ಲಖ್ನೋ,ಸೆ.10- ರೈತನೊಬ್ಬ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿದ ಪತ್ನಿ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಉತ್ತರಪ್ರದೇಶದ ಮೀರ್ ಜಿಲ್ಲೆಯ ಅಕ್ಬರ್‍ಪುರ ಗ್ರಾಮದಲ್ಲಿ ನಡೆದಿದೆ. ವಿಪಿನ್‍ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಸುಂದರಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದಂಪತಿಗೆ ಮಕ್ಕಳಿರಲಿಲ್ಲ. ತುಂಡು ಭೂಮಿಗಾಗಿ ವಿಪಿನ್ ತನ್ನ ಕಿರಿಯ ಸಹೋದರ ಅರವಿಂದ್ […]

ಭೂಪಾಲ್,ಸೆ.10- ಸ್ಕೂಟರ್‍ನಲ್ಲಿ ಚಿನ್ನ ಹಾಗೂ ವಿದೇಶಿ ಕರೆನ್ಸಿಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಮಧ್ಯಪ್ರದೇಶದ ಪೊಲೀಸರು, ಬಂಧಿತರಿಂದ 8 ಕೋಟಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಮುಂಬೈನಿಂದ ರತ್ಲಾಮ್‍ಗೆ ಚಿನ್ನವನ್ನು ಸಾಗಿಸುವ ಬಗ್ಗೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸ್ ತಂಡವು ಇಲ್ಲಿನ ಸ್ಟೇಷನ್ ರಸ್ತೆ ಪ್ರದೇಶದಲ್ಲಿ ಸ್ಕೂಟರ್‍ನಲ್ಲಿ ಚಲಿಸುತ್ತಿದ್ದ ಇಬ್ಬರನ್ನು ತಡೆದು ತಪಾಸಣೆ ನಡೆಸಿದೆ. ಈ ವೇಳೆ ಟ್ರಾಲಿ ಬ್ಯಾಗ್ ಮತ್ತು ಬೆನ್ನುಹೊರೆಯಲ್ಲಿ ಸುಮಾರು 8 ಕೋಟಿ ರೂ. ಮೌಲ್ಯದ 13.245 […]

ಮುಂಬರುವ ಲೋಕಸಭಾ ಚುನಾವಣೆಗೆ ಈಗಾಗಲೇ ರಾಜ್ಯದ ವಿಪಕ್ಷಗಳು ತಯಾರಿಯನ್ನು ಮಾಡಿಕೊಂಡಿದ್ದು. ಇದೀಗ ರಾಜ್ಯದಲ್ಲಿ ಚುನಾವಣೆಗೆ ರಂಗೇರುತ್ತಿವೆ. ಹೌದು…BJP ಮತ್ತು JDS ಪಕ್ಷಗಳು ಇದೀಗ ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿಯನ್ನು ನಡೆಸುತ್ತಿದ್ದು. ಇದೀಗ ಎಡರು ಪಕ್ಷಗಳು ಮೈತ್ರಿಯನ್ನು ಮಾಡಿಕೊಳ್ಳಲು ಸಿದ್ಧತೆಯನ್ನು ನಡೆಸುತ್ತಿದೆ. ಜೊತೆಗೆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಿಯ ಚುಕ್ಕಾಣಿಯನ್ನು ಹಿಡಿದಿದ್ದು, ಬಿಜೆಪಿಯು ಹೀನಾಯವಾಗಿ ಸೋಲನ್ನು ಕಂಡಿದೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಯಾವುದೇ ಕಾರಣಕ್ಕೂ […]

ಈ ವರ್ಷದ G20 ಶೃಂಗಸಭೆಯು ಹವಾಮಾನ ಬಿಕ್ಕಟ್ಟು, ಸೂಕ್ಷ್ಮತೆ ಮತ್ತು ಸಂಘರ್ಷದ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲದು ಎಂಬುದನ್ನು ಸಾಬೀತುಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ. ನವದೆಹಲಿ: ಈ ವರ್ಷದ G20 ಶೃಂಗಸಭೆಯು ಹವಾಮಾನ ಬಿಕ್ಕಟ್ಟು, ಸೂಕ್ಷ್ಮತೆ ಮತ್ತು ಸಂಘರ್ಷದ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲದು ಎಂಬುದನ್ನು ಸಾಬೀತುಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ನಲ್ಲಿ ಅವರು, ಜಾಗತಿಕ ಆರ್ಥಿಕತೆಯು ಹವಾಮಾನ […]

ನವದೆಹಲಿ, ಸೆ.10-ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಾಲಯದಲ್ಲಿ ಪ್ರಾರ್ಥನೆ, ಪೂಜೆ ಸಲ್ಲಿಸಿದ ನಂತರ ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಸುನಕ್ ಅವರ ಭೇಟಿಯ ಹಿನ್ನೆಲೆಯಲ್ಲಿ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಎರಡು ದಿನಗಳ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ […]

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಅಲಾಸ್ಕಾ ಕರಾವಳಿಯ ಪೆಸಿಫಿಕ್ ಮಹಾಸಾಗರದ ತಳದಲ್ಲಿ ಮೊಟ್ಟೆಯನ್ನು ಹೋಲುವ ನಿಗೂಢ ‘ಚಿನ್ನದ ಮೊಟ್ಟೆ’ ಕಂಡುಬಂದಿದೆ. ಇದು ವಿಜ್ಞಾನಿಗಳನ್ನು ಆಶ್ಚರ್ಯಗೊಳಿಸಿದೆ. ರಾಷ್ಟ್ರೀಯ ಸಾಗರ ಮತ್ತು ವಾತಾವರಣದ ಆಡಳಿತದ ಸಂಶೋಧನಾ ತಂಡವು ಆಗಸ್ಟ್ 30 ರಂದು ಮೊದಲ ಬಾರಿಗೆ ಈ ವಿಚಿತ್ರವಾದ ಚಿನ್ನದ ವಸ್ತುವನ್ನು ಕಂಡುಹಿಡಿದಿದೆ.   ಸೀಸ್ಕೇಪ್ ಅಲಾಸ್ಕಾ 5 ದಂಡಯಾತ್ರೆಯ ಸಮಯದಲ್ಲಿ ಅಳಿವಿನಂಚಿನಲ್ಲಿರುವ ಜ್ವಾಲಾಮುಖಿಯನ್ನು ಎರಡು ಮೈಲುಗಳಷ್ಟು ಆಳದಲ್ಲಿ ಅನ್ವೇಷಿಸುವಾಗ ಪರಿಶೋಧಕರ ತಂಡವು ಹೊಳೆಯುವ […]

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವದ ಸೂರ್ಯಯಾನ ಆದಿತ್ಯ ಎಲ್‌ 1 ಮಿಷನ್‌ ಮೂರನೇ ಕಕ್ಷೆಯ (Aditya L1 Mission) ಬದಲಾವಣೆಯನ್ನೂ ಪೂರ್ಣಗೊಳಿಸಿದೆ. ಸೆಪ್ಟೆಂಬರ್‌ 10ರ ಬೆಳಗಿನ ಜಾವ ಆದಿತ್ಯ ಎಲ್‌ 1 ಮಿಷನ್‌ ಮೂರನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಕುರಿತು ಇಸ್ರೋ ಫೋಟೊ ಸಮೇತ ಮಾಹಿತಿ ಹಂಚಿಕೊಂಡಿದೆ.   ‘ಸೂರ್ಯನ ಲ್ಯಾಗ್ರೇಂಜ್‌ ಪಾಯಿಂಟ್‌ನತ್ತ ಸಾಗುತ್ತಿರುವ ಆದಿತ್ಯ ಎಲ್‌ 1 ಮಿಷನ್‌ ಮೂರನೇ ಬಾರಿ ಕಕ್ಷೆ ಬದಲಾವಣೆ […]

ನವದೆಹಲಿ: ಭಾರತದ ಜಿ 20 ಶೃಂಗಸಭೆಯು ಮುಕ್ತಾಯದ ಹಂತ ತಲುಪಿದ್ದು, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಹವಾಮಾನ ನಿಧಿಗೆ ದಾಖಲೆಯ ನೆರವು ಘೋಷಿಸಿದ್ದಾರೆ. ಹಸಿರು ಪರಿಸರ ನಿಧಿಗೆ(ಜಿಸಿಎಫ್) ಬ್ರಿಟನ್‌ನಿಂದ 2 ಶತಕೋಟಿ ಡಾಲರ್ ಒದಗಿಸುವುದಾಗಿ ಅವರು ತಿಳಿಸಿದ್ದಾರೆ. ಇದು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ವಿಶ್ವಕ್ಕೆ ಸಹಾಯ ಮಾಡಲು ದೇಶವೊಂದು ನೀಡಿದ ಅತಿದೊಡ್ಡ ನೆರವಾಗಿದೆ. ಕೋಪನ್ ಹೇಗನ್ ಒಪ್ಪಂದದ ನಂತರ, 194 ದೇಶಗಳು ಈ ನಿಧಿಯನ್ನು ಸ್ಥಾಪಿಸಿವೆ. ಯಾವುದೇ G7 […]

ನವದೆಹಲಿ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ದಂಪತಿ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಜಿ- 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ನಿನ್ನೆ (ಶನಿವಾರ) ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ನಾಯಕರು ವ್ಯಾಪಾರ ಸಂಬಂಧಗಳನ್ನು ಗಾಢವಾಗಿಸುವ ಮತ್ತು ಹೂಡಿಕೆ ಹೆಚ್ಚಿಸುವ ಮಾರ್ಗಗಳ ಕುರಿತು ಸಮಾಲೋಚಿಸಿದರು. ಶುಕ್ರವಾರವೇ ನಗರಕ್ಕೆ ಬಂದಿರುವ ಸುನಕ್‌ ಅವರು, ಶೃಂಗಸಭೆಯ ಮೊದಲ ಗೋಷ್ಠಿಯ […]

ಅಮರಾವತಿ, ಸೆ.10- ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನದ ಬಳಿಕ ರಾಜ್ಯ ರಾಜಕೀಯ ಮತ್ತಷ್ಟು ಕಾವೇರಿದೆ. ನಟ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್‍ರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಕಳೆದ ತಡರಾತ್ರಿ ಆಂಧ್ರ ಪ್ರದೇಶ ಪ್ರವೇಶಕ್ಕೆ ಪೊಲೀಸರು ಪವನ್ ಕಲ್ಯಾಣ್‍ಗೆ ಅವಕಾಶ ನೀಡಲಿಲ್ಲ. ಆದ್ದರಿಂದ ಆಂಧ್ರ ಪ್ರದೇಶ-ತೆಲಂಗಾಣ ಗಡಿಯ ಜಗ್ಗಯ್ಯಪೇಟ ಚೆಕ್ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಮಲಗಿ ಅವರು ಪ್ರತಿಭಟನೆ ನಡೆಸಿದರು. […]

Advertisement

Wordpress Social Share Plugin powered by Ultimatelysocial