ಒಪ್ಪೋ ಕಂಪನಿಯು ಹೊಸದಾಗಿ ಲಾಂಚ್ ಮಾಡಿರುವ ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್!

ಒಪ್ಪೋ ಕಂಪನಿಯು ಹೊಸದಾಗಿ ಲಾಂಚ್ ಮಾಡಿರುವ ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ ಆಕರ್ಷಕ ಹೈ ಎಂಡ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ತನ್ನತ್ತ ಹಿಂತಿರುಗಿ ನೋಡುವಂತೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಈಗ ಖರೀದಿಗೆ ಸಹ ಲಭ್ಯವಾಗಿದೆ. ಒಪ್ಪೋ ರೆನೊ 7 ಪ್ರೊ ಫೋನ್ ವೇಗದ ಚಾರ್ಜಿಂಗ್ ಹಾಗೂ ಡಿಸ್‌ಪ್ಲೇ ಆಯ್ಕೆಯಿಂದ ಸಿಕ್ಕಾಪಟ್ಟೆ ಸದ್ದು ಮಾಡಿದೆ.ಈ ಸ್ಮಾರ್ಟ್‌ಫೋನ್ ಸುಮಾರು 35 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಪಡೆದುಕೊಳ್ಳಲಿದೆ. ಒಪ್ಪೋ ರೆನೊ 7 ಪ್ರೊ ಫೋನ್ ಅನ್ನು ಖರೀದಿಸಲು ಇಚ್ಛಿಸಿದರೇ, ಅದಕ್ಕೂ ಮುನ್ನ ಒಪ್ಪೋ ರೆನೊ 7 ಪ್ರೊ ಫೋನ್‌ ಬಗ್ಗೆ ಕೆಲವು ಅಂಶಗಳನ್ನು ನೀವು ತಿಳಿಯಬೇಕು.  ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್‌ ಹೆಚ್‌ಡಿ + ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90hz ರಿಫ್ರೆಶ್ ರೇಟ್‌ ಮತ್ತು 180Hz ಟಚ್ ರೆಸ್ಪಾನ್ಸ್‌ ರೇಟ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಡಿಸ್‌ಪ್ಲೇ ಉತ್ತಮವಾಗಿದ್ದು, ನೆಟ್‌ಫ್ಲಿಕ್ಸ್‌ ನಲ್ಲಿ ಚಲನಚಿತ್ರ ವೀಕ್ಷಇಸಲು ಉತ್ತಮವಾಗಿದೆ. ಅನಿಮೇಷನ್ ಹಾಗೂ ಸ್ಕ್ರೋಲಿಂಗ್ ಸುಗಮವಾಗಿದೆ. ಇನ್ನು ಸ್ಟೀರಿಯೊ ಸ್ಪೀಕರ್‌ಗಳು ಉತ್ತಮವಾಗಿವೆ.ಪಾಯಿಂಟ್ 2 : ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 1200 SoC ಮ್ಯಾಕ್ಸ್ ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 1 ಆಧಾರಿತ ಕಲರ್‌ ಒಎಸ್‌ 12 ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 12 GB RAM + 256 GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಈ ವೇಗದ ಪ್ರೊಸೆಸರ್ BGMI ಮತ್ತು PUBG ನ್ಯೂ ಸ್ಟೇಟ್‌ ಗೇಮ್‌ನಂತಹ ಗೇಮ್‌ಗಳನ್ನು ಉತ್ತಮವಾಗಿ ರನ್ ಮಾಡುತ್ತದೆ.  ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ imx766 ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ imx709 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ನೈಟ್ ಮೋಡ್ ಸಹ ಉತ್ತಮವಾಗಿದೆ. ಮೈಕ್ರೋ ಕ್ಯಾಮೆರಾ ಇನ್ನಷ್ಟು ಉತ್ತಮ ಮಾಡಬಹುದಿತ್ತು.  ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ 4500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 65W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್ ಸುಮಾರು 35 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಪಡೆದುಕೊಳ್ಳಲಿದೆ.  ಒಪ್ಪೋ ರೆನೊ 7 ಪ್ರೊ ಫೋನಿನ ಬೆಲೆ ಭಾರತದಲ್ಲಿ ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್‌ 12 GB RAM ಮತ್ತು 256 GB ಇಂಟರ್‌ ಸ್ಟೋರೇಜ್‌ ವೇರಿಯಂಟ್ ಆಯ್ಕೆಗೆ 39,999ರೂ ಬೆಲೆ ಪಡೆದು ಕೊಂಡಿದೆ. ಇನ್ನು ಈ ಫೋನ್ ಸ್ಟಾರ್ಟ್ರೈಲ್ಸ್ ಬ್ಲೂ ಮತ್ತು ಸ್ಟಾರ್ಲೈಟ್ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಬರುತ್ತದೆ. ಆಯ್ದ ಬ್ಯಾಂಕ್‌ ನಿಂದ ಡಿಸ್ಕೌಂಟ್ ಸಹ ಲಭ್ಯ ಆಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಹೊಸ ಕಾನೂನಿನ ಮೊದಲ ಮೂರು ತಿಂಗಳಲ್ಲಿ 28 ಸಹಾಯಕ ಸಾವು;

Tue Feb 8 , 2022
ಇದು ಕಾನೂನುಬದ್ಧವಾದ ಮೊದಲ ಮೂರು ತಿಂಗಳಲ್ಲಿ, ಕನಿಷ್ಠ 28 ನ್ಯೂಜಿಲೆಂಡ್‌ನವರು ಸಾಯುವಲ್ಲಿ ಸಹಾಯ ಮಾಡಿದ್ದಾರೆ. 2020 ರ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಮೂರನೇ ಎರಡರಷ್ಟು ಕಿವೀಸ್ (65.1%) ಮತ ಚಲಾಯಿಸಿದ ನಂತರ, ನವೆಂಬರ್ 7 ರಂದು ಎಂಡ್ ಆಫ್ ಲೈಫ್ ಚಾಯ್ಸ್ ಆಕ್ಟ್ ಜಾರಿಗೆ ಬಂದಿತು, ಅರ್ಹವಾದ ಮಾರಣಾಂತಿಕ ಅನಾರೋಗ್ಯದ ನ್ಯೂಜಿಲೆಂಡ್‌ನವರು ತಮ್ಮ ಜೀವನವನ್ನು ಕೊನೆಗೊಳಿಸಲು ಆಯ್ಕೆ ಮಾಡಲು ಅವಕಾಶ ಮಾಡಿಕೊಟ್ಟರು. ಜನವರಿ 31 ರವರೆಗಿನ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ […]

Advertisement

Wordpress Social Share Plugin powered by Ultimatelysocial