ಮೇ 16ರಂದು ನರೇಂದ್ರ ಮೋದಿ ನೇಪಾಳ ಪ್ರವಾಸ

 

ನವದೆಹಲಿ, ಮೇ 04; ಯುರೋಪ್ ದೇಶಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾತ್ರಿ ದೆಹಲಿಗೆ ವಾಪಸ್ ಆಗಲಿದ್ದಾರೆ. ಮೇ 16ರಂದು ಅವರು ನೇಪಾಳ ಪ್ರವಾಸ ಕೈಗೊಂಡಿದ್ದಾರೆ.

ಗೌತಮ ಬುದ್ಧನ ಜನ್ಮಸ್ಥಳ ಲುಂಬಿನಿಗೆ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರವಾಸಕ್ಕೆ ತೆರಳುತ್ತಿದ್ದಾರೆ.

ನೇಪಾಳದ ಪ್ರಧಾನ ಮಂತ್ರಿಗಳ ಕಚೇರಿ ಮೋದಿ ಭೇಟಿ ಬಗ್ಗೆ ಬುಧವಾರ ಮಾಹಿತಿ ನೀಡಿದೆ.

2022ರಲ್ಲಿ ಪ್ರಧಾನಿ ಮೋದಿ ಮೊದಲ ವಿದೇಶ ಪ್ರವಾಸ ಯುರೋಪಿಯನ್ ದೇಶಗಳಿಗೆ ಆಗಿದೆ. ಜರ್ಮನಿ, ಡೆನ್ಮಾರ್ಕ್ ಪ್ರವಾಸ ಮುಗಿಸಿ ಬುಧವಾರ ರಾತ್ರಿ ಮೋದಿ ಫ್ರಾನ್ಸ್‌ಗೆ ಆಗಮಿಸಿದ್ದಾರೆ.

ಮೇ ತಿಂಗಳಿನಲ್ಲಿ ನರೇಂದ್ರ ಮೋದಿ ಮೂರು ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಯುರೋಪಿಯನ್ ದೇಶಗಳು, ನೇಪಾಳದ ಬಳಿಕ ಮೇ 23, 24ರಂದು ಮೋದಿ ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ.

ನೇಪಾಳದಲ್ಲಿ ನರೇಂದ್ರ ಮೋದಿ ಕೆಲವು ಗಂಟೆಗಳ ಕಾಲ ಮಾತ್ರ ಇರಲಿದ್ದಾರೆ. ಲುಂಬಿನಿಗೆ ಭೇಟಿ ನೀಡಿ ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಆಗಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಳೆಯಿಂದ ಧರೆಗೆ ಉರುಳಿದ ಮರಗಳು!

Thu May 5 , 2022
ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಉತ್ತಮ ಮಳೆಯಾಗಿದೆ. ಬಿರುಗಾಳಿ ಸಹಿತ ಸುರಿದ ಮಳೆಗೆ ನಗರವೂ ಸೇರಿ ಹಲವೆಡೆ ಮರ, ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ. ಮಂಗಳವಾರ ತಡರಾತ್ರಿ ಆರಂಭವಾದ ಮಳೆ ನಸುಕಿನವರೆಗೆ ಸುರಿಯಿತು. ಗುಡುಗು, ಮಿಂಚು, ಬಿರುಗಾಳಿ ಸಹಿತ ಸುರಿದ ಮಳೆಯಿಂದ ಮರ, ರಂಬೆಕೊಂಬೆಗಳು ಮುರಿದು ಬಿದ್ದವು. ಚಿತ್ರದುರ್ಗ ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿ ಮೂರು ಮರಗಳು ಬುಡಸಹಿತ ಉರುಳಿಬಿದ್ದಿವೆ. ಇದರೊಂದಿಗೆ ವಿದ್ಯುತ್‌ ಕಂಬಗಳು […]

Advertisement

Wordpress Social Share Plugin powered by Ultimatelysocial