ಪ್ರಧಾನಿ ಮೋದಿಯನ್ನ ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ ಕುನಾಲ್.

ನನಗೆ ಪ್ರಧಾನಿ ಮೋದಿ ಅಂದರೆ ಬಹಳ ಪ್ರೀತಿ. ಈ ಹಿನ್ನೆಲೆ ಪ್ರಧಾನಿ ಮೋದಿಗೆ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳನ್ನ ನೋಡಬೇಕೆಂಬ ಆಸೆ ಇತ್ತು ಎಂದು ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಗೆ ಹಾರ ಹಾಕಲು ಯತ್ನಿಸಿದ್ದ ಬಾಲಕ ಮನದಾಳದ ಮಾತು .‌ ಗುರುವಾರ ಪ್ರಧಾನಿ ನರೇಂದ್ರ ಮೋದಿಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನಕ್ಕೆ ವಾಹನದಲ್ಲಿ ಹೋಗವ ವೇಳೆ ಪ್ರಧಾನಿಗೆ ಬಾಲಕನೋರ್ವ ಹಾರ ಹಾಕಲು ಯತ್ನಿಸಿದ್ದ ಘಟನೆಗೆ ಸಂಬಂಧಿಸಿದಂತೆ ಬಾಲಕ ಕುನಾಲ್ ಧೋಂಗಡಿ ಸಾಕಷ್ಟು ಸಂತಸ ಪಟ್ಟಿದ್ದು ನನಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನಷ್ಟು ಹತ್ತಿರದಿಂದ ನೋಡಬೇಕು ಹಾಗೂ ಅವರನ್ನು ಮನೆಗೆ ಕರೆಯುವುದು ಮತ್ತು ಅವರ ಭಾಷಣದಿಂದ ಫೀದಾ ಆಗಿದ್ದೇನೆ ಅಂತಾ ಕುನಾಲ್ ಧೋಂಗಡಿ ತನ್ನ
ಮನದಾಳವನ್ನು ಹಂಚಿಕೊಂಡಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂದರೆ ಬಹಳ ಪ್ರೀತಿ. ಹೀಗಾಗಿ ಪ್ರಧಾನಿ ಮೋದಿ ನೋಡಲು ನನ್ನ ಅಜ್ಜ, ಮಾವ, ಎರಡುವರೆ ವರ್ಷದ ಮಗು ಜೊತೆ ಹೋಗಿದ್ವಿ‌. ಮಗುಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಡ್ರೆಸ್ ಹಾಕಿಸಿದ್ವಿ, ಮಗು ಕಡೆಯಿಂದ ಪ್ರಧಾನಿಗಳಿಗೆ ಹಾರ ಕೊಡಿಸಬೇಕು ಅಂತ ಅಂದುಕೊಂಡಿದ್ವಿ. ಆದರೆ ಸಾಧ್ಯವಾಗಲಿಲ್ಲ. ಹೀಗಾಗಿ ನಾನೇ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳಿಗೆ ಶೇಕ್​ ಹ್ಯಾಂಡ್​ ಮಾಡಬೇಕೆಂಬ ಆಸೆ ಇತ್ತು, ಆದರೆ ಪೊಲೀಸರು ನನ್ನನ್ನು ತಡೆದರು ಎಂದು ಹೇಳಿದ್ದಾನೆ.ನಾನು ಅವರನ್ನ ಭೇಟಿ ಆಗಬೇಕು, ಹತ್ತಿರದಿಂದ ನೋಡಬೇಕೆಂದು ಆಸೆ ಇತ್ತು. ಮೋದಿ ಮನುಷ್ಯರ ಅಲ್ಲ, ಅವರು ದೇವರು ಹಾಗಾಗಿ ನಾನು ಅವರನ್ನು ನೊಡೋಕೆ ಹೋಗಿದ್ದೆ. ನನಗೆ ಅವರ ಎಡಗೈ ಟಚ್ ಆಗಿದೆ. ಹಾರ ತೆಗೆದುಕೊಂಡರು. ನಾನು 2 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಧಾರವಾಡಕ್ಕೆ ಬಂದಾಗ ನೋಡಿದ್ದೆ. ಈಗ ಮತ್ತೆ ಮೋದಿ ಬರುವ ವಿಚಾರ ತಿಳಿದು ನೋಡಲು ಹೋಗಿದ್ದೆ. ಪ್ರಧಾನಿ ಮೋದಿ ಮೇಲೆ ನನಗೆ ಬಹಳ ಅಭಿಮಾನ ಇದೆ. ಪ್ರಧಾನಿ ನರೇಂದ್ರ ಮೋದಿ ಜತೆ ಮಾತನಾಡಬೇಕು ಎಂಬ ಆಸೆ ಇದೆ ಎಂದರು. ಇನ್ನು ಎಸ್ ಎಸ್ ಕೆ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿ, ಕುಮಾನ್ ದೋಂಗಡಿ ಒಬ್ಬ ಉತ್ಸಾಹಿ ಬಾಲಕ ಯಾವುದೇ ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆ ತೊಂದರೆ ಆಗಲಿಕ್ಕೆ ಹೋಗಿಲ್ಲ ಆತ ಅಪ್ಪಟ ನರೇಂದ್ರ ಮೋದಿ ಅವರ ಅಭಿಮಾನಿ ಆಗಿದ್ದು ನಮ್ಮ ಸಮಾಜದ ಹುಡುಗಾ ಎನ್ನುವ ಕಾರಣಕ್ಕೆ ನನಗೆ ಖುಷಿ ಆಗಿದೆ. ಆದ್ರೆ ಪೊಲೀಸ್ ಭದ್ರ ಕೊಟೆ ಬೇದಿಸಿದ್ದು ತಪ್ಪು. ಏನಾದರೂ ಕುನಾಲ್ ದೋಂಗಡಿಯಿಂದ ತೊಂದರೆ ಆಗಿದ್ದರೆ ಕ್ಷಮೇ‌ ಇರಲಿ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟ

Fri Jan 13 , 2023
ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟ(ರಿ) ಬೆಂಗಳೂರು ಮತ್ತು ಪೂಜ್ಯ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ ಮತ್ತು ಬಂಜಾರ, ಕೊರಚ, ಕೊರಮ ಮತ್ತು ವಿವಿಧ ಜಾತಿ ಮಠಾಧೀಶರ ನೇತೃತ್ವದಲ್ಲಿ ನಡೆದ ಸಂವಿಧಾನ ವಿರೋಧಿ ಅಂಶಗಳನ್ನು ಒಳಗೊಂಡಿರುವ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ವಿರೋಧಿಸಿ, ಕಲಬುರಗಿ ಜಿಲ್ಲೆಯ ವಕೀಲರಾದ ಶ್ರೀ ರವಿಚಂದ್ರ ಗುತ್ತೇದಾರ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಂಘ (ರಿ). ರವರ ನೇತೃತ್ವದಲ್ಲಿ ನೂರಾರು […]

Advertisement

Wordpress Social Share Plugin powered by Ultimatelysocial