ತಲೈವ ಮನೆ ಪಕ್ಕದಲ್ಲೇ ಹೊಸ ಮನೆ ಖರೀದಿಸಿದ ನಯನತಾರಾ

 

ತಲೈವ ಮನೆ ಪಕ್ಕದಲ್ಲೇ ಹೊಸ ಮನೆ ಖರೀದಿಸಿದ ನಯನತಾರಾ

ಇತ್ತೀಚೆಗಷ್ಟೇ ತಿರುಪತಿಯಲ್ಲಿ ನಿರ್ದೇಶಕ ವಿಘ್ನೇಶ್ ಜೊತೆ ಹಸೆ ಮಣೆ ಏರಿದ್ದ ನಟಿ ನಯನತಾರಾ ಮದುವೆ ಆದ ದಿನದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗ್ತಿದ್ದಾರೆ.

ಮದುವೆಯಾದ ಮರುದಿನವೇ ತಿಮ್ಮಪ್ಪನ ಸನ್ನಿದಿಗೆ ಭೇಟಿ ನೀಡಿ ವಿವಾದ ಸೃಷ್ಟಿಸಿದ್ದ ನಟಿ ಬಳಿಕ ಹನಿಮೂನ್ ನಲ್ಲಿ ಎಂಜಾಯ್ ಮಾಡಿಕೊಂಡು ಬಂದು ಸುದ್ದಿಯಾಗಿದ್ರು. ಇದೀಗ ಮನೆಯ ವಿಷಯಕ್ಕೆ ನಯನತಾರಾ ಹಾಗೂ ವಿಘ್ನೇಶ್ ಮತ್ತೆ ಸುದ್ದಿಯಾಗಿದ್ದಾರೆ.

ಈಗಾಗ್ಲೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಹೆಸರಿನಲ್ಲಿ ಸಾಕಷ್ಟು ಆಸ್ತಿ ಪಾಸ್ತಿಗಳಿವೆ. ಮದುವೆಯ ಬಳಿಕ ಈ ಜೋಡಿ ಹಕ್ಕಿಗಳು ಹೊಸ ಮನೆ ಖರೀದಿಸುವ ಪ್ಲಾನ್ ಮಾಡಿಕೊಂಡಿದ್ದಾರೆ. ಅಂದ್ಹಾಗೆ ವಿಘ್ನೇಶ್ ಹಾಗೂ ಶಿವನ್ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ವಾಸವಿರು ಮನೆಯ ಪಕ್ಕದಲ್ಲೇ ಮನೆ ಖರೀದಿಸುತ್ತಿದ್ದಾರಂತೆ.

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳನ್ನ ನೋಡಿಕೊಂಡು ಬೆಳೆದ ನಯನತಾರಾಗೆ ರಜನಿಕಾಂತ್ ಎಂದರೆ ಸಾಕಷ್ಟು ಅಚ್ಚುಮೆಚ್ಚು. ಈಗಾಗ್ಲೆ ನಯನತಾರಾ ಹಾಗೂ ರಜನಿಕಾಂತ್ ಜೋಡಿಯಾಗಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತಲೈವನ ಮನೆ ಪಕ್ಕದಲ್ಲೇ ಮನೆ ಖರೀದಿಸ್ತಿರೋದ್ರಿಂದ ಲೇಡಿ ಸೂಪರ್ ಸ್ಟಾರ್ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಮದುವೆಯ ಬಳಿಕ ವಿಘ್ನೇಶ್ ಪ್ರೀತಿಯ ಪತ್ನಿ ನಯನತಾರಾಗೆ ಕೊಡತ್ತಿರುವ ದುಬಾರಿ ಮೊತ್ತದ ಉಡುಗೊರೆ ಇದು ಅನ್ನೋದು ವಿಶೇಷ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಚಾಮರಾಜಪೇಟೆ ಈದ್ಗಾ ಮೈದಾನ ಸಭೆಯಲ್ಲಿ , ಶಾಸಕ ಜಮೀರ್ ಅಹ್ಮದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.!

Fri Jul 8 , 2022
ಚಾಮರಾಜಪೇಟೆ   ಈದ್ಗಾ ಮೈದಾನ ಭೂವಿವಾದ ಕುರಿತು ಇಂದು ಸಭೆ   ನಡೆಸಲಾಗಿದ್ದು, ವೆಂಕಟರಾಮ್‌ ಕಲಾಭವನದಲ್ಲಿ ಸೌಹಾರ್ದ ಸಭೆ ನಡೆದಿದ್ದು, ಸಭೆಯಲ್ಲಿ ಮಾಜಿ ಕಾರ್ಪೋರೇಟರ್ ಗಳು, ಶಾಸಕ ಜಮೀರ್ ಅಹ್ಮದ್  ಸೇರಿದಂತೆ ಅನೇಕರು ಭಾಗವಹಿಸಿದ್ದರು. ಆದರೆ ಸಭೆಯಲ್ಲಿ ಸಂಸದ ಪಿ ಸಿ ಮೋಹನ್, ಮಾಜಿ ಶಾಸಕರಾದ ಪ್ರಮೀಳಾ ನೇಸರ್ಗಿ ಸಭೆಗೆ ಗೈರಾಗಿದ್ದರು. ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಮಾಜಿ ಕಾರ್ಪೊರೇಟರ್ ಚಂದ್ರಶೇಖರ್ ಸ್ಥಳೀಯ ಶಾಸಕರು ಆಟದ ಮೈದಾನವನ್ನು ಉಳಿಸಿಕೊಂಡು ಹೋಗ್ಬೇಕು ಅನ್ನೋದು […]

Advertisement

Wordpress Social Share Plugin powered by Ultimatelysocial