ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಮತ್ತೆ ಸಂಕಷ್ಟ.

ಸದಾಶಿವನಗರದಲ್ಲಿ ರೇಂಜ್ ರೋವರ್ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧ ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಮತ್ತೆ ಸಂಕಷ್ಟ ಎದುರಾಗಿದೆ. ಬರೋಬ್ಬರಿ ಒಂದು ವರ್ಷ ನಾಲ್ಕು ತಿಂಗಳ ಬಳಿಕ ರಿಕ್ಕಿ ರೈ ಹಾಗೂ ಐವರ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ಮಾಡಲಾಗಿದೆ. ೨೦೨೧ ಅಕ್ಟೋಬರ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ್ ನಾಯ್ಡು ಅವರ ೩ ಕೋಟಿ ಮೌಲ್ಯದ ರೇಂಜ್ ರೋವರ್ ಕಾರಿಗೆ ಬೆಂಕಿ ಹಚ್ಚಲಾಗಿತ್ತು. ಹಣಕಾಸು ವ್ಯವಹಾರದ ವೈಷ್ಯಮದ ಹಿನ್ನೆಲೆ, ರಿಕ್ಕಿ ರೈ ಅಣತಿಯಂತೆ ದುಷ್ಕರ್ಮಿಗಳು ಶ್ರೀನಿವಾಸ್ ನಾಯ್ಡು ಕಾರಿಗೆ ಬೆಂಕಿ ಹಚ್ಚಿದ್ದರು.ಸದಾಶಿವನಗರ ಪೊಲೀಸರು ರಿಕ್ಕಿ ರೈ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು.ಶ್ರೀನಿವಾಸ್, ರಿಕ್ಕಿ ರೈಗೆ ಸೇರಿದ ವೈಟ್ ಫೀಲ್ಡ್ ಬಳಿಯ ಜಾಗ ಅಭಿವೃದ್ಧಿ ಮಾಡಿದ್ದರು. ಶ್ರೀನಿವಾಸ್ ನಾಯ್ಡು ಜಾಗ ಅಭಿವೃದ್ಧಿ ಕಾರ್ಯಕ್ಕೆ ೧.೫ ಕೋಟಿ ಹಣ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಕಿರಿಕ್ ನಡೆದಿತ್ತು. ಇದೇ ವಿಚಾರಕ್ಕೆ ಸುಪಾರಿ ನೀಡಿ ಕೃತ್ಯ ಎಸಗಿದ್ದಾರೆಂದು ಶ್ರೀನಿವಾಸ್ ನಾಯ್ಡು ಈ ಹಿಂದೆ ದೂರು ಸಲ್ಲಿಸಿದ್ದರು. ನಾರಾಯಣ್ ಎಂಬುವವರ ಮೂಲಕ ಸಂಚು ರೂಪಿಸಿ ಕೃತ್ಯ ಎಸಗಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಬೇರೆ ಬೇರೆ ಅಪರಿಚಿತ ವ್ಯಕ್ತಿಗಳಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು. ರಿಕ್ಕಿ ರೈ, ನಾರಾಯಣ ಹಾಗೂ ಬಂಧಿತರ ವಿರುದ್ಧ ಕೈಗೊಳ್ಳುವಂತೆ ಮನವಿ ಮಾಡಿ ಶ್ರೀನಿವಾಸ್ ದೂರು ದಾಖಲಿಸಿದ್ದರು.ಕಾರು ಬೆಂಕಿ ಹಚ್ಚಿದ್ದ ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕೇಸಿನ ತನಿಖೆ ವೇಳೆ ಐವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದರು. ಸಂಚು ರೂಪಿಸಿ ತನ್ನ ಮನೆಯ ಕಾರಿಗೆ ಬೆಂಕಿ ಹಾಕಿ ಬೆದರಿಕೆ ಹಾಕಿರುವ ಆರೋಪ ಹಿನ್ನಲೆ ರಿಕ್ಕಿ ರೈ ಬಂಧಿಸಬೇಕೆಂದು ದೂರು ಸಲ್ಲಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಟೀಸರ್ ಲಾಂಚ್‌!

Tue Feb 21 , 2023
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಟೀಸರ್ ಲಾಂಚ್‌ಗೆ ಇನ್ನೊಂದೇ ದಿನ ಬಾಕಿಯಿದೆ. ಎ. ಪಿ ಅರ್ಜುನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಇದು. ಸಿನಿಮಾ ಟೀಸರ್ ಪ್ರದರ್ಶನಕ್ಕೆ ಅಭಿಮಾನಿಗಳಿಗಾಗಿ ಥಿಯೇಟರ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಸಂಜೆ ‘ಮಾರ್ಟಿನ್’ ಟೀಸರ್ ರಿಲೀಸ್ ಈವೆಂಟ್ ನಡೆಯಲಿದೆ. ಅದಕ್ಕೂ ಮುನ್ನ ಮಾಗಡಿ ರಸ್ತೆಯ ವೀರೇಶ್ ಥಿಯೇಟರ್‌ನಲ್ಲಿ ಟೀಸರ್ ಪ್ರೀಮಿಯರ್ ಶೋ ನಡೆಯಲಿದೆ. ಅಭಿಮಾನಿಗಳು ಟಿಕೆಟ್ ಖರೀದಿಸಿ ಯೂಟ್ಯೂಬ್‌ನಲ್ಲಿ ಬರುವುದಕ್ಕೂ ಮೊದಲೇ ಟೀಸರ್ ನೋಡಬಹುದು. […]

Advertisement

Wordpress Social Share Plugin powered by Ultimatelysocial