ಚಿಕಿತ್ಸೆಗಾಗಿ ಡೋಲಿಯಲ್ಲಿ ವ್ಯಕ್ತಿಯನ್ನು ಹಾಕಿಕೊಂಡು ಹೋಗುತ್ತಿರುವ ದೃಶ್ಯ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಪಕ್ಕದ ಹಳ್ಳಿಯಾದ ದೊಡ್ಡನೆ ಗ್ರಾಮದ ನಿವಾಸಿಯಾದ ಮಹದೇವ ಎಂಬುವರು ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಚಿಕಿತ್ಸೆಗಾಗಿ ಮಾರ್ಟಲ್ಲಿ ಗ್ರಾಮಕ್ಕೆ ಡೋಲಿಯಲ್ಲಿ ಸರಿಸುಮಾರು 15 ಕಿಲೋಮೀಟರ್ ಹೊತ್ತುಕೊಂಡು ಹೋಗುತ್ತಿರುವುದು ದೊಡ್ಡನೆ ಗ್ರಾಮದದಿಂದ ಮಾರ್ಟಳ್ಳಿ ಗ್ರಾಮಕ್ಕೆ ಸರಿಸುಮಾರು 15 ಕಿ.ಮೀ ಇದೆ, ಕಾಲ್ನಡಿಗೆಯಲ್ಲಿ ಹೋಗಬೇಕು, ಯಾವುದೇ ಅಭಿವೃದ್ಧಿ ಹೊಂದಿಲ್ಲ. ರಸ್ತೆ ಪರಿಸ್ಥಿತಿ ಈ ರೀತಿ ಇದ್ದು ಯಾವುದೇ ತುರ್ತು ಪರಿಸ್ಥಿತಿಯ ವಾಹನಗಳು ಇಲ್ಲಿಗೆ ಬರುವುದಿಲ್ಲ ಶಾಸಕರು, ಸಂಸದರು ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾರಾದರೂ ಇದ್ದರೆ! ಇನ್ನಾದರೂ ಇತ್ತ ಗಮನ ಹರಿಸಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ ನಾವುಗಳು ಇಂದಿನ ಕಾಲದಲ್ಲಿ ಸುಮಾರು ಒಂದೆರಡು ಕಿಲೋಮೀಟರ್ ನಡೆದುಕೊಂಡು ಹೋಗಬೇಕು ಎಂದರೆ ಎಷ್ಟು ಬಾರಿ ಯೋಚನೆ ಮಾಡುತ್ತೇವೆ ಆದರೆ ಈ ಗ್ರಾಮದಲ್ಲಿ ಪ್ರತಿನಿತ್ಯ 15ರಿಂದ 20 ಕಿ.ಮೀ ನಡೆಯಬೇಕು ಅಂದ್ರೆ ಇಲ್ಲಿನ ಜನರು ಪರಿಸ್ಥಿತಿ ಹೇಗಿರಬಹುದು ಯೋಚನೆ ಮಾಡಿ ಅದರಲ್ಲೂ ದಿನ ಬಳಕೆ ಸರಕು ಸಾಮಾನುಗಳನ್ನು ಮನೆಗೆ ಬೇಕಾಗುವ ವಸ್ತುಗಳನ್ನು ಕಷ್ಟಪಟ್ಟು ಹೊತ್ತುಕೊಂಡು ಹೇಗೆ ಸಾಗಿಸಬೇಕು ಯೋಚನೆ ಮಾಡಿ, ಯಾರಿಗಾದರೂ ಈ ಗ್ರಾಮದಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ 15ರಿಂದ 20 ಕಿಲೋ ಮೀಟರ್ ಹೊತ್ತುಕೊಂಡು ನಡೆಯಬೇಕು ಎಂದರೆ ಇದು ಸಾಮಾನ್ಯ ವಿಷಯವಲ್ಲ ಹರ ಸಾಹಸವೇ ಪಡಬೇಕುಮುಂಬರುವ ಚುನಾವಣೆಯಲ್ಲಿ ಚುನಾವಣೆ ಬಹಿಸ್ಕಾರ ಮಾಡಿ ತಕ್ಕ ಪಾಠಕಲಿಸುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಂಬಲ್ ಕಣಿವೆಯಲ್ಲಿ ಹಾದುಹೋಗಲಿದೆ ಹೊಸ ರಾಷ್ಟ್ರೀಯ ಹೆದ್ದಾರಿ.

Fri Jan 20 , 2023
ಭೋಪಾಲ್: 408.77 ಕಿ.ಮೀ ಉದ್ದದ ಅಟಲ್ ಪ್ರಗತಿ ಪಥ ಅಥವಾ ಪ್ರೋಗ್ರೆಸ್ ವೇ ಚತುಷ್ಪಥ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಸಂಪೂರ್ಣವಾಗಲಿದೆ. ಈ ಹೆದ್ದಾರಿಯಿಂದ ಮಧ್ಯಪ್ರದೇಶದ ಮೂಲಕ ರಾಜಸ್ಥಾನ ಹಾಗೂ ಉತ್ತರ ಪ್ರದೇಶಕ್ಕೆ  ಸಂಚರಿಸಲು ಯಾವುದೇ ಅಡೆ-ತಡೆಗಳಿಲ್ಲದಂತಹ ಸುಲಭ ಸಂಪರ್ಕ ಮಾರ್ಗ ದೊರೆಯಲಿದೆ. ಸದ್ಯ ಭಾರತದಲ್ಲಿ ಈ ವರ್ಷ ರಾಜಕೀಯವಾಗಿ ಬಲು ಮಹತ್ವದ್ದಾಗಿದೆ. ಕಾರಣ ಕರ್ನಾಟಕ   ಸೇರಿದಂತೆ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಈ ವರ್ಷ ಜರುಗಲಿವೆ. ಅಟಲ್ ಪ್ರಗತಿಪಥ   ಎಂಬುದು […]

Advertisement

Wordpress Social Share Plugin powered by Ultimatelysocial