PETROLEUM:ವಾಹನ ಸವಾರರಿಗೆ ನ್ಯೂ ಇಯರ್‌ ಗಿಫ್ಟ್‌ : ಈ ರಾಜ್ಯದಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ ʼ25 ರೂಪಾಯಿʼ ಇಳಿಕೆ;

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಜಾರ್ಖಂಡ್‌ ರಾಜ್ಯ ಸರ್ಕಾರ, ಜನತೆಗೆ ಹೊಸ ವರ್ಷದ ಗಿಫ್ಟ್‌ ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ 25 ರೂಪಾಯಿ ಇಳಿಕೆ ಮಾಡಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್, ಈ ಮಹತ್ವದ ಘೋಷಣೆ ಮಾಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಅಗ್ಗದ ಪೆಟ್ರೋಲ್ ಮತ್ತು ಡೀಸೆಲ್ ಲಾಭ ಸಿಗಲಿದೆ ಎಂದಿದ್ದಾರೆ.

ಅದ್ರಂತೆ, ಜನವರಿ 26ರಿಂದ ಜಾರ್ಖಂಡ್‌ನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರು ಪೆಟ್ರೋಲ್ ಮತ್ತು ಡೀಸೆಲ್ 25 ರೂಪಾಯಿಗಳಷ್ಟು ಅಗ್ಗವಾಗಿ ಪಡೆಯಲಿದ್ದಾರೆ.

ಜಾರ್ಖಂಡ್‌ನಲ್ಲಿ 1350 ಪೆಟ್ರೋಲ್ ಪಂಪ್‌ಗಳಿದ್ದು, ಇದು 2.50 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಜೀವನೋಪಾಯವನ್ನ ನೇರವಾಗಿ ಜೋಡಿಸುತ್ತದೆ.

ಕೇಂದ್ರದಿಂದ ಅಬಕಾರಿ ಸುಂಕ ಕಡಿತ..!

ಈ ವರ್ಷದ ಆರಂಭದಿಂದಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ. ಇದಾದ ಬಳಿಕ ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಐದು ಮತ್ತು ಹತ್ತು ರೂಪಾಯಿ ಕಡಿತಗೊಳಿಸಿ ಜನರಿಗೆ ನೆಮ್ಮದಿ ನೀಡಿದೆ. ಕೇಂದ್ರವು ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 5 ರೂಪಾಯಿ ಮತ್ತು ಡೀಸೆಲ್‌ಗೆ 10 ರೂಪಾಯಿಗಳಷ್ಟು ಕಡಿಮೆ ಮಾಡಿತು. ನಂತರ ದೇಶಾದ್ಯಂತ ತೈಲ ಬೆಲೆಗಳು ಗಣನೀಯವಾಗಿ ಇಳಿದವು. ಅದೇ ಸಮಯದಲ್ಲಿ, ಕೇಂದ್ರದ ನಿರ್ಧಾರದ ನಂತರ, ವಿವಿಧ ಎನ್ಡಿಎ ಆಡಳಿತದ ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿದವು. ಬಿಹಾರ, ಯುಪಿ, ತ್ರಿಪುರಾ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳಲ್ಲಿ ವ್ಯಾಟ್ ಕಡಿತಗೊಳಿಸಲಾಗಿತ್ತು. ಇದಾದ ನಂತರ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ- ರಾಜಸ್ಥಾನ, ಪಂಜಾಬ್, ಛತ್ತೀಸ್‌ಗಢಗಳಲ್ಲಿ ತೈಲದ ಮೇಲಿನ ವ್ಯಾಟ್ʼನ್ನ ಕಡಿಮೆಗೊಳಿಸಲಾಯಿತು. ಅದೇ ಸಮಯದಲ್ಲಿ, ಇತ್ತೀಚೆಗೆ ದೆಹಲಿಯ ಕೇಜ್ರಿವಾಲ್ ಸರ್ಕಾರವು ಪೆಟ್ರೋಲ್ ಮೇಲಿನ ವ್ಯಾಟ್ʼನ್ನ ಕಡಿಮೆ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

SUPREME COURT:ವಿಮಾ ಕಂಪನಿಯು ವಿಮಾದಾರರ ಪ್ರಸ್ತುತ ವೈದ್ಯಕೀಯ ಸ್ಥಿತಿಯ ಆಧಾರದ ಮೇಲೆ ಕ್ಲೈಮ್ ಅನ್ನು ಪಾವತಿಸಲು ನಿರಾಕರಿಸುವಂತಿಲ್ಲ;

Wed Dec 29 , 2021
ನವದೆಹಲಿ:ಒಮ್ಮೆ ವಿಮೆ ಮಾಡಿದ ನಂತರ, ವಿಮಾ ಕಂಪನಿಯು ವಿಮಾದಾರರ ಪ್ರಸ್ತುತ ವೈದ್ಯಕೀಯ ಸ್ಥಿತಿಯ ಆಧಾರದ ಮೇಲೆ ಕ್ಲೈಮ್ ಅನ್ನು ಪಾವತಿಸಲು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ವಿಮಾ ಕಂಪನಿಯ ಮುಂದೆ ತನಗೆ ತಿಳಿದಂತೆ ಎಲ್ಲಾ ಸಂಗತಿಗಳನ್ನು ಬಹಿರಂಗಪಡಿಸುವುದು ವಿಮೆ ತೆಗೆದುಕೊಳ್ಳುವ ವ್ಯಕ್ತಿಯ ಕರ್ತವ್ಯವಾಗಿದೆ ಎಂದು ಅವರ ಪೀಠ ಹೇಳಿದೆ. ವಿಮೆಯನ್ನು ತೆಗೆದುಕೊಳ್ಳುವ ವ್ಯಕ್ತಿಗೆ ಪ್ರಸ್ತಾವಿತ ವಿಮೆಗೆ ಸಂಬಂಧಿಸಿದ ಎಲ್ಲಾ […]

Advertisement

Wordpress Social Share Plugin powered by Ultimatelysocial