ಮೆಟ್ರೋ ರೈಲಿನಲ್ಲಿ ರೂಲ್ಸ್ ಬ್ರೇಕ್ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು,

 

 

ಬೆಂಗಳೂರು, ಏಪ್ರಿಲ್ 17: ನಮ್ಮ ಬೆಂಗಳೂರು ಮೆಟ್ರೋ ರೈಲಿನಲ್ಲಿ ರೂಲ್ಸ್ ಬ್ರೇಕ್ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಿಯಮ ಉಲ್ಲಂಘನೆ ಪಟ್ಟಿಯನ್ನು ಬಿಎಂಆರ್‌ಸಿಎಲ್‌ ಸಂಸ್ಥೆ ಪ್ರಕಟಿಸಿದೆ. ಮದ್ಯಪಾನ ಮಾಡಿ ಪ್ರಯಾಣಿಸುವ
ಪ್ರಯಾಣಿಕರು, ನಿಯಮಗಳನ್ನು ಮೀರಿರುವ ಪ್ರಯಾಣಿಕರು ಹೀಗೆ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ತೊಂದರೆ ಕೊಡುವ ಪ್ರಯಾಣಿಕರ ಸೇರಿದಂತೆ ಒಟ್ಟು 1,852 ಪ್ರಕರಣಗಳು ದಾಖಲಾಗಿದೆ.

ಈ ಪೈಕಿ 4,18,445 ರೂ ದಂಡವನ್ನು ಸಂಗ್ರಹ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೋ ವರದಿಯಲ್ಲಿ ಹೇಳಿದೆ.

ಕಳೆದ ಹತ್ತು ವರ್ಷಗಳಿಂದ ಉಲ್ಲಂಘನೆಯ ಪ್ರಮುಖ ಪಟ್ಟಿಯನ್ನು‌ ಪ್ರಕಟಿಸಿರುವ ಬೆಂಗಳೂರಿನ ನಮ್ಮ ಮೆಟ್ರೋ ಈ ಬೃಹತ್ ನಗರದಲ್ಲಿ ಮೆಟ್ರೋ ಸಾರ್ವಜನಿಕರಿಗೆ ಹೆಚ್ಚಾಗಿ ಅನುಕೂಲ ಹೊಂದಿದೆ. ಆದರೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಮಧ್ಯೆ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾರೆ. ದಿನನಿತ್ಯ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರು ನಿಯಮಗಳನ್ನು ಉಲ್ಲಂಘನೆ ಮಾಡಿ ಪ್ರಯಾಣಿಸುತ್ತಾರೆ ಎಂದು ನಮ್ಮ ಮೆಟ್ರೋ ಹೇಳಿಕೊಂಡಿದೆ.

ಇನ್ನೂ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಮದ್ಯಪಾನ ಮಾಡಿ ಪ್ರಯಾಣ ಮಾಡುತ್ತಿದ್ದು ಹಲವು ಪ್ರಯಾಣಿಕರು ಮೆಟ್ರೋದಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ತೊಂದರೆ ನೀಡುತ್ತಿದ್ದರು ಎಂಬುದು ತಿಳಿದು ಬಂದಿದೆ. ಮೆಟ್ರೋ ರೈಲಿನಲ್ಲಿ ಇರುವ ನಿಯಮಗಳನ್ನು ಅತಿಕ್ರಮಣದಿಂದ ಉಲ್ಲಂಘನೆ ಮಾಡಿದವರು, ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಹಾಗೂ ನಿಯಮಗಳನ್ನು ಮೀರಿ ವರ್ತಿಸುವ ಜನರು ಈ ಪಟ್ಟಿಯಲ್ಲಿ ಸೇರಿದ್ದಾರೆ.

ಕಳೆದ ಹತ್ತು ವರ್ಷಗಳ ವರದಿ ಸಂಗ್ರಹಿಸಿರುವ ಬೆಂಗಳೂರು ಮೆಟ್ರೋದಲ್ಲಿ ಮದ್ಯಪಾನ ಮಾಡಿ ಮೆಟ್ರೋದಲ್ಲಿ ಪ್ರಯಾಣ ಮಾಡಿರುವ ಪ್ರಯಾಣಿಕರ ಸಂಖ್ಯೆಯು ಒಟ್ಟು 1712 ಜನರು ಕುಡಿದು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದರು ಇವರಿಂದ ಒಟ್ಟು 3, 35,755 ರೂ ದಂಡವನ್ನು ವಸೂಲಿ ಮಾಡಲಾಗಿದೆ.

ವೀಕೆಂಡ್ ಬರುತ್ತಿದ್ದಂತೆ ಮೆಟ್ರೋ ರೈಲಿನಲ್ಲಿ ಕುಡಿದು ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ ಜನರು ಕುಡಿದು ಬಂದು ಮೆಟ್ರೋ ಪ್ರಯಾಣ ಬೆಳಸಿದರೆ ಅಂತಹ ಜನರನ್ನು ಮೆಟ್ರೋದಲ್ಲಿ ಪ್ರವೇಶವನ್ನು ತಡೆಯಲು ನಮಗೆ ಸಾಧ್ಯವಾಗುತ್ತಿಲ್ಲ ಆದರೆ ಅವರ ಮೇಲೆ ಸಾಧ್ಯವಾದಷ್ಟು ಹೆಚ್ಚಿನ ನಿಗಾವಹಿಸಲಾಗುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲೋಕಸಭೆ ಚುನಾವಣೆಯನ್ನು ಮೋದಿ ಹೆಸರಿನಲ್ಲಿ ಗೆಲ್ಲುವುದು ಸುಲಭ.

Mon Apr 18 , 2022
  . ಆದರೆ ರಾಜ್ಯದ ಚುನಾವಣೆ ಅಷ್ಟು ಸುಲಭವಲ್ಲ” ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ್ದ ಹೇಳಿಕೆ ಈ ಹಿಂದೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ಕಾರ್ಯಕಾರಿಣಿಯಲ್ಲೂ ಅವರು ಇದೇ ಬಗೆಯ ಮಾತಾಡಿರುವುದು ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ ಹೊಸಪೇಟೆಯಲ್ಲಿ ಎರಡು ದಿನಗಳ‌ ಕಾಲ ನಡೆದ ಕಾರ್ಯಕಾರಿಣಿಯ ಹೈಲೆಟ್ಸ್ ಎಂದರೆ ಅದು ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ […]

Advertisement

Wordpress Social Share Plugin powered by Ultimatelysocial