CRICKET:ಈ ಮೂವರು ಭಾರತೀಯರ ವಿಕೆಟ್ ಹ್ಯಾಟ್ರಿಕ್ ಪಡೆಯಬೇಕು,ಶಹೀನ್ ಶಾ ಅಫ್ರಿದಿ;

 ಕಳೆದ ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಮಿಂಚಿದ್ದ ಶಹೀನ್ ಶಾ ಅಫ್ರಿದಿ ಇದೀಗ ತನ್ನ ಮಹದಾಸೆಯೊಂದನ್ನು ಹೇಳಿಕೊಂಡಿದ್ದಾರೆ. ತನಗೆ ಹ್ಯಾಟ್ರಿಕ್ ರೂಪದಲ್ಲಿ ಮೂವರು ಭಾರತೀಯರ ವಿಕೆಟ್ ಪಡೆಯಬೇಕು ಎಂದು ಅಫ್ರಿದಿ ಹೇಳಿದ್ದಾರೆ.

ನಿಮ್ಮ ಕನಸಿನ ಹ್ಯಾಟ್ರಿಕ್ ಬಗ್ಗೆ ಹೇಳಿ ಎಂದು ಕೇಳಿದಾಗ 21 ವರ್ಷದ ಪಾಕಿಸ್ಥಾನಿ ವೇಗದ ಬೌಲರ್ “ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಮತ್ತು ವಿರಾಟ್ ಕೊಹ್ಲಿ” ಎಂದು ಹೇಳಿದ್ದರು.

ವೃತ್ತಿ ಜೀವನದಲ್ಲಿ ಪಡೆದ ಅತ್ಯಂತ ಅಮೂಲ್ಯ ವಿಕೆಟ್ ಯಾವುದು ಎಂದು ಕೇಳಿದಾಗ ಶಹೀನ್ ಶಾ ಅಫ್ರಿದಿ ಅವರು ‘ಅದು ವಿರಾಟ್ ಕೊಹ್ಲಿ’ ವಿಕೆಟ್ ಎಂದರು.

ಕಳೆದ ಅಕ್ಟೋಬರ್ ನಲ್ಲಿ ದುಬೈನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ಥಾನ 10 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ವಿಶೇಷವೆಂದರೆ, ಈ ಪಂದ್ಯದಲ್ಲಿ ಶಹೀನ್ ಶಾ ಅಫ್ರಿದಿ ಅವರು ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆದು ಪಂದ್ಯದ ಗತಿ ಬದಲಾಯಿಸಿದ್ದರು. ಆದರೆ ಅದು ಹ್ಯಾಟ್ರಿಕ್ ಆಗಿರಲಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

BOLLYWOOD:ಸುಶಾಂತ್ ಪ್ರಕರಣದಿಂದಾಗಿ ಹೊರಬಂದ ಡ್ರಗ್ಸ್‌ ಪ್ರಕರಣ;

Sat Jan 29 , 2022
ನಟ ಸುಶಾಂತ್ ಸಿಂಗ್ ನಿಧನ ಹೊಂದಿ ಎರಡು ವರ್ಷಗಳಾಗುತ್ತಾ ಬಂದಿದ್ದು ಈಗಲೂ ನಟನ ಸಾವಿನ ಕುರಿತು ತನಿಖೆ ಜಾರಿಯಲ್ಲಿದೆ. ಸುಶಾಂತ್ ಪ್ರಕರಣದಿಂದಾಗಿ ಹೊರಬಂದ ಡ್ರಗ್ಸ್‌ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಸಾಹಿಲ್ ಎಂಬಾತನನ್ನು ಎನ್‌ಸಿಬಿಯು ಇಂದು ಬಂಧಿಸಿದೆ. ಸಾಹಿತ್, ಸುಶಾಂತ್ ಸಿಂಗ್ ರಜಪೂತ್‌ರ ನೆರೆ ಮನೆಯವನೇ ಆಗಿದ್ದ ಎನ್ನಲಾಗಿದೆ. ಸುಶಾಂತ್ ಸಿಂಗ್ ಪ್ರಕರಣದಲ್ಲಿ ಸಾಹಿಲ್ ಹೆಸರು ಈ ಮೊದಲು ಕೇಳಿ ಬಂದಿತ್ತು. 2021 ರಲ್ಲಿ ತನ್ನ ಹೆಸರು ಪ್ರಕರಣದಲ್ಲಿ ಹೊರಗೆ ಬರುತ್ತಿದ್ದಂತೆ […]

Advertisement

Wordpress Social Share Plugin powered by Ultimatelysocial