ಮಂಡ್ಯದ ಮಳವಳ್ಳಿಯಲ್ಲಿ 75ಕ್ಕೂ ಹೆಚ್ಚು ಮಂದಿ ಜೆಡಿಎಸ್ ಸೇರ್ಪಡೆ

ಜೆಡಿಎಸ್ ಪಕ್ಷದ ( JDS Party ) ಪಂಚರತ್ನ ರಥಯಾತ್ರೆಯ ಬಳಿಕ, ಕಾಂಗ್ರೆಸ್ ಪಕ್ಷಕ್ಕೆ ( Congress Party ) ಬಿಗ್ ಶಾಕ್ ಎನ್ನುವಂತೆ ಇಂದು ಕೈ ತೊರೆದು, 75ಕ್ಕೂ ಹೆಚ್ಚು ಮಂದಿ ಜೆಡಿಎಸ್ ಪಕ್ಷವನ್ನು ಮಂಡ್ಯದ ಮಳವಳ್ಳಿಯಲ್ಲಿ ಸೇರ್ಪಡೆಯಾಗಿದ್ದಾರೆ.ಮಂಡ್ಯದ ಮಳವಳ್ಳಿ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಇಂದು ಧನಗೂರು ಗ್ರಾಮದಲ್ಲಿ ನಡೆದಂತ ಜೆಡಿಎಸ್ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ ಅನ್ನದಾನಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ 75ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ತೊರೆದು ಸೇರ್ಪಡೆಯಾದರು.ಈ ವೇಳೆ ಮಾತನಾಡಿದಂತ ಶಾಸಕ ಅನ್ನದಾನಿ ಅವರು, ನಾನು ಎಂಎಲ್‌ಎ ಆದ ನಂತ್ರ ಎರಡು ವರ್ಷ ಕೊರೋನಾ ಇತ್ತು. ಆದರೂ ಎದೆಗುಂದದೇ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ, ಪುಡ್ ಕಿಟ್ ಕೊಟ್ಟಿದ್ದೇನೆ. ಕ್ವಾರಂಟೈನ್ ನಲ್ಲಿ ಇದ್ದವರನ್ನು ಹಾಡಿನ ಮೂಲಕ ಖುಷಿ ಪಡಿಸಿದ್ದೇನೆ ಎಂದರು.ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸರಿಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ. ಅವರ ಬಳಿ ಗಲಾಟೆ ಮಾಡಿ ಹಣ ಬಿಡುಗಡೆ ಮಾಡಿಸಿ ಅಭಿವೃದ್ಧಿ ಮಾಡಿದ್ದೇನೆ ಎಂದು ತಿಳಿಸಿದರು.ನಮ್ಮ ಜೆಡಿಎಸ್ ಪಕ್ಷದ ಪಂಚರತ್ನ ಕಾರ್ಯಕ್ರಮ ಜಾರಿಯಾಗಬೇಕು. ರಾಜ್ಯದ ಜನರಿಗೆ ಉಪಯೋಗ ಇದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಟೆನ್ನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ

Sat Jan 7 , 2023
ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ ಗೆ ವಿಚ್ಛೇದನ ನೀಡುವ ಸುದ್ದಿಯ ನಡುವೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟೆನಿಸ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಗಾಯದ ವಿಚಾರವಾಗಿ ಸಾನಿಯಾ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಮುಂದಿನ ತಿಂಗಳು ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಆಡುವುದಾಗಿ ಸಾನಿಯಾ ಹೇಳಿದ್ದಾರೆ. ಈ ಚಾಂಪಿಯನ್‌ಶಿಪ್ ಸಾನಿಯಾ ವೃತ್ತಿಜೀವನದ ಕೊನೆಯ ಪಂದ್ಯಾವಳಿಯಾಗಿದೆ. ಈ ದುಬೈ ಟೆನಿಸ್ ಚಾಂಪಿಯನ್‌ಶಿಪ್ ಫೆಬ್ರವರಿ 19 ರಂದು ಆರಂಭವಾಗಲಿದೆ. ಇದು WTA 1000 […]

Advertisement

Wordpress Social Share Plugin powered by Ultimatelysocial