ನಿಷ್ಠಾವಂತ ಪೊಲೀಸ್ ಅಧಿಕಾರಿ ಟಿ.ಎಂ.ತಾಜುದ್ದೀನ್ ವರ್ಗಾವಣೆ.

ಚಾಮರಾಜನಗರ ತಾಲ್ಲೂಕಿನ ಸಂತೇಮರಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಾಜುದ್ದೀನ್ ರವರನ್ನು ಕುದೇರು ಠಾಣೆಗೆ ವರ್ಗಾವಣೆ ಮಾಡಿದ್ದೂ ಜನ ಸಾಮಾನ್ಯರಿಗೆ ಬೇಸರ ಉಂಟಾಗಿದೆ.

ಇವರು ತಮ್ಮ ಕರ್ತವ್ಯದಲ್ಲಿ ಸಂತೆ ಮರಳಿ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಪ್ಲಾಟಿನ ಕಳ್ಳತನವಾದಾಗ ಆಸ್ಪತ್ರೆಯ ಸಿಬ್ಬಂದಿಗಳ ಸಹಕಾರದೊಂದಿಗೆ 24 ಗಂಟೆ ಒಳಗೆ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗುತ್ತಿದ್ದ ಬೈಕ್ ಹಾಗೂ ಹಲವು ಕೃಷಿ ಉಪಕರಣಗಳನ್ನು ಪತ್ಯ ಹಚ್ಚಿದ್ದಾರೆ

ಠಾಣೆಯ ಪರಿಸರ ಸ್ನೇಹಿ ಜನಸ್ನೇಹಿ ಹಾಗೂ ಸ್ನೇಹಿತನಾಗಿ ಬದಲಾಯಿಸುವಲ್ಲಿ ಪಿಎಸ್ಐ ತಾಜುದ್ದೀನ್ ರವರ ಪಾತ್ರ ಪ್ರಮುಖವಾಗಿದೆ

ಠಾಣೆಯ ಸುತ್ತ ಗಿಡಗಳನ್ನು ನೆಟ್ಟು ಗಾರ್ಡನ್ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸವನ್ನು ಮಾಡಲಾಗಿದೆ

ಜಿಲ್ಲೆಯಲ್ಲಿನ ವಿವಿಧ ಠಾಣೆಗಳಲ್ಲಿ ಕೊಲೆ ಸುಲಿಗೆ ಹಾಗೂ ರಾಜ್ಯದ್ಯಂತ ೧೪ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿದ್ದ ರಫೀಕ್ ಎನ್ನುವ ಆರೋಪಿಯನ್ನು ಆಂಧ್ರಪ್ರದೇಶದ ಗಡಿಯಲ್ಲಿ ದಸ್ತಿಗಿರಿ ಮಾಡಿ ಜೈಲಿಗಟ್ಟಿದ ಕೀರ್ತಿ ತಾಜುದ್ದೀನ್ ರವರದ್ದಾಗಿದೆ

ಒಟ್ಟಾರೆಯಾಗಿ ಪಿಎಸ್ಐ ತಾಜುದ್ದೀನ್ ರವರ ಜನಸ್ನೇಹಿ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತ ವಾಗಿದ್ದು ಇವರ ವರ್ಗಾವಣೆ ಯಿಂದ ಬೇಸರ ಉಂಟಾಗಿದೆ ಎಂದು ಠಾಣೆ ವ್ಯಾಪ್ತಿಯ ಸಾರ್ವಜನಿಕರು ತಿಳಿಸಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ಷಣ ಮಾತ್ರದಲ್ಲಿ ತಲೆನೋವಿನಿಂದ ಪರಿಹಾರ ನೀಡುತ್ತದೆ ಈ ಮನೆ ಮದ್ದು.

Thu Jan 19 , 2023
ಬೆಂಗಳೂರು : ತಲೆನೋವಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮಿನ ಜೊತೆಗೆ ತಲೆನೋವಿನ ಸಮಸ್ಯೆ ಕೂಡಾ ಬಾಧಿಸುತ್ತದೆ. ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ತಲೆನೋವಿನ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಈ ಮನೆಮದ್ದುಗಳ ಸಹಾಯದಿಂದ ಆಗಾಗ ಬರುವ ತಲೆನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ತಲೆನೋವಿನಿಂದ ಮುಕ್ತಿ ಪಡೆಯುವುದು ಹೇಗೆ? ತಲೆನೋವಿನ ಸಮಸ್ಯೆಯನ್ನು ಕಡಿಮೆ ಮಾಡಲು, ಈ ಕೆಳಗಿನ ಸುಲಭವಾದ ಮನೆಮದ್ದುಗಳನ್ನು ಬಳಸಬಹುದು. ಸೇಬು ಮತ್ತು ಉಪ್ಪು : […]

Advertisement

Wordpress Social Share Plugin powered by Ultimatelysocial