರೆಸ್ಟಾರೆಂಟ್​ಗಳನ್ನು ಬಂದ್​ ಮಾಡುವಂತೆ ಒತ್ತಾಯ ಹೇರುವಂತಿಲ್ಲ. ಈ ಮೂಲಕ ಪೊಲೀಸರು ತಿನ್ನಲೆಂದು ಹೋಟೆಲ್​ಗೆ ಬರುವ ಗ್ರಾಹಕರ ಹಕ್ಕನ್ನೂ ಕಸಿದುಕೊಂಡಂತಾಗುತ್ತದೆ ಎಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತ ಮಾತ್ರವಲ್ಲದೆ ವಿಶ್ವದ ಯಾವುದೇ ಟಿ20 ತಂಡಕ್ಕೂ ಅವರು ಕಾಲಿಡಬಲ್ಲರು: ಸುನಿಲ್ ಗವಾಸ್ಕರ್

Tue Feb 22 , 2022
ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಭಾರತದ 28 ವರ್ಷದ ಸ್ಟಾರ್ ಜಸ್ಪ್ರೀತ್ ಬುಮ್ರಾ ಅವರನ್ನು ಹೊಗಳಿದರು, ಆದರೆ ಭಾರತೀಯ T20I ತಂಡವು ಅವರ ವೇಗದ ಬೌಲಿಂಗ್ ವಿಭಾಗದಲ್ಲಿ “ಶ್ರೀಮಂತಿಕೆಗಾಗಿ ಹಾಳಾಗಿದೆ” ಎಂದು ಶ್ಲಾಘಿಸಿದರು. ಭಾನುವಾರ ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 3-0 ವೈಟ್‌ವಾಶ್ ಜಯ ಸಾಧಿಸಿದ ನಂತರ ಗವಾಸ್ಕರ್ ಅವರ ಕಾಮೆಂಟ್ ಬಂದಿದೆ. ಆದಾಗ್ಯೂ, ಬುಮ್ರಾ ಅವರು ಕೆಲಸದ ಹೊರೆ ನಿರ್ವಹಣೆಯ ಕಾರಣ ವಿಶ್ರಾಂತಿ ಪಡೆದಿದ್ದರಿಂದ […]

Advertisement

Wordpress Social Share Plugin powered by Ultimatelysocial