‘ಮಿಸ್ ಕ್ವೀನ್ ಆಫ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೂಂಡ ಕನ್ನಡತಿ ಸಮೃದ್ದಿ ಶೆಟ್ಟಿ.

ಣಪುರಂ ಫೈನಾನ್ಸ್ ಆಯೋಜಿಸಿದ್ದ ‘ಮಿಸ್ ಕ್ವೀನ್ ಆಫ್ ಇಂಡಿಯಾ’ ಸ್ಪರ್ಧೆಯಲ್ಲಿ ಕನ್ನಡತಿ ಸಮೃದ್ದಿ ವಿ ಶೆಟ್ಟಿ ‘ಮಿಸ್ ಕ್ವೀನ್ ಆಫ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕೇರಳದ ಕೊಚ್ಚಿಯಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ 30 ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು.

ಅಂತಿಮವಾಗಿ ಉಡುಪಿ ಮೂಲದ ಸಮೃದ್ದಿ ವಿ ಶೆಟ್ಟಿ ‘ಮಿಸ್ ಕ್ವೀನ್ ಆಫ್ ಇಂಡಿಯಾ’ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.

ಉಡುಪಿ ಮೂಲದ ಬಳ್ಳಾರಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ವಿಶ್ವನಾಥ್ ಶೆಟ್ಟಿ ಹಾಗೂ ಮಮತ ಶೆಟ್ಟಿ ಪುತ್ರಿ ಸಮೃದ್ದಿ ವಿ ಶೆಟ್ಟಿ. ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸಮೃದ್ದಿ ವಿ ಶೆಟ್ಟಿ ಬ್ಯೂಟಿ ಪ್ಯಾಜೆಂಟ್ ಆಗಿಯೂ ಪ್ಯಾಶನ್ ಮುಂದುವರೆಸಿದ್ದಾರೆ. ಮಿಸ್ ಕ್ವೀನ್ ಆಫ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿರುವ ಸಮೃದ್ದಿ ವಿ ಶೆಟ್ಟಿ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.

ನಾನು ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಅದರ ಜೊತೆಗೆ ಬ್ಯೂಟಿ ಪ್ಯಾಜೆಂಟ್ ಆಗಿಯೂ ಪ್ಯಾಶನ್ ಮುಂದುವರೆಸಿದ್ದೇನೆ. ಇದು ನನ್ನ ಐದನೇ ಬ್ಯೂಟಿ ಪ್ಯಾಜೆಂಟ್. ‘ಮಿಸ್ ಕ್ವೀನ್ ಆಫ್ ಇಂಡಿಯಾ’ದಲ್ಲಿ ಇಂಡಿಯಾವನ್ನು ಪ್ರತಿನಿಧಿಸಿದ್ದೆ. ದೇಶದ ಎಲ್ಲಾ ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ರು. ಕರ್ನಾಟಕದಿಂದ ನಾನು ಆಯ್ಕೆಯಾಗಿದ್ದೆ. ಸೋಮವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ‘ಮಿಸ್ ಕ್ವೀನ್ ಆಫ್ ಇಂಡಿಯಾ’ ಟೈಟಲ್ ವಿನ್ನರ್ ಆಗಿದ್ದೇನೆ ಎಂದು ಸಮೃದ್ದಿ ವಿ ಶೆಟ್ಟಿ ಸಂತಸ ಹಂಚಿಕೊಂಡಿದ್ದಾರೆ.

ಚಿತ್ರರಂಗದ ಎಂಟ್ರಿ ಬಗ್ಗೆ ಮಾತನಾಡಿರುವ ಸಮೃದ್ದಿ ವಿ ಶೆಟ್ಟಿ ಸದ್ಯ್ಕಕ್ಕೆ ಸಿನಿಮಾ ನಟನೆ ಬಗ್ಗೆ ಆಲೋಚನೆ ಇಲ್ಲ. ಒಳ್ಳೆಯ ಸ್ಕ್ರಿಫ್ಟ್ ಬಂದರೆ ಖಂಡಿತ ನಟಿಸುತ್ತೇನೆ. ನಾನು ವರ್ಕ್ ಕೂಡ ಮಾಡ್ತಿರೋದ್ರಿಂದ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. ಮಗಳ ಸಾಧನೆ ಬಗ್ಗೆ ಪೋಷಕರು ಕೂಡ ಸಂತಸ ವ್ಯಕ್ತಪಡಿಸಿದ್ದು ಎಲ್ಲಾ ಅವಳ ಎಫರ್ಟ್ ನಾವು ಸಪೋರ್ಟ್ ಮಾಡಿದ್ದೇವೆ ಅಷ್ಟೇ. ಆಕೆಯ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಷ್ಠಾವಂತ ಪೊಲೀಸ್ ಅಧಿಕಾರಿ ಟಿ.ಎಂ.ತಾಜುದ್ದೀನ್ ವರ್ಗಾವಣೆ.

Thu Jan 19 , 2023
ಚಾಮರಾಜನಗರ ತಾಲ್ಲೂಕಿನ ಸಂತೇಮರಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಾಜುದ್ದೀನ್ ರವರನ್ನು ಕುದೇರು ಠಾಣೆಗೆ ವರ್ಗಾವಣೆ ಮಾಡಿದ್ದೂ ಜನ ಸಾಮಾನ್ಯರಿಗೆ ಬೇಸರ ಉಂಟಾಗಿದೆ. ಇವರು ತಮ್ಮ ಕರ್ತವ್ಯದಲ್ಲಿ ಸಂತೆ ಮರಳಿ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಪ್ಲಾಟಿನ ಕಳ್ಳತನವಾದಾಗ ಆಸ್ಪತ್ರೆಯ ಸಿಬ್ಬಂದಿಗಳ ಸಹಕಾರದೊಂದಿಗೆ 24 ಗಂಟೆ ಒಳಗೆ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗುತ್ತಿದ್ದ ಬೈಕ್ ಹಾಗೂ ಹಲವು ಕೃಷಿ ಉಪಕರಣಗಳನ್ನು ಪತ್ಯ ಹಚ್ಚಿದ್ದಾರೆ ಠಾಣೆಯ ಪರಿಸರ ಸ್ನೇಹಿ ಜನಸ್ನೇಹಿ […]

Advertisement

Wordpress Social Share Plugin powered by Ultimatelysocial