ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು -ಹರಿಯಾಣ ಸರ್ಕಾರ

ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು -ಹರಿಯಾಣ ಸರ್ಕಾರ

ಚಂಡೀಗಢ: ಹರಿಯಾಣ ಸರ್ಕಾರವು ಬುಧವಾರ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರಾಜ್ಯದಲ್ಲಿ ಮದ್ಯ ಸೇವನೆ ಮತ್ತು ಅದರ ಖರೀದಿ, ಮಾರಾಟದ ಕಾನೂನುಬದ್ಧ ವಯಸ್ಸನ್ನು 25ರಿಂದ 21ಕ್ಕೆ ಇಳಿಸಿದೆ.

ಹರಿಯಾಣ ಅಬಕಾರಿ (ತಿದ್ದುಪಡಿ) ಮಸೂದೆ- 2021 ಅನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಈಚೆಗಷ್ಟೇ ಮದ್ಯ ಸೇವನೆ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಇಳಿಸಿದೆ.

ಅಬಕಾರಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ದುಷ್ಯಂತ್‌ ಚೌತಾಲ್‌ ಅವರು ಮಸೂದೆ ಮಂಡಿಸಿದರು. ಈ ವೇಳೆ ಮಾತನಾಡಿದ ಅವರು, ಹೊಸ ನಿಬಂಧನೆಗಳನ್ನು ಅಬಕಾರಿ ಕಾಯ್ದೆಯಲ್ಲಿ ಅಳವಡಿಸಿರುವುದರಿಂದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನರು ಈಗ ಹೆಚ್ಚು ವಿದ್ಯಾವಂತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕುಡಿಯುವ ವಿಚಾರದಲ್ಲೂ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

2021-22ರ ಅಬಕಾರಿ ನೀತಿಯನ್ನು ರೂಪಿಸುವಾಗ ದೆಹಲಿ ಸೇರಿದಂತೆ ಹಲವು ರಾಜ್ಯಗಳು ಮದ್ಯ ಸೇವನೆಯ ವಯಸ್ಸಿನ ಮಿತಿಯನ್ನು ಇಳಿಸಿವೆ. ಈ ಕುರಿತು ಆಮೂಲಾಗ್ರ ಚರ್ಚೆ ನಡೆಸಿ ಹರಿಯಾಣ ಸರ್ಕಾರವೂ ಮಸೂದೆ ತಂದಿದೆ. ಅಬಕಾರಿಗೆ ಸಂಬಂಧಿಸಿದಂತೆ 6 ಮಸೂದೆಗಳನ್ನು ಹರಿಯಾಣ ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

12-13ಕ್ಕೆ ಬೆಂಗಳೂರಿನಲ್ಲೇ ಮೆಗಾ ಹರಾಜು: ಮತ್ತೆ​ ಭಾರತ-ವೆಸ್ಟ್​ ಇಂಡೀಸ್​ ಪಂದ್ಯದ ಕಥೆಯೇನು?

Thu Dec 23 , 2021
ಚುಟುಕು ಕ್ರಿಕೆಟ್​ ಹಬ್ಬ ಅಂದರೆ, ಯಾರಿಗೆ ಇಷ್ಟ ಇಲ್ಲ. ಐಪಿಎಲ್(IPL)​ ಕ್ರಿಕೆಟ್​ಗೆ ಹೆಚ್ಚು ಮಂದಿ ಫ್ಯಾನ್ಸ್​ ಇದ್ದಾರೆ. ನೀವು ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಅನುಭವಿಸಿರುತ್ತೀರ. ಆದರೆ, ಕ್ರಿಕೆಟ್​ ಪ್ರೇಮಿಗಳಿಗ ನೆಚ್ಚಿನ ಕಾಲ ಯಾವುದು ಗೊತ್ತಾ? ಅದೇ.. ಐಪಿಎಲ್​ ಕಾಲ(IPL Time).. ಹೌದು..ಐಪಿಎಲ್​ ಸೀಸನ್​ ಬಂದರೆ ಸಾಕು ನಮ್ಮ ಮಂದಿಗೆ ಅದೇನೋ ಒಂಥರಾ ಜೋಶ್(Josh)​. ನಮ್ಮೂರಿನ ತಂಡ ಗೆಲ್ಲಬೇಕು ಎಂಬ ಹಂಬಲ. ಎಲ್ಲರೂ ನಮ್ಮವರೇ ಎಂಬುವ ಭಾವ. ಇದೆಲ್ಲಕ್ಕಿಂತ ಮುಂಚಿತವಾಗಿ […]

Advertisement

Wordpress Social Share Plugin powered by Ultimatelysocial