ಈ ನಿಟ್ಟಿನಲ್ಲಿ ಮೆಂತ್ಯೆ ಸೊಪ್ಪಿನ ಸೇವನೆಯಿಂದಾಗುವ ಪ್ರಯೋಜನಗಳೇನು!

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಆರೋಗ್ಯ ಸಮತೋಲನದಲ್ಲಿರಿಸಲು ಹಸಿ ತರಕಾರಿ, ಸೊಪ್ಪು, ಹಣ್ಣುಗಳನ್ನು ನಿತ್ಯದ ಆಹಾರದಲ್ಲಿ ಸೇವನೆ ಮಾಡಬೇಕು. ಅದರಲ್ಲೂ ತರಕಾರಿ ಮತ್ತು ಸೊಪ್ಪುಗಳ ಸೇವೆನೆ ತುಸು ಹೆಚ್ಚೇ ಮಾಡಿದರೆ ಒಳಿತು. ಇದರಿಂದಾಗಿ ಖಾಯಿಲೆ ಬೀಳುವ ಪ್ರಸಂಗ ಕಡಿಮೆ ಎಂದು ವೈದ್ಯರು ಹೇಳುತ್ತಾರೆ.ಈ ನಿಟ್ಟಿನಲ್ಲಿ ಮೆಂತ್ಯೆ ಸೊಪ್ಪಿನ ಸೇವನೆಯಿಂದಾಗುವ ಪ್ರಯೋಜನಗಳೇನು ಎಂದು ಒಂದೊಂದಾಗಿ ತಿಳಿದುಕೊಳ್ಳೋಣ ಬನ್ನಿ.ಮೆಂತ್ಯೆ ಸೊಪ್ಪು ಸೇವನೆಯಿಂದಾಗಿ ಹಿಮೋಗ್ಲೋಬಿನ್‌ ಪ್ರಮಾಣ ಹೆಚ್ಚಾಗುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಹೇರಲಾಗಿರುತ್ತದೆ. ಇದು ರಕ್ತ ಹೀನತೆ ಸಮಸ್ಯೆಯನ್ನು ಪರಿಹರಿಸುತ್ತದೆ. ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಮೆಂತ್ಯೆ ಸೊಪ್ಪನ್ನು ನಿತ್ಯದ ಆಹಾರದಲ್ಲಿ ಸೇವಿಸಿದರೆ ಹಿಮೋಗ್ಲೋಬಿನ್‌ ಪ್ರಮಾಣ ಏರಿಕೆ ಆಗುತ್ತದೆ.ಮೆಂತ್ಯೆ ಸೊಪ್ಪು ನಿತ್ಯವೂ ಸೇವಿಸಿದರೆ ಉರಿಯೂತ ಖಾಯಿಲೆ ನಿವಾರಣೆಯಾಗುತ್ತದೆ. ಸಲಾಡ್‌ ರೂಪದಲ್ಲಿ ಈ ಸೊಪ್ಪು ಸೇವಿಸಬಹುದು. ಅಥವಾ ಅಡುಗೆಯಲ್ಲೂ ಹಾಕಿ ಸೇವಿಸಬಹುದು.ಬ್ರಾಂಕ್ರೈಟಿಸ್‌ ಹಾಗು ಇನ್ನಿತರ ಚರ್ಮಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ಮೆಂತ್ಯೆ ಸೊಪ್ಪಿನ ಸೇವನೆ ತುಂಬಾ ಪರಿಣಾಮಕಾರಿ ಎಂದು ವೈದ್ಯರು ಹೇಳುತ್ತಾರೆ. ದೀರ್ಘಕಾಲದಿಂದಲೂ ಇದ್ದ ಕೆಮ್ಮು ನಿವಾರಣೆಗೆ ಮೆಂತ್ಯೆ ಸೊಪ್ಪನ್ನು ಹೇರಳವಾಗಿ ಸೇವಿಸಬೇಕು. ಮೈ ಕೈ ನೋವು, ಕಿಡ್ನಿ ಸಮಸ್ಯೆ ಮತ್ತು ಕಿಡ್ನಿ ಊತವನ್ನು ಮೆಂತ್ಯೆ ಸೊಪ್ಪು ಕಡಿಮೆ ಮಾಡುತ್ತದೆ.ಮೆಂತ್ಯೆ ಸೊಪ್ಪಿನಲ್ಲಿ ದೇಹಕ್ಕೆ ಬೇಕಾಗುವ ನಾರಿನಾಂಶ ಅತೀ ಹೆಚ್ಚು ಪ್ರಮಾಣದಲ್ಲಿರುತ್ತದೆ. ನಾರಿನಾಂಶ ಹೇರಳವಾಗಿರುವ ಮೆಂತ್ಯೆ ಸೊಪ್ಪನ್ನು ತಿಂದರೆ ಪಚನ ಕ್ರಿಯೆ ಸರಾಗವಾಗಿ ಆಗುತ್ತದೆ ಹಾಗು ಮಲಬದ್ಧತೆ ನಿವಾರಿಸಿ, ಕರುಳನ್ನು ಇನ್ನಷ್ಟು ಆರೋಗ್ಯವಾಗಿರಿಸುತ್ತದೆ. ಮೆಂತ್ಯೆ ಸೊಪ್ಪು ಸೇವನೆಯಿಂದಾಗಿ ಪುರುಷರಲ್ಲಿ ಲೈಂಗಿಕ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ಆರೋಗ್ಯಕರವಾಗ ಲೈಂಗಿಕಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಮೆಂತ್ಯೆ ಸೊಪ್ಪು ಬಾಣಂತಿಯರಿಗೆ ತುಂಬಾ ಪ್ರಯೋಜನಕಾರಿ. ಬಾಣಂತಿಯರಿಗೆ ಎದೆ ಹಾಲು ಹೆಚ್ಚಿಸಲು ಈ ಸೊಪ್ಪು ಪ್ರಧಾನ ಪಾತ್ರ ನಿರ್ವಹಿಸುತ್ತದೆ. ಹಾಗಾಗಿ ವೈದ್ಯರು ಬಾಣಂತಿಯರಿಗೆ ಹೆಚ್ಚು ಮೆಂತ್ಯೆ ಸೊಪ್ಪು ಸೇವಿಸಲು ಸಲಹೆ ನೀಡುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾಮಾಕಲಾಪಂ ವಿಮರ್ಶೆ:ಅಭಿಮನ್ಯು ತಡಿಮೇಟಿ ಅವರ ಸಿನಿಮಾ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು;

Sat Feb 12 , 2022
ಅಭಿಮನ್ಯು ತಡಿಮೇಟಿಯ ಭಾಮಾಕಲಾಪದಲ್ಲಿ ಅನುಪಮಾ (ಹೊಳೆಯುವ ಪ್ರಿಯಾಮಣಿ) ಮತ್ತು ಶಿಲ್ಪಾ (ಸಂಪೂರ್ಣ ನೈಸರ್ಗಿಕ ಶರಣ್ಯ ಪ್ರದೀಪ್) ವಾಸಿಸುತ್ತಿದ್ದಾರೆ. ತಾಂತ್ರಿಕವಾಗಿ, ಅನುಪಮಾ ಮನೆಯ ಮಹಿಳೆಯಾಗಿ ಅಧಿಕಾರದ ಸ್ಥಾನದಲ್ಲಿದ್ದಾರೆ. ಅಪಾರ್ಟ್ ಮೆಂಟ್ ಸಮುಚ್ಚಯದ ಹಲವು ಮನೆಗಳಲ್ಲಿ ಕೆಲಸ ಮಾಡುವ ಮನೆ ಸಹಾಯಕಿ ಶಿಲ್ಪಾ. ಆದರೆ, ಅವರನ್ನು ಒಟ್ಟಿಗೆ ನೋಡಿ ಮತ್ತು ಇದು ಅಗತ್ಯದಿಂದ ಬೆಸೆದ ಬಂಧವಲ್ಲ, ನಿಜವಾದ ಪ್ರೀತಿ ಇದೆ ಎಂದು ನಿಮಗೆ ತಿಳಿದಿದೆ. ಚೆನ್ನಾಗಿ ಡ್ರೆಸ್ ಮಾಡಿಕೊಂಡಿರುವ ಅನುಪಮಾ ಒಳ್ಳೆಯ ಗಾಸಿಪ್ […]

Advertisement

Wordpress Social Share Plugin powered by Ultimatelysocial