ಇತ್ತೀಚೆಗಷ್ಟೇ ಒಮಿಕ್ರಾನ್‌ ಹಾವಳಿಯಿಂದ ತತ್ತರಿಸಿದ್ದೆವು!

ವಿಶ್ವಕ್ಕೆ ಎರಡು ವರ್ಷದಿಂದ ಕೊರೊನಾ ವೈರಸ್‌ ಕಾಡುತ್ತಲೇ ಇದೆ. ಇನ್ನೇನು ಹೋಯ್ತು ಎನ್ನುವಷ್ಟರಲ್ಲಿ ಹೊಸ ರೂಪದಲ್ಲಿ ಕಂಟಕವಾಗುತ್ತಿದೆ. ಇತ್ತೀಚೆಗಷ್ಟೇ ಒಮಿಕ್ರಾನ್‌ ಹಾವಳಿಯಿಂದ ತತ್ತರಿಸಿದ್ದೆವು. ಸಾವು-ಸೋವಿನ ಸಂಖ್ಯೆ ಕಡಿಮೆ ಇದ್ದರೂ ಸೋಕು ಅತೀ ಹೆಚ್ಚಿನ ಜನರಿಗೆ ತಗುಲಿತ್ತು, ಈಗ ಒಮಿಕ್ರಾನ್ ಸ್ವಲ್ಪ ಕಡಿಮೆಯಾಗಿದೆ, ಇದೀಗ ಲಸ್ಸಾ ಜ್ವರ ಒಬ್ಬರ ಸಾವಿಗೆ ಕಾರಣವಾಗಿರುವುದು ಆತಂಕ ಮೂಡಿಸಿದೆ.2009ರಿಂದ ಲಸ್ಸಾ ಜ್ವರಕ್ಕೆ ಬಲಿಯಾದ ಮೊದಲ ವ್ಯಕ್ತಿಯಾಗಿದ್ದಾರೆ ನಾರ್ತ್‌ ಆಫ್‌ ಲಂಡನ್‌ನಲ್ಲಿ ನೆಲೆಸಿರುವ ಕುಟುಂಬವೊಂದು ಪಶ್ಚಿಮ ಆಫ್ರಿಕಕ್ಕೆ ಪ್ರಯಾಣ ಮಾಡಿತ್ತು. ಅಲ್ಲಿಂದ ಬಂದ ಮೇಲೆ ಕುಟುಂಬದಲ್ಲಿ 3 ಜನರಲ್ಲಿ ಲಸ್ಸಾ ಜ್ವರ ಕಂಡು ಬಂದಿತ್ತು, ಅದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.ಲಸ್ಸ ಜ್ವರಕ್ಕೆ ಕಾರಣ ಇಬೋಲಾ ಮತ್ತು ಮಾರ್ಬರ್ಗ್ ಕುಟುಂಬಕ್ಕೆ ಸೇರಿದ ವೈರಸ್‌ಗಳಾಗಿವೆ. ಆದರೆ ಇದರಲ್ಲಿ ಸಾವು ಸಂಭವಿಸುವುದು ಕಡಿಮೆ. ಇದು ಮೊದಲಿಗೆ ನೈಜೇರಿಯಾದ ಲಸ್ಸದಲ್ಲಿ ಪತ್ತೆಯಾಗಿರುವುದರಿಂದ ಇದಕ್ಕೆ ಲಸ್ಸ ಜ್ವರ ಎಂದು ಹೆಸರಿಡಲಾಗಿದೆ. ಈ ವೈರಸ್ ಮೊದಲಿಗೆ 1969ರಲ್ಲಿ ಕಂಡು ಬಂದಿತ್ತು. ಯುಕೆಯ ಪಬ್ಲಿಕ್ ಹೆಲ್ತ್‌ ಬಾಡಿ ಹೆಲ್ತ್‌ ಸೆಕ್ಯೂರಿಟಿ ಏಜೆನ್ಸಿ ‘ಈ ಕುಟುಂಬದ ಸಂಪರ್ಕಕ್ಕೆ ಬಂದವರನ್ನು ಟ್ರೇಸ್‌ ಮಾಡಿ ಅವಶ್ಯಕ ಸಹಾಯ ಹಾಗೂ ಸಲಹೆ ನೀಡಲಾಗುವುದು’ ಎಂದು ಹೇಳಿದೆ.ಇನ್ನಿಬ್ಬರಲ್ಲಿ ಒಬ್ಬರು ಗುಣಮುಖರಾಗಿದ್ದು ಮತ್ತೊಬ್ಬರಿಗೆ ಪರಿಣಿತರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಯುಕೆಯ ಪಬ್ಲಿಕ್ ಹೆಲ್ತ್‌ ಬಾಡಿ ಹೇಳಿದೆ.ಲಾಸ ವೈರಸ್‌ ಮೊದಲಿಗೆ ನೈಜೇರಿಯಾದ ಲಸ್ಸಾದಲ್ಲಿ 1969ರಲ್ಲಿ ಕಂಡು ಬಂದಿತು. ಇದು ಇಲಿಗಳಿಂದ ಹರಡುವುದು ಇದು ಸಾಂಕ್ರಾಮಿಕವಲ್ಲ. ಸೋಂಕು ಇರುವ ಇಲಿ ಮೂತ್ರ ಮಾಡಿದ ಆಹಾರವನ್ನು ಅಥವಾ ವಸ್ತುವನ್ನು ಮುಟ್ಟಿದಾಗ ಮನುಷ್ಯರಿಗೆ ಬರುತ್ತದೆ ಅಥವಾ ಸೋಂಕು ತಗುಲಿದ ವ್ಯಕ್ತಿಯ ದೇಹದ ದ್ರವದಿಂದಲೂ ಹರಡುವುದು. ಅರೋಗ್ಯ ಇಲಾಖೆಗಳಲ್ಲಿ ಇದು ಒಬ್ಬರಿಂದ ಒಬ್ಬರಿಗೆ ಹರಡುವುದು.ಚಿಕ್ಕದಾಗಿ ಜ್ವರ, ತಲೆಸುತ್ತು, ಸುಸ್ತು, ತಲೆನೋವು ಈ ಲಕ್ಷಣಗಳು ಕಂಡು ಬರುವುದು. ಕಾಯಿಲೆ ಅಧಿಕವಾದರೆ ರಕ್ತಸ್ರಾವ, ಉಸಿರಾಟದ ತೊಂದರೆ, ವಾಂತಿ, ಮುಖದಲ್ಲಿ ಊತ, ಎದೆ ನೋವು, ಬೆನ್ನು , ಕಿಟ್ಟೊಬ್ಬೆಯಲ್ಲಿ ನೋವು ಉಂಟಾಗುವುದು. ಈ ಸೋಂಕು ತಗುಲಿ 1-3 ವಾರಗಳಲ್ಲಿ ರೋಗ ಲಕ್ಷನಗಳು ಕಂಡು ಬರುವುದು.ಕೆಲವರಿಗೆಕಿವಿ ಕೇಳಿಸದಂತಾಗುವುದು, ಕಾಯಿಲೆಯಿಂದ ಗುಣಮುಖರಾದ ಕಿವಿ ಕೇಳಿಸದೇ ಉಳಿಯಬಹುದು.ಕಾಯಿಲೆಯ ಲಕ್ಷಣಗಳು ಗಂಭೀರವಾಗಿರುತ್ತೆ, ಆದರೆ ಶೇ. 99ರಷ್ಟು ಜನ ಗುಣಮುಖರಾಗುತ್ತಾರೆ, ಇದರಲ್ಲಿ ಸಾವಿನ ಸಂಖ್ಯೆ ಶೇ.1ರಷ್ಟಿದೆ.ಇದನ್ನು ತಡೆಗಟ್ಟುವುದು ಹೇಗೆಇಲಿಗಳ ಸಂಪರ್ಕಕ್ಕೆ ಬಬರಬಾರದು, ಇಲಿಗಳು ಮನೆಗೆ ಬರುವುದನ್ನು ತಡೆಗಟ್ಟಿ, ಆಹಾರವನ್ನು ಇಲಿ ಬಾಯಿ ಹಾಕದಂಥ ಪಾತ್ರೆಯಲ್ಲಿಡಿ. ಇಲಿಗಳಿಂದಲೇ ಈ ಕಾಯಿಲೆ ಹರಡುವುದು, ಆದ್ದರಿಂದ ಇಲಿಗಳು ಮನೆಗೆ ಬಾರದಂತೆ ಸೂಕ್ತ ವ್ಯವಸ್ಥೆ ಮಾಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೇಸಿಗೆ ಆರಂಭವಾಯಿತೆಂದರೆ ಎಲ್ಲರೂ ಹೆಚ್ಚಾಗಿ ಜ್ಯೂಸ್ ಮೊರೆ ಹೊಗುತ್ತಾರೆ.

Wed Feb 16 , 2022
ಆರೋಗ್ಯದಲ್ಲಿ ಏರುಪೇರಾದರೂ ವೈದ್ಯರು ಜ್ಯೂಸ್ ಬಳಕೆ ಮಾಡಲು ಸಲಹೆ ನೀಡುತ್ತಾರೆ. ಎಲ್ಲ ಜ್ಯೂಸ್ ತರಹ ಕಬ್ಬಿನ ಹಾಲು ಕೂಡ ಆರೋಗ್ಯಕ್ಕೆ ತುಂಬ ಒಳ್ಳೆಯದು. ಕಬ್ಬಿನ ಹಾಲಿನಲ್ಲಿ ಐರನ್, ಕ್ಯಾಲ್ಸಿಯಮ್, ಪೊಟಾಶಿಯಂ, ಮ್ಯಾಗ್ನೀಶಿಯಮ್ ಮುಂತಾದ ಗುಣಗಳಿವೆ.ಪ್ರತಿದಿನ ಒಂದು ಲೋಟ ಕಬ್ಬಿನ ಜ್ಯೂಸ್ ಅನ್ನು ಕುಡಿಯುವುದರಿಂದ ಮೂಳೆಗಳು ಬಲಿಷ್ಠವಾಗುತ್ತದೆ ಮತ್ತು ಕಾಮಾಲೆಯಂತಹ ರೋಗ ಕೂಡ ಬಹುಬೇಗ ಗುಣವಾಗುತ್ತದೆ. ಕಬ್ಬಿನ ರಸ ಕುಡಿಯುವುದರಿಂದ ಉಂಟಾಗುವ ಪ್ರಯೋಜನಗಳು ಇಲ್ಲಿವೆ.ತಜ್ಞರ ಪ್ರಕಾರ ಕಾಮಾಲೆ ಖಾಯಿಲೆಯಿಂದ ಬಳಲುತ್ತಿರುವವರು ಕಬ್ಬಿನ […]

Advertisement

Wordpress Social Share Plugin powered by Ultimatelysocial