ಮೈಸೂರಿಗೆ ಪ್ರಧಾನಿ ಮೋದಿ, ಜೂ. 21 ರಂದು ಯೋಗ ದಿನಾಚರಣೆಯಲ್ಲಿ ಭಾಗಿ

 

ಮೈಸೂರು: ಜೂನ್ 21 ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ.

ಮೈಸೂರು ಸಂಸದ ಪ್ರತಾಪಸಿಂಹ ಈ ಬಗ್ಗೆ ಪ್ರಧಾನಿಯವರಿಗೆ ಮನವಿ ಮಾಡಿದ್ದು, ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೋದಿ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ವಿಶ್ವಸಂಸ್ಥೆಯ ನಿರ್ಣಯವನ್ನು ಅಂಗೀಕರಿಸುವಂತೆ ಮಾಡುವುದು ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಜನಪ್ರಿಯಗೊಳಿಸಲು ಮೋದಿಯವರ ಕೊಡುಗೆ ಮಹತ್ವದ್ದಾಗಿದೆ. ಪ್ರಪಂಚದಾದ್ಯಂತ 190 ಕ್ಕೂ ಹೆಚ್ಚು ದೇಶಗಳು ಪ್ರತಿ ವರ್ಷ ಜೂನ್ 21 ರಂದು ಯೋಗ ದಿನಾಚರಣೆ ಆಚರಿಸುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಯಸಿಡ್‌ ಹಾಕಿಬಂದೆ, ಪೊಲೀಸ್ರಿಗೆ ಇನ್ನೂ ಗೊತ್ತಾಗಿಲ್ಲ, ಪ್ಲೀಸ್ ಬೇಲ್‌ ಕೊಡಿಸಿ!

Sun May 15 , 2022
ಬೆಂಗಳೂರು: ಯುವತಿ ಪ್ರೀತಿಸಲು ನಿರಾಕರಿಸಿದಳು ಎನ್ನುವ ಕಾರಣಕ್ಕೆ ಆಯಸಿಡ್‌ ದಾಳಿ ಮಾಡಿ, ತಮಿಳುನಾಡಿನ ತಿರುವಣ್ಣಾಮಲೈಗೆ ಪರಾರಿಯಾಗಿ ಆಶ್ರಮವೊಂದರಲ್ಲಿ ಸೇರಿಕೊಂಡು ಸ್ವಾಮೀಜಿ ವೇಷ ಹಾಕಿಕೊಂಡಿದ್ದ ನಾಗೇಶ್‌ ಪೊಲೀಸರಿಗೆ ಒಂದೊಂದೇ ವಿಷಯ ಬಾಯಿ ಬಿಡುತ್ತಿದ್ದಾನೆ. ತಾನು ಯುವತಿಗೆ ಆಯಸಿಡ್‌ ಹಾಕಿದ್ದಕ್ಕೆ ಆಕೆಯೇ ಕಾರಣ, ಘಟನೆ ಹಿಂದಿನ ದಿನ ಬಾಯಿ ಮಾತಿಗೆ ಆಯಸಿಡ್ ಹಾಕ್ತೀನಿ ಎಂದು ಯುವತಿಗೆ ಹೇಳಿದ್ದೆ. ಆದರೆ, ಯುವತಿ ಅದನ್ನು ಅವರ ತಂದೆಗೆ ಹೇಳಿದಳು. ಬಳಿಕ ಅವರ ತಂದೆ ನನ್ನ ಅಣ್ಣನಿಗೆ […]

Advertisement

Wordpress Social Share Plugin powered by Ultimatelysocial