ನೀತಾ ಅಂಬಾನಿ ಅವರು ದೇಶದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.

ಮುಂಬೈ: ರಿಲಯನ್ಸ್​ ಫೌಂಡೇಶನ್​ನ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು ದೇಶದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಉದ್ಯಮ ಮತ್ತು ಸಾಮಾಜಿಕ ಕಳಕಳಿಯುಳ್ಳ ಮಹತ್ತರ ಕೆಲಸಗಳಲ್ಲಿ ತೊಡಗಿಕೊಂಡಿರುವುದಲ್ಲದೇ ಫ್ಯಾಶನ್​ ಮೇಲೆಯೂ ಅವರಿಗೆ ಒಲವಿದೆ.ಯಾವಾಗಲೂ ತಮ್ಮ ಉಡುಗೆಗಳಲ್ಲಿ ವಿಭಿನ್ನತೆಯನ್ನು ಪ್ರಯತ್ನಿಸುವ ಮೂಲಕ ಫ್ಯಾಶನ್​ ಜಗತ್ತಿನ ಗಮನವನ್ನು ಸೆಳೆಯುತ್ತಿರುತ್ತಾರೆ.ನೀತಾ ಅವರ ಫ್ಯಾಶನ್​ ಹಿಂದೆ ದೇಶಿ ಪ್ರತಿಭೆ ಹಾಗೂ ಪ್ರತಿಭಾನ್ವಿತ ವಸ್ತ್ರ ವಿನ್ಯಾಸಗಾರ್ತಿಯೊಬ್ಬರ ಶ್ರಮ ಇದೆ ಎಂಬುದು ಬಹುತೇಕರಿಗೆ ತಿಳಿದೇ ಇಲ್ಲ. ಯಾವುದೇ ವಿಶೇಷ ಸಂದರ್ಭದಲ್ಲಿ ನೀತಾ ಅವರು ಯಾವ ಉಡುಪನ್ನು ಧರಿಸಬೇಕು ಎಂಬುದನ್ನು ನಿರ್ಧರಿಸುವುದು ಈ ವಸ್ತ್ರ ವಿನ್ಯಾಸಗಾರ್ತಿಯ ಕೆಲಸವಾಗಿದೆ.ಹಾಗಾದರೆ, ಆ ವಸ್ತ್ರ ವಿನ್ಯಾಸಗಾರ್ತಿ ಯಾರು ಅಂತಿರಾ… ಆಕೆಯೇ ಮಲಯಾಳಂ ಹುಡುಗಿ. ಹೆಸರು ಸ್ವಾತಿ ಅಂತಾ. ಮಲಯಾಳಂ ನಟ ಕುಂಚನ್​ ಅವರ ಮಗಳಾಗಿರುವ ಸ್ವಾತಿ, ನೀತಾ ಅಂಬಾನಿ ಅವರ ನೆಚ್ಚಿನ ಪರ್ಸನಲ್​ ಸ್ಟೈಲಿಸ್ಟ್​ ಆಗಿದ್ದಾರೆ. ಬಾಲ್ಯದಲ್ಲೇ ಚಿತ್ರಕಲೆಯ ಮೇಲಿನ ಆಸಕ್ತಿ ಸ್ವಾತಿ ಅವರನ್ನು ಫ್ಯಾಶನ್​ ಲೋಕಕ್ಕೆ ಎಳೆದು ತಂದಿದೆ.ಅಲ್ಲದೆ, ಬಾಲ್ಯದಲ್ಲೇ ಸ್ವಾತಿ ಅವರು ಇತರರನ್ನು ಸುಂದರವಾಗಿ ತೋರಿಸಲು ತುಂಬಾ ಆಸಕ್ತಿ ಹೊಂದಿದ್ದರು. ಇದೇ ಆಸಕ್ತಿಯು ಆಕೆಯನ್ನು ಪಿಯುಸಿ ನಂತರ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಗೆ ಸೇರುವಂತೆ ಮಾಡಿತು. ಕೋರ್ಸ್​ ಪೂರ್ಣಗೊಳಿಸಿದ ಬಳಿಕ ಸ್ವಾತಿ ಅವರು ಫ್ಯಾಶನ್​ ಡಿಸೈನರ್​ ಆಗಿ ಫೆಮಿನಾಗೆ ಸೇರಿದರು.ಪ್ರಪಂಚದಾದ್ಯಂತ ಇರುವ ಡಿಸೈನರ್‌ಗಳು ತಾವು ತಯಾರಿಸಿದ ಅತ್ಯಾಧುನಿಕ ಉಡುಪುಗಳಲ್ಲಿ ಯಾವುದನ್ನು ನೀತಾ ಅವರಿಗೆ ಆಯ್ಕೆ ಮಾಡಬೇಕೆಂದು ಸ್ವಾತಿ ಅವರು ನಿರ್ಧರಿಸುತ್ತಾರೆ. ಬಳಿಕ ತಮ್ಮ ಐಡಿಯಾಗಳನ್ನು ಸೇರಿಸಿ ಅಂತಿಮ ವಿನ್ಯಾಸವನ್ನು ನಿರ್ಧರಿಸುತ್ತಾರೆ. ಅಂದಹಾಗೆ ಸ್ವಾತಿ ಅವರು ಮುಂಬೈನಲ್ಲಿರುವ ಅಂಬಾನಿ ಒಡೆತನದ ಗೆಸ್ಟ್​ಹೌಸ್​ನಲ್ಲಿ ಉಳಿದುಕೊಂಡಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೆಹಲಿಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ;

Sat Feb 26 , 2022
ಶುಕ್ರವಾರದಂದು ಗರಿಷ್ಠ ತಾಪಮಾನವು 27.9 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಸುವುದರೊಂದಿಗೆ ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಗುಡುಗು ಸಹಿತ ಮಳೆಗೆ ದೆಹಲಿಯ ಜನರು ಸಾಕ್ಷಿಯಾದರು, ಇದು ಋತುವಿನ ಸರಾಸರಿಗಿಂತ ಎರಡು ಹಂತಗಳು. ಹವಾಮಾನ ಇಲಾಖೆಯ ಪ್ರಕಾರ, ಕನಿಷ್ಠ ತಾಪಮಾನವು 12.5 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಸಿದೆ. ಸಾಪೇಕ್ಷ ಆರ್ದ್ರತೆಯು 95 ಪ್ರತಿಶತದಿಂದ 44 ಪ್ರತಿಶತದ ನಡುವೆ ಆಂದೋಲನಗೊಂಡಿದೆ ಎಂದು ಅವರು ಹೇಳಿದರು. ಶನಿವಾರದಂದು ಗುಡುಗು ಸಿಡಿಲಿನಿಂದ ಕೂಡಿದ ಮಳೆಯೊಂದಿಗೆ ಭಾಗಶಃ ಮೋಡ ಕವಿದ […]

Advertisement

Wordpress Social Share Plugin powered by Ultimatelysocial