ಮದ್ವೆಯಾಗಿದ್ದು ಹೆಂಡ್ತಿ ನಿಮ್ಮ ಅಮ್ಮನನ್ನು ನೋಡಿಕೊಳ್ಳುವುದಕ್ಕೋ ಅಥವಾ ನೀವು ಸಂಸಾರ ಮಾಡುವುದಕ್ಕೊ?

ಪ್ರಶ್ನೆ: ನಾನೊಬ್ಬ ಸರ್ಕಾರಿ ನೌಕರ ಮದುವೆಯಾಗಿ 1.5 ವರ್ಷ ಕಳೆದಿದೆ ನನ್ನ ತಾಯಿಯನ್ನು ನೋಡಿಕೊಳ್ಳಲು ನನ್ನ ಪತ್ನಿಗೆ ಇಷ್ಟ ಇಲ್ಲ ಅಷ್ಟೇ ಅಲ್ಲದೇ ನಮ್ಮ ಮನೆಯವರನೆಲ್ಲಾ ನೋಡಿದರೆ ಅಷ್ಟಕಷ್ಟೆ ನಾನು ಸದ್ಯಕ್ಕೆ ಕೆಲಸದ ಕಾರಣದಿಂದ ದೂರದ ಊರಿನಲ್ಲಿರುವೆ, ನಮ್ಮ ಮನೆಗೆ ಹೋಗಲು ಅವಳಿಗೆ ಇಷ್ಟವಾಗುವುದಿಲ್ಲ ಇದರಿಂದ ನಮ್ಮ ನಡುವೆ ಸಾಕಷ್ಟು ಮನಸ್ತಾಪಗಳು ಬಂದಿವೆ.

ನಾನು ಎಷ್ಟೇ ಸಮಧಾನದಿಂದ ಇದನೆಲ್ಲಾ ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.ಇದರಿಂದ ತುಂಬಾ ಬೇಸತ್ತಿದ್ದೇನೆ, ನನ್ನ ತಾಯಿ ಗಂಡನಿಲ್ಲದೆ ತುಂಬಾ ಕಷ್ಟಪಟ್ಟು ನಮ್ಮನ್ನು ಬೆಳೆಸಿದ್ದಾರೆ ಅವರ ಕೃಪೆಯಿಂದ ನಾನಿಂದು ಸರ್ಕಾರಿ ಸೇವೆಯಲ್ಲಿರುವೆ ಅವರನ್ನು ಬಿಟ್ಟು ನನ್ನ ಹೆಂಡತಿ ಜೊತೆ ಜೀವನ ನಡೆಸಲು ನನಗೆ ಇಷ್ಟವಿಲ್ಲ,ದಯವಿಟ್ಟು ಸಲಹೆ ನೀಡಿ..

ನನ್ನ ಪ್ರಶ್ನೆ ಏನೆಂದರೆ ಇದೇ ವಿಷಯವನ್ನು ಆಧಾರವಾಗಿರಿಸಿ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದೇ? ಮತ್ತು ನನಗೆ ಅವರಿಗೆ ಜೀವನಾಂಶವನ್ನು ನೀಡುವುದು ಕಡ್ಡಾಯವೇ? ಇದೇ ಕಾರಣ ನೀಡಿ ನಾನು ನಾನು ಜೀವನಾಂಶವನ್ನು ನೀಡಲು ನಿರಾಕರಿಸಬಹುದೇ? ಅವರೇ ಸ್ವತಃ ಜೀವನಾಂಶವನ್ನು ನಿರಾಕರಿಸಲು ಕಾನೂನಿನಲ್ಲಿ ಅವಕಾಶವಿದೆಯೇ?

ಉತ್ತರ: ನಿಮ್ಮ ಪತ್ನಿ ನಿಮ್ಮ ತಾಯಿಯ ಜತೆ ಸರಿಹೊಂದಿಕೊಂಡು ಹೋಗಲೇ ಬೇಕೆಂದು ನೀವು ಆಕೆಯನ್ನು ಒತ್ತಾಯಿಸಲು ಸಾಧ್ಯವಿಲ್ಲ.

ಪತಿ ಬೇರೆಲ್ಲೋ ಇರುವಾಗ ಪತಿಯ ತಾಯಿಯ ಜತೆ ಇರಬೇಕೆಂದು ಪತ್ನಿಯನ್ನು ಒತ್ತಾಯ ಮಾಡಲು ಆಗುವುದಿಲ್ಲ. ನೀವು ನಿಮ್ಮ ತಾಯಿಯನ್ನೂ ನಿಮ್ಮ ಪತ್ನಿಯನ್ನೂ ಇಬ್ಬರನ್ನೂ ಸರಿತೂಗಿಸಿಕೊಂಡು ಸಂಸಾರ ನಡೆಸಲು ಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ವಿಶ್ವಾಸ ಎಲ್ಲವೂ ಮೆಚ್ಚ ಬೇಕಾದದ್ದೇ. ಆದರೆ ಅದೇ ಪ್ರೀತಿಯನ್ನು ನಿಮ್ಮ ಪತ್ನಿಯೂ ನಿಮ್ಮ ತಾಯಿಗೆ ಕೊಡಬೇಕೆಂದು ಬಯಸಿದರೆ ಸಾಧ್ಯವಾಗದೇ ಹೋಗಬಹುದು. ಈ ಏಕೈಕ ಕಾರಣದಿಂದ ನಿಮಗೆ ವಿಚ್ಛೇದನ ಸಿಗುವುದು ಕಷ್ಟವಾಗಬಹುದು.

ನೀವು ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಆಕೆ ಜೀವನಾಂಶ ಕೇಳಬಹುದು. ಪ್ರಕರಣ ನಡೆಯುವಾಗಲೂ, ಅಥವಾ ವಿಚ್ಛೇದನವೇ ಆದರೂ, ನೀವು ನಿಮ್ಮ ಪತ್ನಿಗೆ ಜೀವನಾಂಶ ಕೊಡಲೇಬೇಕಾಗುತ್ತದೆ. ನಿಮ್ಮ ಸಂಬಳದಲ್ಲಿ ನಾಲ್ಕನೇ ಒಂದು ಭಾಗದಷ್ಟಾದರೂ ಆಕೆಗೆ ಹೋಗೇ ಹೋಗುವ ಸಾಧ್ಯತೆ ಇರುತ್ತದೆ.

ನಿಮ್ಮ ಪತ್ನಿಗೆ ಕೆಲಸ ಇದ್ದು ಸಾಕಷ್ಟು ಸಂಪಾದನೆ ಇದ್ದರೆ ಅಥವಾ ವಿಚ್ಛೇದನದ ನಂತರ ಆಕೆ ಮರುಮದುವೆ ಆದರೆ ಆಗ ಮಾತ್ರ ನೀವು ಜೀವನಾಂಶ ಕೊಡುವುದನ್ನು ನಿಲ್ಲಿಸಬಹುದು. ಪ್ರಕರಣ ದಾಖಲಿಸುವ ಬದಲು ಯಾರಾದರೂ ವಿವಾಹ ಸಂಧಾನಕಾರರ /ಕೌನ್ಸೆಲರ್ ಹತ್ತಿರ ಹೋಗಿ ನಿಮ್ಮ ಸಮಸ್ಯೆಯ ಬಗ್ಗೆ ಚರ್ಚಿಸಿ ಪರಿಹಾರ /ಸಲಹೆ ಪಡೆಯುವುದು ಒಳ್ಳೆಯದು. ನೀವು ಯಾರನ್ನೇ ಮದುವೆ ಆದರೂ ಈ ಸಮಸ್ಯೆ ಬರಬಹುದು.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು  ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ಪ್ರಶ್ನೆ: ನಾನೊಬ್ಬ ಸರ್ಕಾರಿ ನೌಕರ ಮದುವೆಯಾಗಿ 1.5 ವರ್ಷ ಕಳೆದಿದೆ ನನ್ನ ತಾಯಿಯನ್ನು ನೋಡಿಕೊಳ್ಳಲು ನನ್ನ ಪತ್ನಿಗೆ ಇಷ್ಟ ಇಲ್ಲ ಅಷ್ಟೇ ಅಲ್ಲದೇ ನಮ್ಮ ಮನೆಯವರನೆಲ್ಲಾ ನೋಡಿದರೆ ಅಷ್ಟಕಷ್ಟೆ ನಾನು ಸದ್ಯಕ್ಕೆ ಕೆಲಸದ ಕಾರಣದಿಂದ ದೂರದ ಊರಿನಲ್ಲಿರುವೆ, ನಮ್ಮ ಮನೆಗೆ ಹೋಗಲು ಅವಳಿಗೆ ಇಷ್ಟವಾಗುವುದಿಲ್ಲ ಇದರಿಂದ ನಮ್ಮ ನಡುವೆ ಸಾಕಷ್ಟು ಮನಸ್ತಾಪಗಳು ಬಂದಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಚಾಮರಾಜೇಂದ್ರ ಒಡೆಯರ್ ಹೆಸರಿಡಿ

Thu Jul 14 , 2022
ಬೆಂಗಳೂರು,ಜು.14- ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನಕ್ಕೆ ಚಾಮರಾಜೇಂದ್ರ ಒಡೆಯರ್ ಅವರ ಹೆಸರಿಡಬೇಕು ಎಂದು ಸಂಸದ ಪಿ.ಸಿ.ಮೋಹನ್ ಒತ್ತಾಯಿಸಿದ್ದಾರೆ.ಇಂದು ಬಿಬಿಎಂಪಿ ಕೇಂದ್ರ ಕಚೇರಿಗೆ ಆಗಮಿಸಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ನಂತರ ಅವರು ಸುದ್ದಿಗಾರರರೊಂದಿಗೆ ಮಾತನಾಡಿದರು. ಪುರಾತನ ನಗರವಾಗಿರುವ ಚಾಮರಾಜಪೇಟೆಯಲ್ಲಿ ಮೈದಾನ ಸಾರ್ವಜನಿಕರು ಮತ್ತು ಮಕ್ಕಳು ಆಟವಾಡಲು ಇರುವಂತಹ ಪ್ರದೇಶ. ಆದರೆ, ಕೆಲವರು ಸ್ವತ್ತಿಗಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಮೈದಾನ ಬಿಬಿಎಂಪಿ […]

Advertisement

Wordpress Social Share Plugin powered by Ultimatelysocial