ಒಂದೇ ವೇದಿಕೆ ಮೇಲೆ ಕಿಚ್ಚ ಸುದೀಪ್-ದರ್ಶನ್ ಸಹೋದರ.

ರ್ನಾಟಕ ಚಲನಚಿತ್ರ ಕಪ್ ಕಳೆದ ಎರಡು ಸೀಸನ್ ಯಶಸ್ವಿಯಾಗಿ ನಡೆದಿದೆ. ಈಗ ಮೂರನೇ ಸೀನಸ್‌ಗೆ ಮುಂದಾಗಿದೆ. ಈ ಬಾರಿ ಕಳೆದ ಎರಡು ಸೀಸನ್‌ಗಿಂತ ಅದ್ದೂರಿಯಾಗಿ ನಡೆಯುತ್ತೆ ಅನ್ನೋ ಸುಳಿವು ನೋಡಿದ್ದಾರೆ.

ಅದಕ್ಕಾಗಿಯೇ ಕೆಸಿಸಿ ಕಮಿಟಿ ಪ್ರೆಸ್‌ಮೀಟ್ ಕರೆದಿತ್ತು.

ಈ ವೇಳೆ ವೇದಿಕೆ ಮೇಲೆ ಕಿಚ್ಚ ಸುದೀಪ್ ಹಾಗೂ ಚಿತ್ರರಂಗ ನಟ, ನಿರ್ದೇಶಕ ಹಾಗೂ ನಿರ್ಮಾಪಕರು ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ದರ್ಶನ್ ಜೊತೆ ದಿನಕರ್ ತೂಗುದೀಪ ಕೂಡ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಚಿಕ್ಕದೊಂದು ಸಂಭಾವಣೆ ಕೂಡ ನಡೆದಿದೆ.

ಕಳೆದ ಸೀಸನ್‌ನಲ್ಲಿ ದಿನಕರ್ ತೂಗುದೀಪ ಗೈರಾಗಿದ್ದರು. ಆದರೆ, ಈ ಬಾರಿ ಮೆಂಟರ್‌ ಕಮ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದ ದಿನಕರ್ ಮಾತಾಡಲು ಸಮಯ ತೆಗೆದುಕೊಂಡಾಗ, ಕಿಚ್ಚ ಸುದೀಪ್ ಮಧ್ಯೆ ಪ್ರವೇಶಿಸಿದ್ದರು. ಆ ವೇಳೆ ಇಬ್ಬರ ನಡುವೆ ನಡೆದ ಸಂಭಾಷಣೆ ಏನು? ಅನ್ನೋ ಕುತೂಹಲ ಇಲ್ಲಿದೆ.

ಕೆಸಿಸಿ ವೇದಿಕೆ ಮೇಲೆ ಸುದೀಪ್-ದಿನಕರ್ಇತ್ತೀಚೆಗೆ ಸ್ಯಾಂಡಲ್‌ವುಡ್ ಕುಚಿಕುಗಳು ಒಂದಾಗಿಬಿಟ್ರು ಅಂತ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ಸುದೀಪ್ ಬಗ್ಗೆ ಪತ್ರಕ್ಕೆ ದರ್ಶನ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಈ ಬೆಳವಣಿಗೆಯ ಬಳಿಕ ಸುದೀಪ್ ಜೊತೆ ದಿನಕರ್ ತೂಗುದೀಪ ಕಾಣಿಸಿಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ಕಪ್ ಸೀಸನ್ 3ನಲ್ಲಿ ಮೆಂಟರ್ ಕಮ್ ಪ್ಲೇಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಕಿಚ್ಚ ಹಾಗೂ ದಿನಕರ್ ನಡುವೆ. ಕೆಸಿಸಿ ಸೀಸನ್ 3ನಲ್ಲಿ ದಿನಕರ್ ತೂಗುದೀಪ ಭಾಗವಹಿಸುತ್ತಿದ್ದು, ವೇದಿಕೆ ಮೇಲೆ ಕಿಚ್ಚ ಸುದೀಪ್ ಹಾಗೂ ಕೆಸಿಸಿ ಬಗ್ಗೆ ಮಾತಾಡಿದ್ದಾರೆ. “ಫಸ್ಟ್ ಸೀಸನ್‌ನಲ್ಲಿ ಪ್ಲೇಯರ್ ಆಗಿದ್ದೆ. ಮೂರನೇ ಸೀಸನ್‌ನಲ್ಲಿ ಮೆಂಟರ್‌ ಕಮ್ ಪ್ಲೇಯರ್ ಆಗಿ ಆಡುತ್ತಿದ್ದೇನೆ. ಲೈಫ್‌ನಲ್ಲಿ ಇಷ್ಟ ಆಗೋದು ಎರಡನೇ. ಒಂದು ಸಿನಿಮಾ. ಇನ್ನೊಂದು ಎಂಟರ್‌ಟೈನ್ಮೆಂಟ್. ಸಿನಿಮಾಗೆ ಪ್ರಡ್ಯೂಸರ್ ಇದ್ದಾರೆ ಮಾಡಿಕೊಡೋಕೆ. ಕ್ರಿಕೆಟ್ ಖುಷಿ ಕೊಡೋಕೆ ಸುದೀಪ್ ಸರ್ ಇದ್ದಾರೆ.” ಎಂದು ದಿನಕರ್ ತೂಗುದೀಪ ಹೇಳಿದ್ದಾರೆ.

ಕೆಸಿಸಿ ಸೀಸನ್ 1 ಹಾಗೂ 2ರ ವೇಳೆ ಸ್ಯಾಂಡಲ್‌ವುಡ್‌ನ ಕೆಲವು ಸೆಲೆಬ್ರೆಟಿಗಳು ತಮಗೆ ಆಹ್ವಾನ ಬಂದಿಲ್ಲ ಎಂದಿದ್ದರು. ಅದಕ್ಕೆ ಈ ಬಾರಿ ಸ್ಯಾಂಡಲ್‌ವುಡ್‌ನ ಎಲ್ಲಾ ಗಣ್ಯರಿಗೂ ಆಹ್ವಾನವನ್ನು ನೀಡಿದ್ದಾರೆ. ಅಲ್ಲದೆ “ಕೆಲವರಿಗೆ ಕೆಸಿಸಿಯಲ್ಲಿ ಆಡುವುದಕ್ಕೆ ಇಷ್ಟವಿರಲ್ಲ. ಅಂತಹವರು ಬರೋದಿಲ್ಲ. ಅವರು ಯಾಕೆ ಬಂದಿಲ್ಲ ಅಂತ ಹೇಳಬೇಡಿ” ಎಂದು ಕಿಚ್ಚ ಸುದೀಪ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೆಸಿಸಿ ಸೀಸನ್ 3 ಈ ಬಾರಿ ಮತ್ತಷ್ಟು ಅದ್ಧೂರಿಯಾಗಿ ನಡೆಯಲಿದೆ. ಈ ಬಾರಿ ಆರು ಮಂದಿ ಅಂತರಾಷ್ಟ್ರೀಯ ಆಟಗಾರರು, ಕನ್ನಡ ಚಿತ್ರರಂಗದ ತಾರೆಯರೂ ಇರುತ್ತಾರೆ. ಅಲ್ಲದೆ ಬೇರೆ ಭಾಷೆಯ ಸಿನಿಮಾ ಮಂದಿ ಕೂಡ ಭಾಗವಹಿಸುವ ಸಾಧ್ಯತೆಯಿದೆ. ಫೆಬ್ರವರಿ 11 ಹಾಗೂ ಫೆಬ್ರವರಿ 12 ಎರಡು ದಿನಗಳ ಕಾಲ ಕೆಸಿಸಿ ಸೀಸನ್ 3 ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಗಳು ಲೈವ್ ಕೂಡ ಇರುತ್ತೆ. ಹೀಗಾಗಿ ಮೈಸೂರಿನಲ್ಲಿ ನಡೆಯಲಿರುವ ಈ ಪಂದ್ಯಾವಳಿ ಬಗ್ಗೆ ಎಲ್ಲರ ಕುತೂಹಲವಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಮಿಳಿನ 'ವಿಕ್ರಮ್' ಖ್ಯಾತಿಯ ನಟಿ ಸ್ವಾದಿಷ್ಟ ಜತೆ ಶುರು ವಿನಯ್ ರಾಜ್‌ಕುಮಾರ್ ಸರಳ ಪ್ರೇಮಕಥೆ.

Mon Jan 23 , 2023
    ಒಂದೆಡೆ ದೊಡ್ಮನೆ ಅಭಿಮಾನಿಗಳು ಯುವ ರಾಜ್‌ಕುಮಾರ್ ನಟಿಸಲಿರುವ ಮೊದಲ ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಯುವ ರಾಜ್‌ಕುಮಾರ್ ಅಣ್ಣ ವಿನಯ್ ರಾಜ್‌ಕುಮಾರ್ ಅವರು ಸಾಲು ಸಾಲು ಚಿತ್ರಗಳನ್ನು ಘೋಷಿಸಿ ಹೆಚ್ಚು ಸಕ್ರಿಯರಾಗಿದ್ದಾರೆ. ಕಳೆದ ವರ್ಷವಷ್ಟೇ ವಿನಯ್ ರಾಜ್‌ಕುಮಾರ್ ನಟಿಸಿದ್ದ, ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಟೆನ್’ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಸರಿಯಾದ ಪ್ರಚಾರ ಹಾಗೂ ಬಿಡುಗಡೆ ಎರಡೂ ಸಿಗದೇ ರಿಲೀಸ್ ಆದ ಕೇವಲ ಒಂದೇ ವಾರಕ್ಕೆ ಅಮೆಜಾನ್ […]

Advertisement

Wordpress Social Share Plugin powered by Ultimatelysocial