ಕೆ. ವಿ. ಮಹಾದೇವನ್

 
ಕೆ. ವಿ. ಮಹಾದೇವನ್ ದಕ್ಷಿಣ ಭಾರತದ ಶ್ರೇಷ್ಠ ಸಂಗೀತ ಸಂಯೋಜಕಲ್ಲೊಬ್ಬರು. ಕನ್ನಡದ ಗುರುಶಿಷ್ಯರು, ಕೃಷ್ಣರುಕ್ಮಿಣಿ, ತೆಲುಗಿನ ಶಂಕರಾಭರಣಂ, ತಮಿಳಿನ ತಿರುವಿಳೈಯಾಡಲ್ ಸೇರಿದಂತೆ ಕೆ. ವಿ. ಮಹಾದೇವನ್ ಅನೇಕ ಸಂಗೀತ ಸಂಯೋಜನೆಗಳಿಂದ ಪ್ರಸಿದ್ಧರಾಗಿದ್ದಾರೆ.
ಕೃಷ್ಣಕೋಯಿಲ್ ವೆಂಕಟಾಚಲಮ್ ಮಹಾದೇವನ್ 1918ರ ಮಾರ್ಚ್ 14ರಂದು ನಾಗರಕೋಯಿಲ್ ಸಮೀಪದ ಕೃಷ್ಕೋಯಿಲ್ ಎಂಬಲ್ಲಿ ಜನಿಸಿದರು. ತಂದೆ ವೆಂಕಟಾಚಲಮ್ ಭಾಗವತರ್, ತಾಯಿ ಪಿಚೈಯಮ್ಮಾಳ್.
1942ರಿಂದ 1993ವರೆಗಿನ 5 ದಶಕಗಳ ವಿಸ್ತ್ರೃತ ಅವಧಿಯಲ್ಲಿ ಸುಮಾರು 600
ಚಿತ್ರಗಳಲ್ಲಿ ಕೆ. ವಿ. ಮಹಾದೇವನ್ ಅವರ ಸಂಗೀತ ಹರಡಿತ್ತು. ಮಂಚಿ ಮನಸುಲು, ಲವಕುಶ, ತಿರುವಿಳೈಯಾಡಲ್, ಸರಸ್ವತಿ ಶಪಥಂ, ಕಂದನ್ ಕರುಣೈ, ತಿಲ್ಲಾನ ಮೋಹನಾಂಬಾಳ್, ಬಾಲರಾಜು ಕಥಾ, ಆದಿಪರಾಶಕ್ತಿ, ಶಂಕರಾಭರಣಂ, ಸಪ್ತಪದಿ,
ಸಿರಿವೆನ್ನಲ, ಶೃತಿಲಯಲು, ಪೆಳ್ಳಿ ಪುಸ್ತಕಮ್, ಸ್ವಾತಿಕಿರಣಮ್, ಗುರುಶಿಷ್ಯರು, ಮಾನಿನಿ, ಕೃಷ್ಣರುಕ್ಮಿಣಿ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಿಗೆ ಮಹಾದೇವನ್ ಅವರ ಸಂಗೀತ ಸಂಯೋಜನೆ ಇತ್ತು.
ಎರಡು ರಾಷ್ಟ್ರಪ್ರಶಸ್ತಿಗಳು, ತಮಿಳು ನಾಡು ಮತ್ತು ಆಂಧ್ರ ಪ್ರದೇಶ ಸರ್ಕಾರದ ರಾಜ್ಯ ಚಲನ ಚಿತ್ರಪ್ರಶಸ್ತಿಗಳು ಕೆ. ವಿ. ಮಹಾದೇವನ್ ಅವರಿಗೆ ಸಂದಿದ್ದವು.
ಕೆ. ವಿ. ಮಹಾದೇವನ್ ಅವರು 2001ರ ಜೂನ್ 21ರಂದು ಈ ಲೋಕವನ್ನಗಲಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭವಿಷ್ಯದ ಬೆಂಗಳೂರಿನ ಕಲ್ಪನೆಗಳು ರೆಕ್ಕೆಯನ್ನು ಪಡೆದುಕೊಳ್ಳುತ್ತವೆ!

Mon Mar 14 , 2022
ಎರಡು ದಶಕಗಳ ಭವಿಷ್ಯದಲ್ಲಿ ತಂತ್ರಜ್ಞಾನ-ಚಾಲಿತ, ಸುಸ್ಥಿರತೆ-ಕೇಂದ್ರಿತ ಪರಿವರ್ತನೆಯ ದೃಷ್ಟಿಕೋನಗಳನ್ನು ಅನ್ಲಾಕ್ ಮಾಡುವುದು, ಶುಕ್ರವಾರ ಇಲ್ಲಿ ನಡೆದ ಮೊದಲ DH ಬೆಂಗಳೂರು 2040 ಶೃಂಗಸಭೆಯು ನಮ್ಮ ಕನಸಿನ ನಗರವನ್ನು ರೂಪಿಸಲು ಕಲ್ಪನೆಗಳ ಪ್ರವಾಹವನ್ನು ಹುಟ್ಟುಹಾಕಿತು. ಅಭೂತಪೂರ್ವ ನಿಖರತೆಯೊಂದಿಗೆ ಸ್ಮಾರ್ಟ್ ಫೋನ್‌ಗಳಲ್ಲಿ ವಿತರಿಸಲಾದ ಆರೋಗ್ಯ ರಕ್ಷಣೆಯಿಂದ ಸಂಪೂರ್ಣ ಸಂಪರ್ಕಿತ ಪರಿಸರ ವ್ಯವಸ್ಥೆಯಲ್ಲಿ ಸ್ಮಾರ್ಟ್, ವಿದ್ಯುತ್ ಚಲನಶೀಲತೆಯವರೆಗೆ, ಶೃಂಗಸಭೆಯ ದೃಶ್ಯ ಶ್ರೇಣಿಯು ಬಹು-ಹ್ಯೂಡ್ ಆಗಿತ್ತು. ಆದರೆ ಉತ್ತಮ, ಸುಸ್ಥಿರ ಬೆಂಗಳೂರಿಗಾಗಿ, ದೊಡ್ಡ ಸಂದೇಶವು ಸ್ಪಷ್ಟವಾಗಿತ್ತು: […]

Advertisement

Wordpress Social Share Plugin powered by Ultimatelysocial