ಪಾಕಿಸ್ತಾನದ ಜೈಲಿನಲ್ಲಿ ಮಹಾ ಕ್ರೂರಿ ‘ಮಾರ್ಟಿನ್’ ಹೈವೋಲ್ಟೇಜ್ ಟೀಸರ್ ಔಟ್.

 

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ  ಅಭಿನಯದ ‘ಮಾರ್ಟಿನ್’  ಟೀಸರ್ ಬಿಡುಗಡೆಯಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ‘ಮಾರ್ಟಿನ್’ ಸಿನಿಮಾ ರಿಲೀಸ್ ಆಗಲಿದ್ದು, ಟೀಸರ್ ಲಾಂಚ್ ಕಾರ್ಯಕ್ರಮ ಕೂಡ ಭರ್ಜರಿಯಾಗಿ ನೆರವೇರಿದೆ.ಹಾಗ್ನೋಡಿದ್ರೆ, ‘ಮಾರ್ಟಿನ್’ ಸಿನಿಮಾ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ, ಬಿಗ್ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಮಾರ್ಟಿನ್’ ತಯಾರಾಗುತ್ತಿರುವುದರಿಂದ ಕೊಂಚ ಸಮಯ ಹಿಡಿದಿದೆ.ಮಾರ್ಟಿನ್  ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ. ಹೇಳಿ ಕೇಳಿ ಇದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ. ಅಂದ್ಮೇಲೆ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ ಇರುತ್ತೆ ಅಂತ ಅಭಿಮಾನಿಗಳು ನಿರೀಕ್ಷೆ ಮಾಡೋದು ಸಹಜ. ಆ ನಿರೀಕ್ಷೆಗೆ ತಕ್ಕ ಹಾಗಿದೆ ‘ಮಾರ್ಟಿನ್’ ಟೀಸರ್. ‘ಮಾರ್ಟಿನ್’ ಸಿನಿಮಾದಲ್ಲಿ ಮೈನವಿರೇಳಿಸುವ ಆಕ್ಷನ್ ಮತ್ತು ಸ್ಟಂಟ್ಸ್ ಇವೆ ಅನ್ನೋದಕ್ಕೆ ಸಾಕ್ಷಿ ಇಂದು ರಿಲೀಸ್ ಆಗಿರುವ ‘ಮಾರ್ಟಿನ್’ ಟೀಸರ್.‘ಮಾರ್ಟಿನ್’ ಸಿನಿಮಾದಲ್ಲಿ ಆಕ್ಷನ್ ಜೊತೆಗೆ ದೇಶಪ್ರೇಮ ಕೂಡ ಇದೆ. ಟೀಸರ್‌ ಆರಂಭದಲ್ಲೇ ನಾಯಕ ಧ್ರುವ ಸರ್ಜಾ ಪಾಕಿಸ್ತಾನದ ಜೈಲಿನಲ್ಲಿ ಇರುವಂತೆ ತೋರಿಸಲಾಗಿದೆ. ಅಲ್ಲದೇ, ಧ್ರುವ ಸರ್ಜಾ ಅವರನ್ನ ‘ಮಹಾ ಕ್ರೂರಿ’ ಎಂಬಂತೆ ಬಿಂಬಿಸಲಾಗಿದೆ. ‘ಮಾರ್ಟಿನ್’ ಸಿನಿಮಾದಲ್ಲಿ ದೇಶಪ್ರೇಮದ ಕಥೆ ಇದ್ಯಾ? ದುಷ್ಟರನ್ನ ನಾಯಕ ಬಗ್ಗು ಬಡಿಯೋದು ಹೇಗೆ? ‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ವೀರ ಯೋಧನಾ? ಅಥವಾ ಸ್ಪೈ ಏಜೆಂಟಾ? ಎಂಬಿತ್ಯಾದಿ ಪ್ರಶ್ನೆಗಳು ‘ಮಾರ್ಟಿನ್’ ಟೀಸರ್ ನೋಡಿದವರಿಗೆ ಕಾಡುವುದು ಸಹಜ.ಇಂಟ್ರೆಸ್ಟಿಂಗ್ ಅಂದ್ರೆ, ‘ಮಾರ್ಟಿನ್’ ಸಿನಿಮಾದಲ್ಲಿ ಧ್ರುವ ಸರ್ಜಾ ಹೆಸರು ಮಾರ್ಟಿನ್ ಅಲ್ವಂತೆ. ಧ್ರುವ ಸರ್ಜಾ ಹೆಸರು ಅರ್ಜುನ್ ಹಾಗಾದ್ರೆ, ‘ಮಾರ್ಟಿನ್’ ಯಾರು? ಈ ಪ್ರಶ್ನೆಗೆ ಉತ್ತರ ಸಿಗೋದು ನೀವು ಚಿತ್ರ ನೋಡುವಾಗಲೇ ದೇಶಪ್ರೇಮದ ಎಳೆ ಹೊಂದಿರುವ ‘ಮಾರ್ಟಿನ್’ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಎ. ಪಿ. ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ‘ಮಾರ್ಟಿನ್’ ಮೂಲಕ ಎ. ಪಿ. ಅರ್ಜುನ್ ಹಾಗೂ ಧ್ರುವ ಸರ್ಜಾ ಮತ್ತೆ ಒಂದಾಗಿರೋದ್ರಿಂದ ಸಿನಿಮಾದ ಮೇಲೆ ಹೈ ಹೋಪ್ಸ್ ಇದೆ. ಅಂದ್ಹಾಗೆ, ‘ಮಾರ್ಟಿನ್’ ಚಿತ್ರಕ್ಕೆ ರಾಮ್ – ಲಕ್ಷ್ಮಣ್ ಆಕ್ಷನ್ ಕೊರಿಯೋಗ್ರಾಫ್ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಶಿ ಹೆಗಡೆಗೆ 'ಬ್ರೋ' ಎಂದು ಕರೆದು ಪ್ರೀತಿಸಿ ಮದುವೆಯಾದ 'ಶ್ರೀರಸ್ತು ಶುಭಮಸ್ತು' ನಟಿ ಲಾವಣ್ಯಾ ಭಾರದ್ವಾಜ್.

Fri Feb 24 , 2023
  ಕನ್ನಡ ಕಿರುತೆರೆಯ ನಟಿ ಶಶಿ ಲಾವಣ್ಯಾ ಅವರು  ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು ಖುಷಿ ಖುಷಿಯಾಗಿ ಜೀವನ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಲಾವಣ್ಯಾ ಅವರು ಶಶಿ ಹೆಗಡೆಗೆ ಬ್ರೋ ಎಂದು ಕರೆಯುತ್ತಿದ್ದರಂತೆ.’ರಾಜಾ ರಾಣಿ’ ಧಾರಾವಾಹಿಯಲ್ಲಿ ಲಾವಣ್ಯಾ ಭಾರದ್ವಾಜ್ ಹಾಗೂ ಶಶಿ ಹೆಗಡೆ ಅವರು ಭೇಟಿಯಾಗಿದ್ದರು. ಮೊದಲ ದಿನ ಶಶಿಗೆ ಲಾವಣ್ಯಾ ಅವರು ಬ್ರೋ ಬ್ರೋ ಎಂದು ಕರೆಯುತ್ತಿದ್ದರಂತೆ. ಆಮೇಲೆ ಶಶಿ ಅವರು ಬ್ರೋ ಅಂತ ಕರೀಬೇಡ ಅಂದರಂತೆ. […]

Advertisement

Wordpress Social Share Plugin powered by Ultimatelysocial