ಕೊರೊನಾದಿಂದಾಗಿ ದೇಶವೇ ಲಾಕ್‌ಡೌನ್ ಮಾಡಿರುವ ಹಿನ್ನಲೆಯಲ್ಲಿ ಜನರು ಕೆಲಸವಿಲ್ಲದೇ, ಆಹಾರವಿಲ್ಲದೇ ಪರದಾಡುವಂತ ಸ್ಥಿತಿ ಉಂಟಾಗಿದೆ. ಕೂಲಿಗಾಗಿ ಊರು ಬಿಟ್ಟು ರಾಜಧಾನಿಗೆ ಬಂದ ಜನರಿಗೆ ಸಂಕಷ್ಟದ ಸ್ಥಿತಿ ಬಂದೋದಗಿದೆ. ರಾಜಧಾನಿಯಲ್ಲಿ ಐಸ್‌ಕ್ರೀಂ ಮಾರಿ ಜೀವನ ನಡೆಸುತ್ತಿದ್ದ ಯುವಕರು ಲಾಕ್‌ಡೌನ್‌ನಿಂದಾಗಿ ಕೆಲಸ ಸ್ಥಗಿತಗೊಂಡು ಊಟಕ್ಕೆ ಕಷ್ಟ ಪಡುವಂತಾಗಿ, ಮರಳಿ ಊರಿಗೆ ಹೋಗಲು ೨೦ ಯುವಕರು ತೀರ್ಮಾನಿಸಿ ಸೈಕಲ್ ಮೇಲೆ ತಮ್ಮ ಸವಾರಿ ಮುಂದುವರೆಸಿದ್ದಾರೆ. ರಾಯಚೂರು ಜಿಲ್ಲಾಡಳಿತ ಎಸಿ ಸಂತೋಷ ಕುಮಾರ ಉತ್ತರ ಪ್ರದೇಶಕ್ಕೆ […]

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಅನುಭವಿಸುತ್ತಿರುವ ಜನರಿಗೆ ಸರ್ಕಾರ ಕೊಂಚ್ ರಿಲೀಫ್ ಮಾಡಿರುವುದು ಸಿಹಿಸುದ್ದಿ ನೀಡಿದಂತಾಗಿದೆ. ಹೌದು ವಿದ್ಯಾರ್ಥಿ ಭವನ ಎಂದಾಕ್ಷಣ ನೆನಪಿಗೆ ಬರುವುದೇ ದೋಸೆ. ಲಾಕ್‌ಡೌನ್ ಸಡಿಲಿಕೆಯಿಂದಾಗಿ ಗಾಂಧಿನಗರದ ವಿದ್ಯಾರ್ಥಿ ಭವನ ಹೊಟೇಲ್ ಪ್ರಾರಂಭವಾಗಿದೆ.  ವಿದ್ಯಾರ್ಥಿ ಭವನ ಪಾರ್ಸೆಲ್ ಸೇವೆಯನ್ನು ಪ್ರಾರಂಭಿಸಿದ್ದು, ಸಾರ್ವಜನಿಕರು ದೋಸೆ ರುಚಿ ಸವಿಯಲು ಮುಗಿಬೀಳುತ್ತಿದ್ದಾರೆ.

ದೆಹಲಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕ್ಷಾಮಾ, ಬರಗಾಲ ಸಂಭವಿಸಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಎಲ್ಲಾ ದೇಶಗಳು  ಈಗಲೇ ಎಚ್ಚೆತ್ತುಕೊಂಡರೆ ಒಳಿತು ಇಲ್ಲದಿದ್ದರೆ ಭವಿಷ್ಯದಲ್ಲಿ ಹಸಿವಿನ ಸಾಂಕ್ರಾಮಿಕ ರೋಗಗಳು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ. ವಿಶ್ವ ಆಹಾರ ಯೋಜನೆಗಳ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬಿಯಾಸ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರ್ಚುವಲ್ ಅಧಿವೇಶನದಲ್ಲಿ ಈ ಬಗ್ಗೆ ವಿವರ ನೀಡಿದ್ದಾರೆ. ಕ್ಷಾಮ ಎದುರಾಗದಂತೆ ಈಗಿನಿಂದಲೇ ನಾವು ಸಿದ್ಧತೆಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು. ಜಗತ್ತಿನಾದ್ಯಂತ […]

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಟ್ರಾಫಿಕ್ ಪೋಲಿಸರು ಚೆಕ್ ಪೋಸ್ಟ್ಗಳಲ್ಲಿ ಬರುವ ಎಲ್ಲಾ ವಾನಗಳನ್ನು ತಪಾಸಣೆ ಮಾಡುತ್ತಾರೆ. ಪ್ರತಿನಿತ್ಯ ರೋಡ್‌ನಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದ ಟ್ರಾಫಿಕ್ ಪೋಲಿಸರ ಆರೋಗ್ಯ ದೃಷ್ಠಿಯಿಂದ ಪೋಲಿಸ್ ಇಲಾಖೆ ಹಾಗೂ ಅಪೊಲೊ ಆಸ್ಪತ್ರೆಯ ಸಹಯೋಗದೊಂದಿಗೆ ಹೈಗ್ರೌಂಡ್ಸ್ ಪೋಲಿಸ್ ಸಿಬ್ಬಂದಿಗೆ ಬಿಪಿ, ಶುಗರ್ ತಪಾಸಣೆ ಮಾಡಲಾಯಿತು.

ಜಿನಿವಾ: ಕರೊನಾ ಸಂಕಷ್ಟ ಸೆಪ್ಟಂಬರ್‌ವರೆಗೂ ತನ್ನ ಕರಾಳ ಛಾಯೆ ಬೀರಲಿದೆ ಎನ್ನುತ್ತಾರೆ ತಜ್ಞರು. ಅಂದರೆ ಇನ್ನು ಆರು ತಿಂಗಳು ಒಂದಲ್ಲಾ ಒಂದು ರೀತಿಯ ನಿರ್ಬಂಧ ಮುಂದುವರೆಯಲಿದೆ. ಅಲ್ಲಿಯವರೆಗೆ ದೇಶದ ಆರ್ಥಿಕ ಸ್ಥಿತಿಯೂ ಗಂಭೀರವಾಗಲಿದೆ ಎಂದು ವಿಶ್ವಸಂಸ್ಥೆ ವರದಿ ನೀಡಿದೆ. ಕರೊನಾಗೂ ಮುನ್ನ ವಿಶ್ವದಲ್ಲಿ ೧೩ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದರೆ, ಕರೊನಾ ನಂತರದಲ್ಲಿ ಇವರ ಸಂಖ್ಯೆ ದುಪ್ಪಟ್ಟಾಗಲಿದೆ. ಅಂದರೆ ೨೬ ಕೋಟಿಗೂ ಅಧಿಕ ಜನರು ತುತ್ತು ಅನ್ನಕ್ಕೂ ಪರಿತಪಿಸಲಿದ್ದಾರೆ. ಅದರಲ್ಲೂ ಜನರಿಗೆ […]

ಕೊರೊನಾ ಲಾಕ್  ಡೌನ್  ಹಿನ್ನೆಲೆಯಲ್ಲಿ ಸದಾ ಗಿಜಿಗುಡುತ್ತಿದ್ದ ಕಾವೇರಿ ಜಂಕ್ಷನ್ ಸಂಪೂರ್ಣ ಸ್ತಬ್ಧವಾಗಿತ್ತು. ರಸ್ತೆಗಳು  ಖಾಲಿಯಾಗಿದ್ದವು. ಆದರೆ ಇಂದು  ಮತ್ತೆ ಬೆಂಗಳೂರು ನಗರ ಮತ್ತೆ ತನ್ನ ವಾಸ್ತವ ಸ್ಥಿತಿಗೆ ಮರಳಿದಂತಾಗಿದೆ. ಸರ್ಕಾರ ಕೆಲ ಕಂಡಿಷನ್ ಹಾಕಿ ಐಟಿ ಕಂಪನಿಗಳನ್ನು ತೆರಯಲು ಅವಕಾಶ ನೀಡಿದೆ. ಹೀಗಾಗಿ ಐಟಿ ಉದ್ಯೋಗಿಗಳಿಗೆ  ಹೆಚ್ಚಾಗಿ ಪಾಸ್ ನೀಡಿರುವ ಹಿನ್ನೆಲೆ  ವಾಹನಗಳು ರೋಡಿಗಿಳಿದಿವೆ. ಕಾವೇರಿ ಜಂಕ್ಷನ್ ಬಳಿ ಟ್ರಾಫಿಕ್  ಜಾಮ್ ಆಗಿದ್ದು, ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ  […]

ನವದೆಹಲಿ : ಕೊರೊನಾದಿಂದ ತತ್ತರಿಸಿದ ಜನತೆಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಫಲಾನುಭವಿಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಈ ಯೋಜನೆಯಡಿ ೩೧,೨೩೫ ಕೋಟಿ ರೂಪಾಯಿಯನ್ನು ಸುಮಾರು ೩೩ ಕೋಟಿ ಬಡವರ ಖಾತೆಗೆ ಜಮೆಮಾಡಲಾಗಿದೆ. ಈ ಕುರಿತಂತೆ ಕೇಂದ್ರದ ಹಣಕಾಸು ಇಲಾಖೆ ಮಾಹಿತಿ ನೀಡಿದ್ದು,ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ನೀಡಲಾಗಿರುವ ೩೧,೨೩೫ ಕೋಟಿ ರೂಪಾಯಿ ಪ್ಯಾಕೇಜ್ ಪೈಕಿ ೨೦.೦೫ ಕೋಟಿ ಜನಧನ್ ಮಹಿಳಾ ಖಾತೆದಾರರಿಗೆ ೧೦ ಸಾವಿರದ ೦೨೫ ಕೋಟಿ […]

ಕೊರೊನಾ ಸೋಂಕು ಪೀಡಿತರ ಸಂಖ್ಯೆ ಮೈಸೂರಿನಲ್ಲಿ ಹೆಚ್ಚಿರುವ ಹಿನ್ನೆಲೆ ರೆಡ್ ಝೋನ್ ಇದೆ , ಜಿಲ್ಲೆಯಲ್ಲಿ ಯಾವುದೇ ರೀತಿ ಸಡಿಲಿಕೆ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೆಡಿಕಲ್ ಎಮರ್ಜೆನ್ಸಿಯಂತಹ ತುರ್ತು ಪರಿಸ್ಥಿತಿಗಳಿಗೆ ಮಾತ್ರ ಓಡಾಟಕ್ಕೆ ಅನುಮತಿ ಕೊಡಲಾಗಿದೆ. ಕೃಷಿ ಚಟುವಟಿಕೆಗೆ ಈಗಾಗಲೇ ಅನುಮತಿ ಕೊಡಲಾಗಿದೆ. ಉಳಿದಂತೆ ಈ ಹಿಂದಿನ ಕ್ರಮವೇ ಮುಂದುವರಿಯುತ್ತದೆ. ಐಟಿ-ಬಿಟಿಗೆ ಅಗತ್ಯವಿರುವಷ್ಟು ಮಾತ್ರ ಅನುಮತಿ ಕೊಡಲಾಗಿದೆ, ಪರಿಸ್ಥಿತಿ ನೋಡಿ ಮುಂದಿನ ಕ್ರಮ […]

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮುಂದುವರೆಸಿದೆ.. ರಾಜ್ಯದಲ್ಲಿ  ಇಂದು ಹೊಸದಾಗಿ 16 ಜನರಿಗೆ ಕೊರೊನಾ ವೈರಸ್ ಪತ್ತೆಯಾಗಿದೆ. ರಾಜ್ಯದಲ್ಲಿ  ಕೊರೊನಾ ಸೋಂಕಿತರ ಸಂಖ್ಯೆ 443 ಕ್ಕೆ ಏರಿಕೆಯಾಗಿದೆ. ಈ ಕುರಿತು ಇಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದೆ.. ಹೊಸದಾಗಿ  16  ಸೋಂಕಿತರ ಪೈಕಿ ಬೆಂಗಳೂರಿನ 9 ಮಂದಿ. ವಿಜಯಪುರ 2, ಮಂಡ್ಯದಲ್ಲಿ 2, ಧಾರವಾಡದಲ್ಲಿ 2, ದಕ್ಷಿಣ ಕನ್ನಡದಲ್ಲಿ ಒಬ್ಬರಿಗೆ ಕೊರೊನಾ […]

ಸಿಲಿಕಾನ್ ಸಿಟಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರಿನ ಬೇಗೂರಿನಲ್ಲಿ ಖಾಸಗಿ ಕಂಪನಿ ಗೋದಾಮಿನಲ್ಲಿ  ಬೆಂಕಿ ಹೊತ್ತಿಕೊಂಡಿದೆ. ಶಾರ್ಟ್ ಸೆರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿ ತಗುಲಿದ್ದು, ಬಿಸಿಲು ಕಾಲ ಆಗಿರೋಂದ್ರಿದ್ದ ಭಾರೀ ಪ್ರಮಾಣದಲ್ಲಿ ಬೆಂಕಿಯ ಹಾವರಿಸಿದೆ. ಬೆಂಕಿ ನಂದಿಸಲು ಹರಸಾಹಸ ಪಡುತ್ತಿರೋ  ಅಗ್ನಿಶಾಮಕ ದಳದ ಸಿಬ್ಬಂದಿ .ಬೇಗೂರು ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.. ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ ಅಂತ ಅಂದಾಜಿಸಲಾಗಿದೆ..  

Advertisement

Wordpress Social Share Plugin powered by Ultimatelysocial