ತ್ವಚೆಯ ಕಾಳಜಿ ವಿಷಯಕ್ಕೆ ಬಂದರೆ ಮಹಿಳೆಯರಷ್ಟೇ ಪುರುಷರೂ ತ್ವಚೆಯ ಆರೈಕೆಗೆ ಮಹತ್ವ ನೀಡಬೇಕಾಗುತ್ತದೆ.

ತ್ವಚೆಯ ಕಾಳಜಿ ವಿಷಯಕ್ಕೆ ಬಂದರೆ ಮಹಿಳೆಯರಷ್ಟೇ ಪುರುಷರೂ ತ್ವಚೆಯ ಆರೈಕೆಗೆ ಮಹತ್ವ ನೀಡಬೇಕಾಗುತ್ತದೆ. ಇಂದಿನ ಅಧುನಿಕ ಜಗತ್ತಿನಲ್ಲಿ ಪುರುಷರು ಸೌಂದರ್ಯ ಪ್ರಜ್ಞೆಯ ಕುರಿತು ಆಲೋಚಿಸುತ್ತಾರೆ ಹಾಗೂ ಅದಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸುತ್ತಾರೆ.ಬ್ಲಾಕ್ ಹೆಡ್, ವೈಟ್ ಹೆಡ್ ಮತ್ತು ಸತ್ತ ಜೀವಕೋಶಗಳು ನಿಮ್ಮ ತ್ವಚೆಯನ್ನು ಗಡುಸಾಗಿ ಕಾಣುವಂತೆ ಮಾಡಬಹುದು.ಇದನ್ನು ಮೃದುವಾಗಿಸಲು ಒಂದಷ್ಟು ಫೇಸ್ ಸ್ಕ್ರಬ್ ಗಳನ್ನು ಬಳಸಿ.ಫೇಸ್ ವಾಶ್ ಬಳಸಿ ನೀವು ಮುಖ ತೊಳೆಯುತ್ತಿದ್ದರೂ ಅವು ಚರ್ಮದ ಆಳದ ಕೊಳೆ ಮತ್ತು ಡೆಡ್ ಸೆಲ್ಸ್ ಗಳನ್ನು ತೆಗೆದು ಹಾಕುವುದಿಲ್ಲ. ಗಡ್ಡ ತೆಗೆಯುತ್ತಾ ಇರುವುದರಿಂದ ಉಂಟಾಗುವ ಗಡಸುತನ, ಗಾಯ, ಶೇವಿಂಗ್ ಕ್ರೀಮ್ ಗಳ ಅಡ್ಡ ಪರಿಣಾಮ ತಡೆಯಲು ಸ್ಕ್ರಬ್ ಗಳನ್ನು ಆಗಾಗ ಬಳಸುತ್ತಿರುವುದು ಒಳ್ಳೆಯದು. ಇದು ರೇಜರ್ನಿಂದಾದ ಸಮಸ್ಯೆಯನ್ನೂ ದೂರ ಮಾಡುತ್ತದೆ.ಈಗಾಗಲೇ ಮೊಡವೆ ಮೂಡಿದ್ದರೆ ಅದರ ಕಲೆಯನ್ನು ಹೋಗಲಾಡಿಸುತ್ತದೆ ಮತ್ತು ಮೊಡವೆ ಮೂಡದಂತೆ ನೋಡಿಕೊಳ್ಳುತ್ತದೆ. ಹಾಗೆಂದು ಸ್ಕ್ರಬ್ ನಿತ್ಯ ಬಳಸಬಾರದು. ವಾರಕ್ಕೊಮ್ಮೆ ಅಥವಾ ಹತ್ತು ದಿನಕ್ಕೊಮ್ಮೆ ಸ್ಕ್ರಬ್ ಹಚ್ಚಿ ಬಳಿಕ ಮುಖ ಸ್ವಚ್ಛಗೊಳಿಸಿದರೆ ಸಾಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಲ್ಲದಿದ್ದರೆ ಅಚ್ಚರಿಯಾಗುತ್ತಿತ್ತು: ಕಾಂಗ್ರೆಸ್ ಪಟ್ಟಿಯಿಂದ ಹೊರಗುಳಿದ ಮನೀಶ್ ತಿವಾರಿ

Sun Feb 6 , 2022
  ಮುಂಬರುವ ಪಂಜಾಬ್ ಚುನಾವಣೆಗೆ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕಾಂಗ್ರೆಸ್ ತನ್ನ ಹೆಸರನ್ನು ಕೈಬಿಟ್ಟ ಒಂದು ದಿನದ ನಂತರ, ಪಕ್ಷದ ಹಿರಿಯ ನಾಯಕ ಮನೀಶ್ ತಿವಾರಿ ಅವರು ಅವರನ್ನು ಸೇರಿಸಿದ್ದರೆ “ಆಹ್ಲಾದಕರ ಆಶ್ಚರ್ಯ” ಎಂದು ಶನಿವಾರ ಹೇಳಿದ್ದಾರೆ. ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದಕ್ಕೆ ಕಾರಣಗಳು ರಾಜ್ಯದ ರಹಸ್ಯವಲ್ಲ ಮತ್ತು ಸ್ವಲ್ಪ ಸಮಯದವರೆಗೆ ಸಾರ್ವಜನಿಕ ವ್ಯವಹಾರವಾಗಿದೆ ಎಂದು ಅವರು ಹೇಳಿದರು. ಫೆಬ್ರವರಿ 20 ರಂದು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ […]

Advertisement

Wordpress Social Share Plugin powered by Ultimatelysocial