ಪ್ರಿಯಕರನ ಜತೆ ಸೇರಿಕೊಂಡು ಪತ್ನಿಯೇ ಪತಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.!

 

ಚಿಂಚೋಳಿ:ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶ ವ್ಯಾಪ್ತಿಯ ಮೊಗದಂಪುರ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಶವದ ರಹಸ್ಯ ಬಯಲಾಗಿದ್ದು, ಪ್ರಿಯಕರನ ಜತೆ ಸೇರಿಕೊಂಡು ಪತ್ನಿಯೇ ಪತಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ತೆಲಂಗಾಣ ರಾಜ್ಯದ ಘನಪುರ ಹತ್ತಿರದ ಮಲ್ಕಿಮೇನ ತಾಂಡಾದ ರವಿ ಪಿರ್ಯಾ ಪತ್ಲಾವತ್‌ (29) ಕೊಲೆಯಾದ ವ್ಯಕ್ತಿ.

ಮೃತನ ಪತ್ನಿ ಲಕ್ಷ್ಮೀ ಮತ್ತು ಆಕೆಯ ಪ್ರಿಯಕರ ಸುಮನ್‌ ಮಾನಯ್ಯ ತಲ್ಹಾರಿ ಮೊಗದಂಪುರ ಸೇರಿಕೊಂಡು ರವಿಯನ್ನು ದ್ವಿಚಕ್ರ ವಾಹನದಲ್ಲಿ ಕಾಡಿಗೆ ಕರೆದುಕೊಂಡು ಬಂದು ಕೊಲೆ ಮಾಡಿದ್ದರು ಎನ್ನಲಾಗಿದೆ.

2020ರ ಜನವರಿ 17ರಂದು ಮೊಗದಂಪುರ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಕುಂಚಾವರಂ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಸಾಕಷ್ಟು ಶೋಧ ಕಾರ್ಯ ನಡೆಸಿದ ಬಳಿಕವೂ ಪೊಲೀಸರಿಗೆ ಮೃತ ವ್ಯಕ್ತಿಯ ಮಾಹಿತಿ ಸಿಕ್ಕಿರಲಿಲ್ಲ. ಕೆಲವು ತಿಂಗಳ ಬಳಿಕ ರವಿ ಕಾಣೆಯಾದ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಬೇಕೆಂದು ಅವರ ತಂದೆ ಸೊಸೆ ಲಕ್ಷ್ಮೀಗೆ ಕೇಳುತ್ತಲೇ ಇದ್ದರು. ಪದೇ ಪದೇ ಒತ್ತಡ ಹಾಕಿದಾಗ ಪತಿ ರವಿಯನ್ನು ನಾನು ಮತ್ತು ಸುಮನ್‌ ಸೇರಿ ಮೊಗದಂಪುರ ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿದ್ದೇವೆ ಎಂದು ಆರೋಪಿ ಲಕ್ಷ್ಮೀ ಬಾಯಿ ಬಿಟ್ಟಿದ್ದಾರೆ.

ಮೃತ ರವಿಯ ತಂದೆ ಪಿರ್ಯಾ ಬದ್ದ್ಯಾ ಪತ್ಲಾವತ್‌(ರಾಠೊಡ) ಕುಂಚಾವರಂ ಠಾಣೆಯಲ್ಲಿ ಸೊಸೆ ಲಕ್ಷ್ಮೀ ಮತ್ತು ಆಕೆಯ ಪ್ರಿಯಕರ ಸುಮನ್‌ ವಿರುದ್ಧ ದೂರು ನೀಡಿದ್ದರು. ಚಿಂಚೋಳಿ ಸಿಪಿಐ ಮಹಾಂತೇಶ ಪಾಟೀಲ, ಕುಂಚಾವರಂ ಪೊಲೀಸರು ಆರೋಪಿತರನ್ನು ಗುರುವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರತಿ ಬಾರಿಯೂ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಸಮಸ್ಯೆ ಸಾಮಾನ್ಯವಾಗಿದೆ.

Sun Apr 24 , 2022
  ಉತ್ತಮ ಮಳೆಯಾದ ಸಂದರ್ಭದಲ್ಲಿ ಸಕಾಲಕ್ಕೆ ರಸಗೊಬ್ಬರ ನೀಡಿದರೆ ಒಳ್ಳೆಯ ಫಸಲು ಸಿಗಬಹುದು ಎಂಬ ನಿರೀಕ್ಷೆ ರೈತ ಸಮುದಾಯದಲ್ಲಿರುತ್ತದೆ. ಆದರೆ ಸಕಾಲಕ್ಕೆ ರಸಗೊಬ್ಬರ ಸಿಗದಿದ್ದರೆ ಉತ್ತಮ ಬೆಳೆಯ ಕನಸು ಕರಗಿಹೋಗುತ್ತದೆ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿರುತ್ತದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದ್ದು, ಹೀಗಾಗಿ ರೈತರು ತಮ್ಮ ಹೊಲಗದ್ದೆಗಳನ್ನು ಹಸನುಗೊಳಿಸಿ ಬೆಳೆಯ ತಯಾರಿಯಲ್ಲಿದ್ದಾರೆ. ಆದರೆ ಹೆಚ್ಚುತ್ತಿರುವ ದರ ಮತ್ತು ಪೂರೈಕೆಯಲ್ಲಾಗುತ್ತಿರುವ ವ್ಯತ್ಯಾಸದಿಂದಾಗಿ ಈ ಬಾರಿ ರಸಗೊಬ್ಬರ ಕೊರತೆ […]

Advertisement

Wordpress Social Share Plugin powered by Ultimatelysocial