ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿಯವರು ಯಾದಗಿರಿ ಮತ್ತು ಕಲಬುರಗಿಗೆ ಆಗಮಿಸಲಿದ್ದಾರೆ.

ಯಾದಗಿರಿ: ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿಯವರು ಯಾದಗಿರಿ ಮತ್ತು ಕಲಬುರಗಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವೇಳಾಪಟ್ಟಿ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಜ.19 ಬೆಳಗ್ಗೆ 11ಕ್ಕೆ ನವದೆಹಲಿಯಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.

ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್​ ಗ್ರಾಮದ ಹೆಲಿಪ್ಯಾಡ್​ಗೆ ತೆರಳಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ಕೊಡೆಕಲ್​ ಗ್ರಾಮದಲ್ಲಿ ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ಮತ್ತು ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ, ಸೂರತ್-ಚೆನ್ನೈ ಎಕ್ಸ್​​ಪ್ರೆಸ್ ವೇ ಪ್ಯಾಕೇಜ್-3 ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇನ್ನು ಕೊಡೆಕಲ್​ ಗ್ರಾಮದಿಂದ ಮಧ್ಯಾಹ್ನ 01.05ಕ್ಕೆ ನಿರ್ಗಮಿಸಿ, 01.10 ಕ್ಕೆ ಕೊಡೆಕಲ್ ಹೆಲಿಪ್ಯಾಡ್​ನಿಂದ ಹೆಲಿಕಾಪ್ಟರ್ ಮೂಲಕ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಹೆಲಿಪ್ಯಾಡ್​ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರಲಿದ್ದಾರೆ. ಮಳಖೇಡನಲ್ಲಿ ಮಧ್ಯಾಹ್ನ 02.15ಕ್ಕೆ ನಡೆಯುವ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿ, ನೂತನವಾಗಿ ರಚಿಸಲಾಗಿರುವ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಳಖೇಡ ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸಿ, 03.05ಕ್ಕೆ ಹೆಲಿಕಾಪ್ಟರ್ ಮೂಲಕ ಕಲಬುರಗಿ ಏರ್​ಪೋರ್ಟ್​​ಗೆ ಹೋಗುತ್ತಾರೆ. ಅಲ್ಲಿಂದ 03.35ಕ್ಕೆ ಕಲಬುರಗಿ ಏರ್​ಪೋರ್ಟ್​​ನಿಂದ ದೆಹಲಿಗೆ ವಾಪಾಸ್‌ ಆಗಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಗುತ್ತಿಗೆದಾರರ ಪತ್ರಿಕಾಗೋಷ್ಠಿ ವಿಚಾರ.

Tue Jan 17 , 2023
ರಾಜ್ಯ ಗುತ್ತಿಗೆದಾರರ ಪತ್ರಿಕಾಗೋಷ್ಠಿ ವಿಚಾರ ಸಚಿವ ಮುನಿರತ್ನ ಹೇಳಿಕೆ ಯಾರು ಯಾವ ದಾಖಲೆಗಳನ್ನಾದ್ರೂ ಪಡೆಯಬಹುದು ಏನಾದ್ರೂ ನ್ಯೂನತೆ ತಪ್ಪುಗಳನ್ನ ಪ್ರಶ್ನೆ ಮಾಡುವು ಹಕ್ಕಿದೆ ಕಾನೂನಿನ ಚೌಕಟ್ಟಿನಲ್ಲಿ ಏನು ಉತ್ತರ ಕೊಡಬಹುದು ಅದ್ನಾ ನಾನು ಕೊಡ್ತೀನಿ ಯಾರು ಯಾವ ಹೆಜ್ಜೆ ಇಡ್ತಾರೋ ಇಡಲಿ ನಾನು ಉತ್ತರ ಕೊಡ್ತೀನಿ ಯಾವುದೇ ಕಾರಣಕ್ಕೂ ನಾನು ಮಾನನಷ್ಟ ಮೊಕ್ಕದೊಮ್ಮೆ ಹೂಡಿದ್ದೇನ ಅದರ ಪ್ರಕರ ಮುಂದುವರೆಯುತ್ತೇನೆ ಮಾನನಷ್ಟ ಮೊಕದೊಮ್ಮೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಆದಷ್ಟು ‌ಬೇಗ […]

Advertisement

Wordpress Social Share Plugin powered by Ultimatelysocial