ʼಪಠಾಣ್ʼ ಟ್ರೇಲರ್‌ ರಿಲೀಸ್ ಡೇಟ್‌ ಔಟ್

ಬಿಟೌನ್‌ ನಲ್ಲಿ ಟ್ರೆಂಡ್‌ ಸೃಷ್ಟಿಸಿರುವ ʼಪಠಾಣ್‌ʼ ಸಿನಿಮಾ ಇದೇ ತಿಂಗಳಿನಲ್ಲಿ ತೆರಗೆ ಬರಲಿದೆ. ಶಾರುಖ್‌ ಖಾನ್‌ – ದೀಪಿಕಾ ಕಾಂಬಿನೇಷನ್‌ ನಲ್ಲಿ ಮೂಡಿ ಬಂದಿರುವ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆಯನ್ನು ಕಿಂಗ್‌ ಖಾನ್‌ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.ʼಬೇಷರಂ ರಂಗ್‌ʼ ಹಾಗೂ ʼಜೂಮೇ ಜೋ ಪಠಾಣ್‌ʼ ಹಾಡುಗಳನ್ನು ರಿಲೀಸ್‌ ಮಾಡಿ ಸುದ್ದಿಯಾಗಿರುವ ಸಿನಿಮಾ ತಂಡ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡುವ ಯೋಜನೆಯಲ್ಲಿದ್ದು, ಟ್ರೇಲರ್‌ ರಿಲೀಸ್‌ ಡೇಟ್‌ ಹೊರ ಬಿದ್ದಿದೆ.ಸಿನಿ ಮಾರುಕಟ್ಟೆಯ ವಿಶ್ಲೇಷಕ ತರಣ್ ಆದರ್ಶ್ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪಠಾಣ್‌ ಸಿನಿಮಾದ ಪೋಸ್ಟರ್‌ ಹಂಚಿಕೊಂಡು, ಇದೇ ಜ.10 ರಂದು ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಲಿದೆ ಎಂದು ಬರೆದುಕೊಂಡಿದ್ದಾರೆ.ಹಿಟ್‌ ಜೋಡಿ ಶಾರುಖ್‌, ದೀಪಿಕಾ ಜೊತೆ ಜಾನ್‌ ಅಬ್ರಹಾಂ ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದಾರ್ಥ್‌ ಆನಂದ್‌ ʼಪಠಾಣ್‌ʼ ನಿರ್ದೇಶನ ಮಾಡಿದ್ದು, ಯಶ್‌ ರಾಜ್‌ ಫಿಲ್ಮ್ಸ್‌ ನಿರ್ಮಾಣ ಮಾಡಿದೆ. ಇದೇ ಜ.25 ರಂದು ಸಿನಿಮಾ ತೆರೆಗೆ ಬರಲಿದ್ದು, ಟಿಕೆಟ್‌ ಖರೀದಿಗಾಗಿ ಶಾರುಖ್‌ ಫ್ಯಾನ್ಸ್‌ ಕಾಯುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಲಿ ಮರಿ ರಸ್ತೆ ದಾಟಲಿ ಅಂತ ಟ್ರಾಫಿಕ್ ಜಾಮ್ ಮಾಡಿದ ಅರಣ್ಯ ಇಲಾಖೆ!

Wed Jan 4 , 2023
ಮಹಾರಾಷ್ಟ್ರ: ಮೀಸಲು ಅರಣ್ಯದ ರಸ್ತೆಗಳಲ್ಲಿ ಸಂಚರಿಸುವಾಗ ಬಹಳ ಜಾಗರೂಕರಾಗಿ ಇರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ವನ್ಯಜೀವಿಗಳು ಮತ್ತು ಮನುಷ್ಯರ ಜೀವಕ್ಕೆ ಅಪಾಯ ಉಂಟಾಗಬಹುದು. ಇದೀಗ ತಡೋಬಾ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳು ರಸ್ತೆ ದಾಟುತ್ತಿರುವಾಗ ಮಹಾರಾಷ್ಟ್ರ ಅರಣ್ಯ ಇಲಾಖೆ ಟ್ರಾಫಿಕ್​ ಜಾಮ್​ ಮಾಡಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.ಟ್ವಿಟರ್ ಬಳಕೆದಾರ ಮಿಲಿಂದ್ ಪರಿವಾಕಂ ಹಂಚಿಕೊಂಡಿರುವ ಕ್ಲಿಪ್‌ನಲ್ಲಿ ಹುಲಿಗಳು ರಸ್ತೆ ದಾಟಲು ಸಹಾಯ ಮಾಡುತ್ತಿರುವ ಅಧಿಕಾರಿಗಳು ಅನೇಕ ವಾಹನಗಳನ್ನು ಹಾಗೂ ಜನರನನ್ನು ತಡೆದು ನಿಲ್ಲಿಸಿದ್ದನ್ನು […]

Advertisement

Wordpress Social Share Plugin powered by Ultimatelysocial