ಉದ್ಯಮಿ ಮನೆ ಮೇಲೆ ಐಟಿ ದಾಳಿ, 8 ಕೋಟಿ ರೂ. ನಗದು, 3 ಕೆಜಿ ಚಿನ್ನ ಜಪ್ತಿ !

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಉದ್ಯಮಿ ಶಂಕರ್ ರೈ ಮತ್ತು ಅವರ ಸಹೋದರರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, 8 ಕೋಟಿ ರೂಪಾಯಿ ನಗದು ಮತ್ತು ಮೂರು ಕಿಲೋಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ಆರಂಭವಾದ ಐಟಿ ದಾಳಿ, ಇನ್ನೂ ಮುಂದುವರಿದಿವೆ ಎಂದು ಆದಾಯ ತೆರಿಗೆ(ತನಿಖೆ) ಜಬಲ್‌ಪುರ ವೃತ್ತದ ಜಂಟಿ ಆಯುಕ್ತ ಮುನ್‌ಮುನ್ ಶರ್ಮಾ ಅವರು ಪಿಟಿಐಗೆ ತಿಳಿಸಿದ್ದಾರೆ.

ಈವರೆಗೆ ನಡೆಸಿದ ಶೋಧದ ವೇಳೆ 8 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಇದರಲ್ಲಿ ನೀರಿನ ಪಾತ್ರೆಯಲ್ಲಿ ಬಚ್ಚಿಟ್ಟಿದ್ದ 1 ಕೋಟಿ ರೂಪಾಯಿ ಸಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಮೂರು ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಯ್ ಸಹೋದರರು ಸಂಗ್ರಹಿಸಿದ ಸಂಪತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಐಟಿ ಅಧಿಕಾರಿಗಳು ಶೋಧಿಸುತ್ತಿದ್ದು, ಮದ್ಯದಂಗಡಿಗಳ ಗುತ್ತಿಗೆ ಪಡೆದು ನಡೆಸುತ್ತಿದ್ದರು ಮತ್ತು ತಮ್ಮ ಸಿಬ್ಬಂದಿಯ ಹೆಸರಿನಲ್ಲಿ ಐಷಾರಾಮಿ ಬಸ್‌ಗಳನ್ನು ಓಡಿಸುತ್ತಿದ್ದರು ಎಂಬುದು ದಾಳಿ ವೇಳೆ ತಿಳಿದು ಬಂದಿದೆ.

ಶಂಕರ್ ರೈ ಮತ್ತು ಅವರ ಸಹೋದರರ ಸಂಪತ್ತಿನ ಬಗ್ಗೆ ಮಾಹಿತಿ ನೀಡುವವರಿಗೆ 10,000 ರೂಪಾಯಿ ನಗದು ಬಹುಮಾನ ನೀಡುವದಾಗಿ ಐಟಿ ಇಲಾಖೆ ಘೋಷಿಸಿದೆ ಎಂದು ಶರ್ಮಾ ಹೇಳಿದ್ದಾರೆ.

ಇಂದೋರ್, ಭೋಪಾಲ್, ಜಬಲ್ಪುರ್ ಮತ್ತು ಗ್ವಾಲಿಯರ್‌ನ ಐಟಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸೇರಿದಂತೆ ಸುಮಾರು 200 ಸಿಬ್ಬಂದಿಗಳು ಏಕಕಾಲಕ್ಕೆ ಉದ್ಯಮಿ ಮತ್ತು ಅವರ ಸಹೋದರರಾದ ಕಮಲ್ ರೈ, ರಾಜು ರೈ ಹಾಗೂ ಸಂಜಯ್ ರೈ ಅವರ ವಿವಿಧ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಕ್ರಾಂತಿ ಸಂಭ್ರಮದ ಆಹಾರ -ಆರೋಗ್ಯ

Sat Jan 8 , 2022
ಕೊರಿಯುವ ಚಳಿಗೆ ನಾಲಿಗೆಯಷ್ಟೇ ಬಿಸಿಯಾದರೆ ಸಾಲದು. ಆಹಾರದ  ಆರೋಗ್ಯವನ್ನು ಬೆಚ್ಚಗಾಗಿಸಬೇಕು. ಚಳಿಗಾಲದ ಬಿಸಿ, ಆಹಾರ ಪೇಯ ಏನಿರಬೇಕು? ಹೇಗಿರಬೇಕು?  ಎಂದು ಒಂದಿಷ್ಟು ಟಿಪ್ಸ್ ಇಲ್ಲಿದೆ… ಸಂಭ್ರಮದ ಹಬ್ಬ ಸಂಕ್ರಾಂತಿ ಸಮೀಪಿಸುತ್ತಿದೆ. ಎಳ್ಳು, ಬೆಲ್ಲ, ಕಬ್ಬು, ಕಡಲೆಕಾಯಿ, ಅವರೆಕಾಳು ಮೆಲ್ಲುವ ಕಾಲವಿದು. ಹಬ್ಬದಲ್ಲಿ ನೆಂಟರು, ಆಪ್ತರಿಗೆ ಎಳ್ಳು-ಬೆಲ್ಲ ಹಂಚುತ್ತಾ, ಒಳ್ಳೆ ಮಾತಾಡೋಣ ಎನ್ನುತ್ತಾ ಸಂಭ್ರಮಿಸುವ ಸಮಯವಿದು. ಹೀಗೆ ಸಂಭ್ರಮಿಸುವ ಕಾಲದಲ್ಲಿ ಕಳೆದ ಎರಡು ಸಂಕ್ರಾಂತಿಗೆ ‘ಕೋವಿಡ್‌’ ಭೀತಿ ಎದುರಾಗಿತ್ತು. ಈ ಬಾರಿಯೂ […]

Advertisement

Wordpress Social Share Plugin powered by Ultimatelysocial