New Jobs: ಮೂರು ವರ್ಷದಲ್ಲಿ 5.2 ಕೋಟಿ ಸೃಷ್ಟಿ: ಉದ್ಯೋಗ ಮಾಹಿತಿ

ಹೊಸದಿಲ್ಲಿ: 2020 ಮತ್ತು 2023ರ ಹಣಕಾಸು ವರ್ಷಗಳ ನಡುವೆ (FY20- FY23) ಸುಮಾರು 5.2 ಕೋಟಿ ಹೊಸ ಔಪಚಾರಿಕ ಉದ್ಯೋಗಗಳು (New Jobs) ಸೃಷ್ಟಿಯಾಗಿವೆ. ಇದರಲ್ಲಿ 2.7 ಕೋಟಿ ಉದ್ಯೋಗಗಳು ಹೊಚ್ಚ ಹೊಸ ಸೇರ್ಪಡೆಯಾಗಿವೆ ಎಂದು ತಿಳಿದುಬಂದಿದೆ. EPFO, NPS ಮತ್ತು ESIC ಡೇಟಾಗಳ ವಿಶ್ಲೇಷಣೆಯ ಆಧಾರದ ಮೇಲೆ ಈ ಅಂಶ ಕಂಡುಬಂದಿದೆ.

ʼಘೋಷ್ ಮತ್ತು ಘೋಷ್ ಸಮಿತಿʼ ನೀಡಿರುವ ವರದಿಯ ಶಿಫಾರಸಿನಂತೆ ಸರ್ಕಾರ ಏಪ್ರಿಲ್ 2018ರಿಂದ ಪ್ರತಿ ತಿಂಗಳು ನೌಕರರ ಭವಿಷ್ಯ ನಿಧಿ ಸಂಸ್ಥೆ (employees provident fund – ಇಪಿಎಫ್‌ಒ), ರಾಷ್ಟ್ರೀಯ ಪಿಂಚಣಿ ಯೋಜನೆ (pension scheme – ಎನ್‌ಪಿಎಸ್) ಮತ್ತು ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ಗಳ ಮಾಸಿಕ ವೇತನದಾರರ ಡೇಟಾವನ್ನು ಬಿಡುಗಡೆ ಮಾಡುತ್ತದೆ.

ಕಳೆದ ನಾಲ್ಕು ವರ್ಷಗಳ EPFO ​​ವೇತನದಾರರ ಡೇಟಾ ಟ್ರೆಂಡ್‌ಗಳ ಪ್ರಕಾರ FY20-23ರ ಅವಧಿಯಲ್ಲಿ ನಿವ್ವಳ ಹೊಸ EPF ಚಂದಾದಾರರ ಸೇರ್ಪಡೆ 4.86 ಕೋಟಿ ಎಂದು ತೋರಿಸಿದೆ. ಇದು ಹೊಸ ವೇತನದಾರರ, ಎರಡನೇ ವೇತನದಾರರ (ಮರುಸೇರಿಸಿದ/ಮರು ಚಂದಾದಾರರಾದ ಸದಸ್ಯರು) ಮತ್ತು ಔಪಚಾರಿಕ ವೇತನದಾರರ ಪಟ್ಟಿಗಳನ್ನು ಒಳಗೊಂಡಿದೆ. ಅದರಂತೆ, ಮರು-ಸೇರ್ಪಡೆಗೊಂಡ ಸದಸ್ಯರನ್ನು ಹೊರತುಪಡಿಸಿ ನಿವ್ವಳ ಹೊಸ ವೇತನದಾರರ ಸಂಖ್ಯೆ 2.27 ಕೋಟಿ ಎಂದು SBI ವರದಿ ಹೇಳಿದೆ.

ಇದರಲ್ಲಿ ಮೊದಲ ಉದ್ಯೋಗಗಳು ಒಟ್ಟು ನಿವ್ವಳ ಹೊಸ ವೇತನದಾರರ ಸೇರ್ಪಡೆಯ 47 ಪ್ರತಿಶತ ಮತ್ತು ಎರಡನೇ ಉದ್ಯೋಗಗಳು (ಮರು ಸೇರ್ಪಡೆಗೊಂಡ ಮತ್ತು ಮರು-ಚಂದಾದಾರರಾದ ಸದಸ್ಯರು) ಈ ನಾಲ್ಕು ವರ್ಷಗಳಲ್ಲಿ 2.17 ಕೋಟಿಗಳಷ್ಟಿದ್ದವು. ಇದರರ್ಥ ಈ ವರ್ಷಗಳಲ್ಲಿ ಕಾಯಂ ಉದ್ಯೋಗಾತಿಯ ನಿವ್ವಳ ಹೆಚ್ಚಳ 42 ಲಕ್ಷದಷ್ಟಿತ್ತು ಎಂದು ಎಸ್‌ಬಿಐ ಸಮೂಹದ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಕಾಂತಿ ಘೋಷ್ ಹೇಳಿದ್ದಾರೆ.

FY24ರ ಮೊದಲ ತ್ರೈಮಾಸಿಕದ EPFO ​​ವೇತನದಾರರ ದತ್ತಾಂಶವನ್ನು ನೋಡಿದರೆ, 44 ಲಕ್ಷ ನಿವ್ವಳ ಹೊಸ EPF ಚಂದಾದಾರರು ಸೇರಿಕೊಂಡಿದ್ದಾರೆ. ಅದರಲ್ಲಿ ಮೊದಲ ವೇತನದಾರರ ಸಂಖ್ಯೆ 19.2 ಲಕ್ಷ. FY24ರ ಉಳಿದ ಭಾಗದಲ್ಲಿ ಈ ಪ್ರವೃತ್ತಿಯು ಮುಂದುವರಿದರೆ, ನಿವ್ವಳ ಹೊಸ ವೇತನದಾರರ ಸಂಖ್ಯೆ 1.6 ಕೋಟಿ ಗಡಿಯನ್ನು ದಾಟುತ್ತದೆ. ಇದು ಈವರೆಗಿನ ಅತ್ಯಧಿಕ ಮೊದಲ ವೇತನದಾರರ ಸೇರ್ಪಡೆ.

NPS ಡೇಟಾವು FY23ರಲ್ಲಿ 8.24 ಲಕ್ಷ ಹೊಸ ಚಂದಾದಾರರನ್ನು ಸೇರಿಸಿದೆ. ಅದರಲ್ಲಿ ರಾಜ್ಯ ಸರ್ಕಾರಗಳ ವೇತನದಾರರ ಸಂಖ್ಯೆ 4.64 ಲಕ್ಷ, ಕೇಂದ್ರ ಸರ್ಕಾರದಲ್ಲಿ 2.30 ಲಕ್ಷ ಮತ್ತು 1.29 ಸರ್ಕಾರೇತರ ಉದ್ಯೋಗಗಳು.

ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 31 ಲಕ್ಷ ಹೊಸ ಚಂದಾದಾರರು ಎನ್‌ಪಿಎಸ್‌ಗೆ ಸೇರಿದ್ದಾರೆ. ಅಂದರೆ, ಎಫ್‌ವೈ 20-23ರ ಅವಧಿಯಲ್ಲಿ ಇಪಿಎಫ್‌ಒ ಮತ್ತು ಎನ್‌ಪಿಎಸ್‌ನ ಒಟ್ಟು ವೇತನದಾರರ ಪ್ರಮಾಣ 5.2 ಕೋಟಿಗಿಂತ ಹೆಚ್ಚಿತ್ತು ಎಂದು ಘೋಷ್ ಹೇಳಿದರು.

The post New Jobs: ಮೂರು ವರ್ಷದಲ್ಲಿ 5.2 ಕೋಟಿ ಸೃಷ್ಟಿ: ಉದ್ಯೋಗ ಮಾಹಿತಿ..

Please follow and like us:

tmadmin

Leave a Reply

Your email address will not be published. Required fields are marked *

Next Post

ಕಾವೇರಿ ನೀರು ವಿವಾದ: ಮಂಡ್ಯದಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ

Wed Sep 13 , 2023
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ (ಸಿಡಬ್ಲ್ಯೂಆರ್‌ಸಿ) ಕರ್ನಾಟಕಕ್ಕೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯ, ಕೆಆರೆಎಸ್‌ ಜಲಾಶಯದ ಸುತ್ತಮುತ್ತ ಪ್ರತಿಭಟನೆಗಳ ಬಿಸಿ ಹೆಚ್ಚಾಗತೊಡಗಿದೆ. ರೈತರು, ರೈತ ಪರ ಸಂಗಟನರಗಳು, ಕನ್ನಡ ಪರ ಸಂಘಟನೆಗಳು ಈಗಾಗಲೇ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗದುಕೊಂಡಿದ್ದು, ಕಾವೇರಿ ನೀರಿಗಾಗಿ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೂ ತಮಿಳುನಾಡಿಗೆ ಕಾವೇರಿ […]

Advertisement

Wordpress Social Share Plugin powered by Ultimatelysocial