ಇಂಜಿನಿಯರಿಂಗ್​ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಇಂಜಿನಿಯರಿಂಗ್​ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸ್ಪೀಡ್​ ಪೋಸ್ಟ್​ ಅಥವಾ ಕೊರಿಯರ್​ ಮೂಲಕ ಕಳುಹಿಸತಕ್ಕದ್ದು.

ಹುದ್ದೆಗಳ ವಿವರ: ಅಸಿಸ್ಟೆಂಟ್​ ಎಕ್ಸಿಕ್ಯೂಟಿವ್​ ಇಂಜಿನಿಯರ್​ (ಸೇಫ್ಟಿ ಆಯಂಡ್​ ಹೆಲ್ತ್​)-2, ಅಸಿಸ್ಟೆಂಟ್​ ಇಂಜಿನಿಯರ್​ (ಸೇಫ್ಟಿ ಆಯಂಡ್​ ಹೆಲ್ತ್​)- 4 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ವಯೋಮಿತಿ:ಅಸಿಸ್ಟೆಂಟ್​ ಎಕ್ಸಿಕ್ಯೂಟಿವ್​ ಇಂಜಿನಿಯರ್​ಗೆ 45 ವರ್ಷ, ಅಸಿಸ್ಟೆಂಟ್​ ಇಂಜಿನಿಯರ್​ಗೆ 40 ವರ್ಷ ನಿಗದಿಪಡಿಸಲಾಗಿದೆ. ಕನಿಷ್ಠ 5ರಿಂದ 8 ವರ್ಷ ವೃತ್ತಿ ಅನುಭವ ಕೇಳಲಾಗಿದೆ.

ಶೈಕ್ಷಣಿಕ ಅರ್ಹತೆ:ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಉನ್ನತ ಪದವಿ ಜತೆಗೆ ಇಂಡಸ್ಟ್ರಿಯಲ್​ನಲ್ಲಿ ಡಿಪ್ಲೊಮಾ ಪದವಿ ಅಥವಾ ಓಶಾ/ನೆಬೋಶ್​/ಸೇಫ್ಟಿ ಮ್ಯಾನೇಜ್​ಮೆಂಟ್​ ವಿಷಯದಲ್ಲಿ ತರಬೇತಿ ಪಡೆದಿರಬೇಕು. ಅಸಿಸ್ಟೆಂಟ್​ ಇಂಜಿನಿಯರ್​ಗೆ ಸಿವಿಲ್​, ಮೆಕ್ಯಾನಿಕ್​ನಲ್ಲಿ ಬಿಇ/ಬಿಟೆಕ್​ ಪದವಿ ಪಡೆದಿರಬೇಕು.

ವೇತನ:ಹುದ್ದೆಗಳಿಗೆ ಕ್ರಮವಾಗಿ 65,000 ರೂ. ಹಾಗೂ 50,000 ರೂ. ಇದೆ.

ಆಯ್ಕೆ ಪ್ರಕ್ರಿಯೆ:ಅರ್ಜಿ ಸಲ್ಲಿಸದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿ ಅನುಭವ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. 3 ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಲಾಲ್ ಮಾಂಸದ ವಿರುದ್ಧ ದಿಢೀರನೆ ಆರಂಭವಾಗಿರುವ ಜಟ್ಕಾ ಕಟ್

Tue Apr 19 , 2022
    ಹಲಾಲ್ ಮಾಂಸದ ವಿರುದ್ಧ ದಿಢೀರನೆ ಆರಂಭವಾಗಿರುವ ಜಟ್ಕಾ ಕಟ್ ಮತ್ತು ಹಿಂದವೀ ಮಾಂಸದಂಗಡಿಗಳಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಅನಧಿಕೃತವಾಗಿ ಆರಂಭಗೊಂಡ ಮಾಂಸದಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲವೇ ಅನುಮತಿ ಪಡೆದಿರಬೇಕು ಎಂದು ಬಿಬಿಎಂಪಿ ನೋಟಿಸ್ ನಲ್ಲಿ ತಿಳಿಸಿದೆ. ಒಂದು ವಾರದ ಅವಧಿಯಲ್ಲಿ ಶುಲ್ಕ ಪಾವತಿಸಿ ಅನುಮತಿ ಪ್ರಮಾಣ ಪತ್ರ ಪಡೆಯಬೇಕು. ಇಲ್ಲದಿದ್ದರೆ ಅಂಗಡಿಗಳನ್ನು ಮುಚ್ಚಬೇಕು ಎಂದು ಬಿಬಿಎಂಪಿ ಪಶುಪಾಲನೆ ಸಹಾಯಕ ನಿರ್ದೇಶಕರು ನೋಟಿಸ್ ಬಗ್ಗೆ ವಿವರಿಸಿದ್ದಾರೆ. ಕೋಳಿ ಮಾಂಸ […]

Advertisement

Wordpress Social Share Plugin powered by Ultimatelysocial