ಮಾಸ್ಕ್​ ಕಡ್ಡಾಯ ಎಂಬ ನಿಯಮವನ್ನು ತೆಗೆದು ಹಾಕುವ ಬಗ್ಗೆ ರಾಜ್ಯ ಸರ್ಕಾರವು ಮಾಹಿತಿಯನ್ನು ಕೇಳುತ್ತಿದೆ

 

ಮಹಾರಾಷ್ಟ್ರವನ್ನು ಮಾಸ್ಕ್​ ಮುಕ್ತ ರಾಜ್ಯವನ್ನಾಗಿ ಮಾಡಲು ಉದ್ಧವ್​ ಠಾಕ್ರೆ ನೇತೃತ್ವದ ಸರ್ಕಾರವು ಕೇಂದ್ರ ಹಾಗೂ ರಾಜ್ಯದ ಟಾಸ್ಕ್​ ಫೋರ್ಸ್​ಗಳ ಸಲಹೆ ಮತ್ತು ಮಾಹಿತಿಯನ್ನು ಕೇಳಿದೆ ಎಂದು ಆರೋಗ್ಯ ಸಚಿವ ರಾಜೇಶ್​​ ಟೋಪೆ ಹೇಳಿದ್ದಾರೆ. ಮಾಸ್ಕ್​ ಕಡ್ಡಾಯ ಎಂಬ ನಿಯಮವನ್ನು ತೆಗೆದು ಹಾಕುವ ಬಗ್ಗೆ ರಾಜ್ಯ ಸರ್ಕಾರವು ಮಾಹಿತಿಯನ್ನು ಕೇಳುತ್ತಿದೆ ಎಂದು ಟೋಪೆ ಹೇಳಿದ್ದಾರೆ.ಇತ್ತೀಚಿನ ಕ್ಯಾಬಿನೆಟ್​ ಸಭೆಯಲ್ಲಿ ನಾವು ಮಹಾರಾಷ್ಟ್ರವನ್ನು ಮಾಸ್ಕ್​ ಮುಕ್ತ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಬ್ರಿಟನ್​ ಸೇರಿದಂತೆ ವಿವಿಧ ದೇಶಗಳು ತಮ್ಮ ರಾಷ್ಟ್ರದ ನಾಗರಿಕರಿಗೆ ಮಾಸ್ಕ್​ ಧರಿಸುವುದನ್ನು ನಿಲ್ಲಿಸುವಂತೆ ಹೇಳಿವೆ. ಇದನ್ನು ಅವರು ಹೇಗೆ ಸಾಧಿಸಿದರು ಎಂಬುದರ ಕುರಿತು ನಮಗೂ ಮಾಹಿತಿ ನೀಡುವಂತೆ ನಾವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಟಾಸ್ಕ್​ಫೋರ್ಸ್​ನ್ನು ವಿನಂತಿಸಿದ್ದೇವೆ ಎಂದು ಟೋಪೆ ಹೇಳಿದ್ದಾರೆ.ಕಳೆದ ಕೆಲವು ವಾರಗಳಲ್ಲಿ ಮಹಾರಾಷ್ಟ್ರವು ಕೋವಿಡ್​ ಮಾರ್ಗಸೂಚಿಯಲ್ಲಿ ಬಹುತೇಕ ಸಡಿಲಿಕೆಗಳನ್ನು ಮಾಡಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸಡಿಲಿಕೆಗಳನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಟೋಪೆ ಹೇಳಿದರು. ಇದರ ಅರ್ಥ ಮುಂದಿನ ದಿನಗಳಲ್ಲಿ ಮಾಸ್ಕ್​​ ಇಲ್ಲದೇ ಜನರು ಓಡಾಡಬಹುದು ಎಂದರ್ಥವಲ್ಲ ಎಂದು ಟೋಪೆ ಹೇಳಿದ್ದಾರೆ.ಮಾಸ್ಕ್​ ಕಡ್ಡಾಯದ ರೂಲ್ಸ್​ನ್ನು ಸಡಿಲಿಸುವ ಬಗ್ಗೆ ಸರ್ಕಾರ ಇನ್ನೂ ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಇನ್ನಷ್ಟು ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ಟೋಪೆ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಸ್ಥಾನ 10 ಮತ್ತು 12 ಬೋರ್ಡ್ ಪರೀಕ್ಷೆಗಳು 2022 ಮುಂದೂಡಲಾಗಿದೆ

Fri Feb 11 , 2022
  ರಾಜಸ್ಥಾನ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (RBSE) 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಘೋಷಿಸಿದೆ, ಅವು ಈಗ 24 ಮಾರ್ಚ್ 2022 ರಂದು ಪ್ರಾರಂಭವಾಗುತ್ತವೆ. ಪರೀಕ್ಷೆಗಳ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ ಆದರೆ ಅವುಗಳು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆರ್‌ಬಿಎಸ್‌ಇ ವಕ್ತಾರ ರಾಜೇಂದ್ರ ಗುಪ್ತಾ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದೂಡಲ್ಪಟ್ಟ ಪರೀಕ್ಷೆಗಳು 3 ಮಾರ್ಚ್ 2022 ರಿಂದ ಪ್ರಾರಂಭವಾಗಲಿವೆ 12 […]

Advertisement

Wordpress Social Share Plugin powered by Ultimatelysocial