ಬಂಧನ ಭೀತಿಯಿಂದ ನಟಿ ಆತ್ಮಹತ್ಯೆ

ಬಂಧನ ಭೀತಿಯಿಂದ ನಟಿ ಆತ್ಮಹತ್ಯೆ

ಮುಂಬಯಿ: NCB ಅಧಿಕಾರಿಗಳ ಸೋಗಿನಲ್ಲಿ ಕಿಡಿಗೇಡಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೆದರಿದ ಭೋಜ್ ಪುರಿ ನಟಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಸಾಂತಾಕ್ರೂಜ್ ನಲ್ಲಿರುವ ಹೋಟೆಲ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ನಕಲಿ NCB ಅಧಿಕಾರಿಗಳು ದಾಳಿ ಮಾಡಿದ್ದಾರೆ.

NCB ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿದ್ದ ಕೆಲವರು ಭೋಜ್ ಪುರಿ ಸಿನಿಮಾಗಳಲ್ಲಿ ಅಭಿನಯಿಸಿದ 28 ವರ್ಷದ ನಟಿ ಮತ್ತು ಆಕೆಯ ಸಹಚರರನ್ನು ಬಂಧಿಸುವುದಾಗಿ ಬೆದರಿಸಿದ್ದಾರೆ.

ಬಳಿಕ 20 ಲಕ್ಷ ರುಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ನಕಲಿ NCB ಅಧಿಕಾರಿಗಳ ಕಿರುಕುಳದಿಂದ ಹೆದರಿದ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಕಲಿ NCB ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಸರ್ಕಾರದಿಂದ 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

Mon Dec 27 , 2021
ಬೆಂಗಳೂರು: ರಾಜ್ಯ ಸರ್ಕಾರದಿಂದ 2022ನೇ ಸಾಲಿಗೆ ಸಾರ್ವತ್ರಿಕ ಹಾಗೂ ಪರಿಮಿತ ರಜೆಗಳ ಕರಡು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 2022ರಲ್ಲಿ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆಗಳು ಸೇರಿದಂತೆ ರಜೆಗಳ ಪಟ್ಟಿ, ಈ ಕೆಳಗಿನಂತಿದೆ.   ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮೊಹಮ್ಮದ್ ನಯೀಮ್ ಮೊಮಿನ್ ಅವರು, ಆರ್ ಬಿ ಐ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅವರಿಗೆ ಪತ್ರದಲ್ಲಿ ತಿಳಿಸಿದ್ದು, 2022ನೇ ಸಾಲಿಗೆ […]

Advertisement

Wordpress Social Share Plugin powered by Ultimatelysocial