ರಾಷ್ಟ್ರೀಯ ಯುವ ಜನೋತ್ಸವದಲ್ಲಿ 6 ದಿನ ಸಂಗೀತ ರಸದೌತಣ:

ಧಾರವಾಡ: ರಾಷ್ಟ್ರೀಯ ಯುವ ಜನೋತ್ಸವದ ಸಂಭ್ರಮಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಹುಬ್ಬಳ್ಳಿ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ವಿದ್ಯಾಕಾಶಿಯಲ್ಲಿ ನಡೆಯುವ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವವೇ ಮೇಳೈಸಲಿದೆ. ಆರು ದಿನಗಳ ಕಾಲ ನಡೆಯೂ ಯುವ ಜನೋತ್ಸವದಲ್ಲಿ ಸುಮಧುರ ಸಂಗೀತ, ನೃತ್ಯದ ಜೊತೆಗೆ ವಿನೂತನ ಕಾರ್ಯಕ್ರಮಗಳನ್ನು ನೀಡಲು ವಿವಿಧ ರಾಜ್ಯಗಳ ಖ್ಯಾತ ಕಲಾವಿದರ ತಂಡಗಳು ಸಜ್ಜಾಗಿವೆ.

ನಾಳೆಯಿಂದ ಯುವಜನೋತ್ಸವದ ರಂಗು ಶುರುವಾಗುತ್ತಿದೆ. ಇಲ್ಲಿನ ಕೆಸಿಡಿ ಕಾಲೇಜು ಕ್ರೀಡಾಂಗಣದಲ್ಲಿ ಮನೋರಂಜನೆಯ ರಸದೌತಣ ನಿಮಗೆ ಸಿಗೋದು ಖಾಯಂ. ಮೈಕುಣಿಸುವ, ಮನ ತಣಿಸುವ ಸಂಗೀತ ಸುಧೆ ಹರಿಯಲಿದೆ. ವೇದಿಕೆ ಮೇಲೆ ಕಲಾವಿದರು, ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಲಿದ್ದಾರೆ. ಈ ವೈಭವದ ಕಾರ್ಯಕ್ರಮಗಳನ್ನು ಆಸ್ವಾದಿಸುವಂತೆ ಜಿಲ್ಲಾಡಳಿತ ಸ್ಥಳೀಯರಿಗೆ ಕರೆ ನೀಡಿದೆ. ಕಾರ್ಯಕ್ರಮಕ್ಕೆ ಬರುವವರು ಸಾಧ್ಯವಾದಷ್ಟು ಸಾರ್ವಜನಿಕ ವಾಹನಗಳನ್ನು ಬಳಸಬೇಕು. ಪಾರ್ಕಿಂಗ್ ಸಮಸ್ಯೆ ಮತ್ತು ಸಂಚಾರಿ ಒತ್ತಡ ತಗ್ಗಿಸಲು ಪ್ರತಿಯೊಬ್ಬರೂ ಜಿಲ್ಲಾಡಳಿತದ ಸೂಚನೆ ಪಾಲಿಸಬೇಕು ಅಂತಾ ಮನವಿ ಮಾಡಿದೆ.

ಕೆಸಿಡಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಯೋ ಸಾಂಸ್ಕೃತಿಕ ಸಂಭ್ರಮ ಕಣ್ತುಂಬಿಕೊಳ್ಳೋದಕ್ಕೆ ಎಲ್ಲರು ಕಾತರರಾಗಿದ್ದಾರೆ. ಆದರೆ ಕೆಸಿಡಿ ಕಾಲೇಜು ಕ್ರೀಡಾಂಗಣಕ್ಕೆ ಒಂದೇ ಪ್ರವೇಶ ದ್ವಾರ ಮತ್ತು ಮತ್ತು ಒಂದೇ ನಿರ್ಗಮ ದ್ವಾರಗಳಿವೆ. ಹೀಗಾಗಿ ಕಾರ್ಯಕ್ರಮಕ್ಕೆ ಆಗಮಿಸುವ ಜನತೆ ಸಂಯಮದಿಂದ ವರ್ತಿಸಬೇಕು. ಕಾಲ್ತುಳಿತದಂತಹ ಗಂಭೀರ ಸಮಸ್ಯೆಗಳು ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಬೇಕು ಅಂತಾ ಜಿಲ್ಲಾಧಿಕಾರಿಗಳಾದ ಶ್ರೀ ಗುರುದತ್ ಹೆಗಡೆ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನು ಬಿಜೆಪಿ ಕಾರ್ಯಕರ್ತ!

Wed Jan 11 , 2023
ಕುಖ್ಯಾತ ಕ್ರಿಮಿನಲ್‌, ರಾಜಕಾರಣಿಗಳು, ಅಧಿಕಾರಿಗಳ ಅಪ್ತ ಸಖನೆಂದು ಗುರುತಿಸಿಕೊಂಡಿರುವ ಮೈಸೂರಿನ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ (Santro Ravi Case) ತಾನೇ ಸ್ವತಃ ಈ ವಿಚಾರಗಳನ್ನು ಒಪ್ಪಿಕೊಂಡಿದ್ದಾನೆ. ತಾನೊಬ್ಬ ಬಿಜೆಪಿ ಕಾರ್ಯಕರ್ತ, ಪೊಲೀಸ್‌ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರ ವರ್ಗಾವಣೆ ಮಾಡಿಸಿದ್ದು ನಿಜ. ವೇಶ್ಯಾವಾಟಿಕೆ ದಂಧೆಯ ಆರೋಪವಿರುವುದು ನಿಜ ಎಂದೆಲ್ಲ ಲಿಖಿತವಾಗಿ ಒಪ್ಪಿಕೊಂಡಿದ್ದಾನೆ. ೨೦೨೨ರ ಜನವರಿ ೨೨ರಂದು ಪ್ರಕರಣವೊಂದು ದಾಖಲಾದಾಗ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಸ್ವತಃ […]

Advertisement

Wordpress Social Share Plugin powered by Ultimatelysocial