ಜಾಲದ ಮೇಲೆ ಪೊಲೀಸರು ದಾಳಿ ನಡೆಸಿ 15 ಹಸು ಹಾಗೂ 13 ಎಮ್ಮೆಯನ್ನ ರಕ್ಷಣೆ

ಕುಣಿಗಲ್ : ಹಸು, ಎಮ್ಮೆ ಕಟಾವು ಮಾಡುತ್ತಿದ್ದ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿ 15 ಹಸು ಹಾಗೂ 13 ಎಮ್ಮೆಯನ್ನ ರಕ್ಷಣೆ ಮಾಡಿ ಇಬ್ಬರು ಆರೋಪಿಗಳನ್ನು ಬಂದಿಸಿರುವ ಘಟನೆ ತಾಲೂಕಿನ ಅಮೃತೂರು ಹೋಬಳಿ ಬಿಸ್ನೆಲೆ ಗ್ರಾಮದಲ್ಲಿ ಶನಿವಾರ ನಡೆದಿದೆ.

ಬಿಸ್ನೆಲೆ ಗ್ರಾಮದ ಮಂಜುನಾಥ್(42), ಶಿವರಾಜ್(19) ಬಂಧಿತರಾಗಿದ್ದು, ಆರೋಪಿಗಳು ಮೂರು ಮಂದಿ ಆರೋಪಿಗಳು ತಲೆ ಮರಿಸಿಕೊಂಡಿದ್ದಾರೆ.

ನಾಳೆ ನಡೆಯಲಿರುವ ಬಕ್ರೀದ್ ಹಬ್ಬಕ್ಕೆಂದು ತಾಲೂಕಿನ ಅಮೃತೂರು ಹೋಬಳಿ ಬಿಸ್ನೆಲೆ ಗ್ರಾಮದ ಶಿವಕುಮಾರ್ ಹಾಗೂ ಶಿವರಾಜ್ ಎಂಬುವವರು ಗ್ರಾಮದ ನಿರ್ಮಾಣ ಹಂತದ ಕಟ್ಟಡದಲ್ಲಿ ಅಕ್ರಮವಾಗಿ ಜಾನುವಾರು ಕೂಡಿ ಹಾಕಿ ವಧೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್ ಪಿ ಜಿ.ಆರ್ ರಮೇಶ್ ಅವರ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ 15 ಹಸು, 13 ಎಮ್ಮೆ ಹಾಗೂ ಕಟಾವು ಮಾಡಿದ ಮಾಂಸವನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ದಾಳಿ ವೇಳೆ ಕಟಾವು‌ ಮಾಡುತ್ತಿದ್ದ ಮೂರು‌ ಮಂದಿ ತಲೆ ಮರಿಸಿಕೊಂಡಿದ್ದು , ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

YourSecretHookup Is Designed for Serious Romances

Sun Jul 10 , 2022
Students in campus have many secret locations pertaining to hookups. Making use of the Secret system on grounds app, several pupils are able to filtration system their contacts and only allow those who answer a series of issues get in touch with them. Other learners have discovered success in secret […]

Advertisement

Wordpress Social Share Plugin powered by Ultimatelysocial