ನೂತನ ಮಸ್ಕಿ ತಾಲೂಕಿಗೆ ಶೀಘ್ರದಲ್ಲೆ  ಉಪ ನೋಂದಣಿ ಕಚೇರಿ ಮುಂಜೂರು ಆಗಲಿದೆ.

ಮಸ್ಕಿ ತಾಲೂಕಿಗೆ ಶೀಘ್ರ ಉಪ ನೋಂದಣಿ ಕಚೇರಿ ಮುಂಜೂರು ಆಗಲಿದೆ ಎಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಹೇಳಿದರುರಾಯಚೂರು ಜಿಲ್ಲೆಯ ನೂತನ ಮಸ್ಕಿ ತಾಲೂಕಿಗೆ ಶೀಘ್ರದಲ್ಲೆ  ಉಪ ನೋಂದಣಿ ಕಚೇರಿ ಮುಂಜೂರು ಆಗಲಿದೆ.ಕೆಲವು ತಾಂತ್ರಿಕ ಕಾರಣಗಳಿಂದ ಮಸ್ಕಿ ಪಟ್ಟಣಕ್ಕೆ ಮೊದಲ ಹಂತದಲ್ಲಿ ಉಪ ನೋಂದಣಿ ಕಚೇರಿ ಮುಂಜೂರಾಗಿರಲಿಲ್ಲ. ಮಂಗಳವಾರ ಮುಖ್ಯಮಂತ್ರಿ‌ ಹಾಗೂ ಕಂದಾಯ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ನೂತನ ತಾಲೂಕ ಕೇಂದ್ರವಾದ ಮಸ್ಕಿ ಪಟ್ಟಣದಲ್ಲಿ ಉಪ‌‌ ನೋಂದಣಿ‌ ಕಚೇರಿ‌ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ.‌ಮನವಿ ಸ್ಪಂದಿಸಿದ ಸಿಎಂ ಹಾಗೂ ಕಂದಾಯ ಸಚಿವರು ಮಸ್ಕಿಯ ಉಪ ನೋಂದಣಿ ಕಚೇರಿಯ‌ ಕಡತವನ್ನು ಮಂಗಳವಾರವೇ ಆರ್ಥಿಕ ಇಲಾಖೆಯ ಒಪ್ಪಿಗೆಗೆ ಕಳಿಸಿದ್ದಾರೆ‌. ಶೀಘ್ರ ಉಪ ನೋಂದಣಿ ಕಚೇರಿ ಮುಂಜೂರು ಮಾಡಿಕೊಡುವ ಬಗ್ಗೆ ಕಂದಾಯ ಸಚಿವರು ಭರವಸೆ ನೀಡಿದ್ದಾರೆ.ಆದಷ್ಟು ಬೇಗ ಮಸ್ಕಿಗೆ ಉಪ ನೋಂದಣಿ‌ ಕಚೇರಿ ಮುಂಜೂರು ಆಗಲಿದೆ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಪರಿಣಾಮಕಾರಿ ಮನೆ ಮದ್ದುಗಳು

Wed Jan 11 , 2023
ಮೊಡವೆ ಸಮಸ್ಯೆ ತುಂಬಾ ಸಾಮಾನ್ಯ. ಯುವಕ-ಯುವತಿಯರಲ್ಲಿ ಮುಖದ ಮೇಲೆ, ಬೆನ್ನು, ಕತ್ತಿನ ಮೇಲೆ ಮೊಡವೆಗಳೇಳುತ್ತವೆ. ಇದು ಸಾಮಾನ್ಯ ಸಮಸ್ಯೆಯಾದರೂ ನಮ್ಮ ಅಂದವನ್ನೇ ಹಾಳು ಮಾಡಿಬಿಡುತ್ತದೆ. ಹಾಗಾಗಿ ಮೊಡವೆಯಿಂದ ಮುಕ್ತಿ ಪಡೆಯಬೇಕೆಂಬುದು ಬಹುತೇಕ ಎಲ್ಲರ ಆಸೆ. ಕೆಲವರಿಗೆ ಬೇಗನೆ ಮೊಡವೆಗಳು ಮಾಯವಾಗಿ ಮುಖ ಕಾಂತಿಯನ್ನು ಮರಳಿ ಪಡೆದರೆ, ಇನ್ನು ಕೆಲವರಿಗೆ ವರ್ಷಗಟ್ಟಲೇ ಮೊಡವೆ ಕಿರಿಕಿರಿ ಹುಟ್ಟಿಸುತ್ತದೆ. ಎಷ್ಟೇ ಔಷಧ ತೆಗೆದುಕೊಂಡ್ರೂ ಬಗೆಬಗೆಯ ಕ್ರೀಮ್‌ ಬಳಸಿದ್ರೂ ಮೊಡವೆ ಏಳುತ್ತಲೇ ಇರುತ್ತದೆ. ಹಾಗಾಗಿ ಅಂಥವರು […]

Advertisement

Wordpress Social Share Plugin powered by Ultimatelysocial