ನಾಳೆ ಪ್ರಧಾನಿ ಮೋದಿ ಭಾಷಣ ನೇರ ಪ್ರಸಾರ; ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ವೀಕ್ಷಣೆಗೆ ವ್ಯವಸ್ಥೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 2 ರಂದು ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಭಾಷಣ ಮಾಡಲಿದ್ದು, ರಾಜ್ಯದಲ್ಲಿ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ಪರದೆಗಳ ಮೂಲಕ ಪ್ರಧಾನಿ ಭಾಷಣದ ನೇರ ಪ್ರಸಾರ ಮಾಡಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾಹಿತಿ ನೀಡಿದ್ದಾರೆ.ಜಿಲ್ಲಾ ಕೇಂದ್ರಗಳಲ್ಲಿ ಸಂಸದರು, ಶಾಸಕರು, ಸಚಿವರು, ಆರ್ಥಿಕ ತಜ್ಞರು ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ.ರಾಜ್ಯದ ಜಿಲ್ಲಾ ಮತ್ತು ಪ್ರಮುಖ ಕೇಂದ್ರಗಳಲ್ಲಿ ಫೆಬ್ರವರಿ 5 ರಿಂದ 15 ರವರೆಗೆ ವಿಷಯ ತಜ್ಞರಿಂದ ಬಜೆಟ್ ಕುರಿತಾಗಿ ವಿಚಾರಗೋಷ್ಠಿ, ಸಂವಾದ ನಡೆಯಲಿದ್ದು, ಆರ್ಥಿಕ ತಜ್ಞರು, ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್‌ಪಿಜಿ ಬೆಲೆ, ಐಎಂಪಿಎಸ್‌ ಶುಲ್ಕ: ಫೆ.1ರಿಂದ ಬದಲಾಗುವ ನಿಯಮಗಳನ್ನು ತಿಳಿಯಿರಿ

Tue Feb 1 , 2022
ನಮ್ಮ ಸಾಮಾನ್ಯ ಜೀವನದಲ್ಲಿ ವೈಯಕ್ತಿಕ ಹಣಕಾಸು ಬಹಳ ಮುಖ್ಯವಾಗಿದೆ. ನಮ್ಮ ನಿರಂತರ ಜೀವನದ ವೈಯಕ್ತಿಕ ಹಣಕಾಸಿನ ಮೇಲೆ ಯಾವುದೇ ನಿಯಮ ಬದಲಾವಣೆಯು ಪ್ರಭಾವ ಬೀರಲಿದೆ. ಕೆಲವು ನಿಯಮ ಬದಲಾವಣೆಯು ನಮಗೆ ಸಹಕಾರಿಯಾದರೆ, ಕೆಲವು ಬದಲಾವಣೆಯಿಂದ ನಮ್ಮ ಜೇಬಿಗೆ ಕತ್ತರಿ ಬೀಳಲಿದೆ.ಫೆಬ್ರವರಿ 1 ರಿಂದ ಮಂಗಳವಾರದಿಂದ, ಸಾಮಾನ್ಯ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುವ ಕೆಲವು ಬ್ಯಾಂಕಿಂಗ್, ಹಣಕಾಸು ಸಂಬಂಧಿತ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಆದ್ದರಿಂದ, ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇಲ್ಲವಾದರೆ […]

Advertisement

Wordpress Social Share Plugin powered by Ultimatelysocial