ಮಲಯಾಳಂ ನಟಿ ಜತೆಗಿನ ಸಂಬಂಧವೇ ನಟ ವಿಜಯ್​ ಡಿವೋರ್ಸ್​ಗೆ ಕಾರಣ

ಕಲಾವಿದರ ವೈಯಕ್ತಿಕ ವಿಚಾರಗಳ ಬಗ್ಗೆ ವದಂತಿಗಳು ಹರಡುವುದು ಸರ್ವೇ ಸಾಮಾನ್ಯ ಎಂಬುದು ಎಲ್ಲರಿಗು ತಿಳಿದಿರುವ ಸಂಗತಿ. ಇದೀಗ ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ಅವರ ವೈವಾಹಿಕ ಜೀವನ ಕುರಿತ ಗಾಳಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಯಾವುದು ಆ ಸುದ್ದಿ ಅಂದರೆ, ವಿಜಯ್​ ಮತ್ತು ಅವರ ಪತ್ನಿ ಸಂಗೀತಾ ನಡುವೆ ಡಿವೋರ್ಸ್​ ಆಗಿದೆಯಂತೆ.ವಿಕಿಪೀಡಿಯಾ ಮಾಹಿತಿಯನ್ನು ಎಡಿಟ್​ ಮಾಡಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವುದು ಈ ವದಂತಿಗೆ ಕಾರಣವಾಗಿದೆ. ಹರಿದಾಡುತ್ತಿರುವ ಫೋಟೋದಲ್ಲಿ ವಿಜಯ್​ ಅವರ ಪತ್ನಿ ಕಾಲಂ ಮುಂದೆ ಸಂಗೀತಾ ಅವರ ಹೆಸರನ್ನು ಬರೆಯಲಾಗಿದೆ. ಅಲ್ಲದೆ, ಬ್ರಾಕೆಟ್​ನಲ್ಲಿ 1999ರಲ್ಲಿ ಮದುವೆ, 2022ರಲ್ಲಿ ಡಿವೋರ್ಸ್​ ಅಂತಾ ಬರೆಯಲಾಗಿದೆ.ದಂಪತಿ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದು, ವಿಚ್ಛೇದನಕ್ಕೆ ಮಲಯಾಳಿ ನಟಿಯೊಂದಿಗಿನ ವಿಜಯ್ ಸಂಬಂಧವೇ ಕಾರಣ ಎಂಬ ಗಾಸಿಪ್ ಹಬ್ಬಿದೆ.ವಿಜಯ್ ಅವರ ಹೊಸ ಚಿತ್ರ ‘ವಾರಿಸು’ ಆಡಿಯೋ ಬಿಡುಗಡೆ ಕಾರ್ಯಕ್ರಮ ಮತ್ತು ಪ್ರಿಯಾ ಅಟ್ಲೀ ಅವರ ಚೊಚ್ಚಲ ಸೀಮಂತಕ್ಕೆ ವಿಜಯ್​ ಜೊತೆ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಡಿವೋರ್ಸ್​ ವದಂತಿ ಹರಿದಾಡುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೈನ ಧರ್ಮ ಸಮಾಜದವರಿಂದ ತೀರ್ಥ ಕ್ಷೇತ್ರ ಶಿಖರಜಿ ಉಳಿಸಿ ಎಂದು ಜಮಖಂಡಿ ನಗರದಲ್ಲಿ ಬ್ರಹತ್ ಪ್ರತಿಭಟನೆ.

Fri Jan 6 , 2023
ಜೈನ ಧರ್ಮದವರಿಗೆ ಸಮ್ಮೇದ ಶಿಖರಜಿ ಪವಿತ್ರ ತೀರ್ಥ ಕ್ಷೇತ್ರ ವಾಗಿರುತ್ತೆ ತೀರ್ಥ ಕ್ಷೆತ್ರ ಶಿಖರಜಿ ಇಲ್ಲದಿದ್ದರೆ ಜೈನ ಧರ್ಮವಿಲ್ಲಾ., ಜಾರ್ಖಂಡ್ ಸರ್ಕಾರವು ಈ ಪವಿತ್ರ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಮಾಡಲು ಆದೇಶ ಹೊರಡಿಸಿದ್ದಾರೆ ಹಾಗೂ ರಾಜಸ್ತಾನದ ರಾಣಪುರ ಮತ್ತು ಕಿರನಾರ ಇವುಗಳನ್ನು ಕೂಡ ಪ್ರವಾಸಿ ತಾನವನ್ನಾಗಿ ಅಲ್ಲಿಯ ಸ್ಥಳೀಯ ಸರ್ಕಾರಗಳು ಮಾರ್ಪಡು ಮಾಡಲಾಗಿದೆ ಮುಂದಿನ ದಿನಮಾನಗಳಲ್ಲಿ ಪವಿತ್ರ ಕ್ಷೇತ್ರದಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ಮಾಡಿ ಕೊಟ್ಟಹಾಗೆ ಆಗುತ್ತೆ ಇದನ್ನು ಖಂಡಿಸಿ […]

Advertisement

Wordpress Social Share Plugin powered by Ultimatelysocial