ಬಾಯಿ ವಾಸನೆ ಹೋಗಲಾಡಿಸಲು ಇಲ್ಲಿದೆ ʼಮನೆ ಮದ್ದುʼ

ಕೆಲವರಿಗೆ ಬಾಯಿಯಿಂದ ದುರ್ವಾಸನೆ ಹೊರ ಹೊಮ್ಮುತ್ತಿರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು ಆದರೆ ನಮ್ಮ ಸಮೀಪ ಬರುವ ಇನ್ನೊಬ್ಬ ವ್ಯಕ್ತಿಗೆ ಇದು ಅಸಹ್ಯ ಎನಿಸಬಹುದು. ಹಾಗಾಗಿ ನಮ್ಮ ಉಸಿರನ್ನು ತಾಜಾವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ನೀವು ಸೇವಿಸುವ ಆಹಾರದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಉಪ್ಪಿನಕಾಯಿ, ಮಸಾಲೆ ಹೆಚ್ಚಿದ್ದರೆ ಮರುದಿನ ನಿಮ್ಮ ಉಸಿರು ಕೆಟ್ಟ ವಾಸನೆಯಿಂದ ಕೂಡಿರಬಹುದು ಇದರ ನಿವಾರಣೆಗೆ ಹೀಗೆ ಮಾಡಿ.

ಮಸಾಲೆ ವಸ್ತುಗಳನ್ನು ದಿನವಿಡೀ ತಿನ್ನಬೇಡಿ. ಗ್ರೀನ್ ಟೀ ಕುಡಿಯಿರಿ. ಇದು ಕೆಟ್ಟ ವಾಸನೆಯ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ.

ಹೊರಗಿನವರೊಂದಿಗೆ ಸಂಪರ್ಕಕ್ಕೆ ಬರುವ ಮುನ್ನ ತುಳಸಿ ಹಾಗೂ ಪುದಿನಾ ಎಲೆಯನ್ನು ಜಗಿಯಿರಿ. ಇದರಿಂದ ಬಾಯಿಯ ವಾಸನೆಯನ್ನು ತಪ್ಪಿಸಬಹುದು.

ಮೌತ್ ವಾಶ್ ಬಳಸಿ. ದಿನಕ್ಕೆರಡು ಬಾರಿ ಬ್ರಶ್ ಮಾಡಿ. ಊಟದ ಬಳಿಕ ಮೂವತ್ತು ಸೆಕೆಂಡ್ ಕಾಲ ಬಾಯಿ ಮುಕ್ಕಳಿಸಿ. ಸೇಬು ಕ್ಯಾರೆಟ್ ಮೊದಲಾದ ವಸ್ತುಗಳನ್ನು ಹಲ್ಲಿನ ಸಹಾಯದಿಂದಲೇ ಜಗಿದು ತಿನ್ನಿ. ಇವುಗಳಿಂದಲೂ ಬಾಯಿಯ ವಾಸನೆ ಕಡಿಮೆಯಾಗುತ್ತದೆ.

ಪದೇ ಪದೇ ನೀರು ಕುಡಿಯಿರಿ. ಮಲಗಿ ಎದ್ದಾಕ್ಷಣ ಮರೆಯದೆ ಬಾಯಿ ತೊಳೆಯಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರ ಸರ್ಕಾರದ ಅಂಗಳಕ್ಕೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ' : ಶೀಘ್ರವೇ ಸಿಎಂಗಳ ಜೊತೆಗೆ ಅಮಿತ್ ಶಾ ಸಭೆ!

Sat Dec 10 , 2022
ನವದೆಹಲಿ : ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಇದೀಗ ಕೇಂದ್ರ ಸರ್ಕಾರದ ಅಂಗಳ ತಲುಪಿದ್ದು, ಶೀಘ್ರವೇ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ, ಮಹಾರಾಷ್ಟ್ರ ಸಿಎಂಗಳ ಜೊತೆಗೆ ಸಭೆ ನಡೆಸಲಿದ್ದಾರೆ.ಗಡಿ ವಿವಾದ ಸಂಬಂಧ ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೂರು ನೀಡಿದೆ. ಕರ್ನಾಟಕದಲ್ಲಿ ಮಹಾರಾಷ್ಟ್ರದವರ ಮೇಲೆ ದಾಳಿಗಳು ನಡೆಯುತ್ತಿವೆ. ಕೂಡಲೇ ಅವರ ರಕ್ಷಣೆಗೆ ಕರ್ನಾಟಕದ ಸಿಎಂಗೆ ಸೂಚಿಸಬೇಕು ಎಂದು ಹೇಳಿದೆ.ಇನ್ನು ಕರ್ನಾಟಕ-ಮಹಾರಾಷ್ಟ್ರ ಗಡಿ […]

Advertisement

Wordpress Social Share Plugin powered by Ultimatelysocial