ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಹೆಸರನ್ನು ರಾಜಕೀಯಕ್ಕೆ ಬಳಸಿಕೊಂಡಿತ ಕಾಂಗ್ರೆಸ್‌?

 

ಬೆಂಗಳೂರು: ಹೊಸಪೇಟೆಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಕೃಷ್ಣ ಭಟ್‌ ಎನ್ನುವವರು ಸೇರ್ಪಡೆಯಾಗಿದ್ದಾರೆ. ಈ ಕುರಿತು ಈಗ ಗೊಂದಲಗಳು ನಿರ್ಮಾಣವಾಗಿವೆ.

ಕೆಪಿಸಿಸಿ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಅವರು ಭಾಷಣ ಮಾಡಿದ ನಂತರ ಆಗಮಿಸಿದ ಸ್ಥಳೀಯ ಮುಖಂಡರೊಬ್ಬರು, ‘ಧರ್ಮಸ್ಥಳದ ಧರ್ಮಾಧಿಕಾರಿ ಡಿ.

ವೀರೇಂದ್ರ ಹೆಗ್ಗಡೆಯವರ ಸಹೋದರನ ಪುತ್ರ ಕೃಷ್ಣ ಭಟ್‌ ಅವರು ಕಾಂಗ್ರೆಸ್‌ನ ತತ್ವ, ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ’ ಎಂದು ಘೋಷಣೆ ಮಾಡಿದರು.

ಈ ವೇಳೆ ಬಿಳಿಯ ಪಂಚೆ ಹಾಗೂ ಅಂಗಿ ತೊಟ್ಟ ಯುವಕರೊಬ್ಬರು ವೇದಿಕೆಗೆ ಆಗಮಿಸಿದರು. ಅವರಿಗೆ ಪಕ್ಷದ ಧ್ವಜವನ್ನು ಹೊದಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಪಕ್ಷಕ್ಕೆ ಬರಮಾಡಿಕೊಂಡರು.

ಧರ್ಮಸ್ಥಳ ಧರ್ಮಾಧಿಕಾರಿಗಳಿಗೆ ಈ ಹೆಸರಿನ ಸಂಬಂಧಿಕರು ಇದ್ದಾರೆಯೇ ಎಂಬ ಚರ್ಚೆ ನಡೆಯುತ್ತಿದೆ. ಈ ಕುರಿತ ವಿಡಿಯೋಗಳು ಹರಿದಾಡುತ್ತಿವೆ. ಈ ವಿಡಿಯೋ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಅವರಿಗೂ ತಲುಪಿದೆ. ಈ ಕುರಿತು ʼವಿಸ್ತಾರ ನ್ಯೂಸ್‌ʼಗೆ ಪ್ರತಿಕ್ರಿಯಿಸಿದ ವೀರು ಶೆಟ್ಟಿ ಅವರು, ಇಂತಹ ಯಾವುದೇ ವ್ಯಕ್ತಿ ಹೆಗ್ಗಡೆ ಅವರ ಕುಟುಂಬದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೆಲ್ಲದರ ನಡುವೆ, ಕಾಂಗ್ರೆಸ್‌ ಸೇರ್ಪಡೆಯಾದ ಕೃಷ್ಣ ಭಟ್‌ ಯಾರು ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ಹಾಸನ:ಹಾಸನ ವಿಧಾನಸಭಾ ಕ್ಷೇತ್ರದ್ದು 196 ಕೋಡ್ ನಂಬರ್ ಆಗಿದೆ. ಮುಂಬರುವ ಚುನಾವಣೆಯಲ್ಲಿ (Karnataka Election) ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ಆ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ನಮ್ಮ ಪಕ್ಷದಿಂದ ಇನ್ನೂ ಅಭ್ಯರ್ಥಿಯ ಹೆಸರು ಪ್ರಕಟ ಮಾಡಲಾಗಿಲ್ಲ. ಈಗ ನಾನು ಹಾಲಿ ಶಾಸಕನಿದ್ದೇನೆ. ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಆ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹಾಲಿ ಶಾಸಕ ಪ್ರೀತಂ ಗೌಡ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸ್ವಕ್ಷೇತ್ರದಲ್ಲಿ ತಮಗೆ ಟಿಕೆಟ್‌ ಸಿಗುವುದು ಅನುಮಾನ ಎಂದು ಪರೋಕ್ಷವಾಗಿ ಹೇಳಿದ್ದಾರೆಯೇ ಎಂಬ ಮಾತುಗಳು ಕೇಳಿ ಬಂದಿವೆ.

ಆಮ್ ಆದ್ಮಿ, ಕಾಂಗ್ರೆಸ್, ಜನತಾದಳದವರಲ್ಲದೆ, ಎಸ್‌ಡಿಪಿಐ, ಬಿಎಸ್‌ಪಿಯವರೂ ಇದ್ದಾರೆ. ಎಲ್ಲರೂ ಓಡಾಟ ಮಾಡುತ್ತಿದ್ದಾರೆ, ಯಾರ‌್ಯಾರು ಯಾವ್ಯಾವ ಸಂದರ್ಭದಲ್ಲಿ ನಾಮಿನೇಷನ್ ಮಾಡುತ್ತಾರೋ ನೋಡಬೇಕು. ಇನ್ನು ಬಿಜೆಪಿಯಿಂದ ಇನ್ಯಾರಿಗೆ ಟಿಕೆಟ್ ಕೊಡುತ್ತಾರೆ ಎಂಬುದು ಗೊತ್ತಿಲ್ಲ. ಎಲ್ಲದನ್ನೂ ನಮ್ಮ‌ ಚುನಾವಣೆ ನಿರ್ವಹಣಾ ಸಮಿತಿ ದೆಹಲಿಯಲ್ಲಿ ತೀರ್ಮಾನ ಮಾಡಲಿದೆ. ಯಾರ‌್ಯಾರು ಯಾವ್ಯಾವ ಕ್ಷೇತ್ರಕ್ಕೆ ಕ್ಯಾಂಡಿಡೇಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಪ್ರೀತಂ ಗೌಡ ಸುದ್ದಿಗಾರರಿಗೆ ತಿಳಿಸಿದರು.

ತಮ್ಮ ಸವಾಲನ್ನು ಸಂಸದ ಪ್ರಜ್ವಲ್‌ ರೇವಣ್ಣ ಸ್ವೀಕರಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರೀತಂ ಗೌಡ, ನಾಮಿನೇಷನ್ ಮಾಡಿದ ಮೇಲೆ ಸವಾಲು, ಉತ್ತರ ಎಲ್ಲದರ ಬಗ್ಗೆಯೂ ಮಾತನಾಡೋಣ, ಮುಂಚಿತವಾಗಿ ಹೇಳುವುದು ಬೇಡ. ಜನವರಿ ಒಂದರಿಂದ ಒಂದು ಪಥ್ಯ ತೆಗೆದುಕೊಂಡಿದ್ದೇನೆ. ಯಾರ ಬಗ್ಗೆಯೂ ನಾನೇನೂ ಮಾತನಾಡುವುದಿಲ್ಲ. ನನ್ನ ಬಗ್ಗೆ ನಾನು ಮಾತಾಡುತ್ತೇನೆ. ನಮ್ಮ ಕ್ಷೇತ್ರದ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.

ಡಿ. 31ರೊಳಗೆ ಏನೇನು ಮಾತನಾಡಬೇಕೋ ಎಲ್ಲವನ್ನೂ ಮಾತನಾಡಿದ್ದೇನೆ. ಅವರಿಗೂ ಅವಕಾಶ ಕೊಡಬೇಕಲ್ಲವೇ? ಯಾವಾಗಲೂ ಸಮಾನ ಅವಕಾಶವಿರಬೇಕು. ನಾಲ್ಕು ವರ್ಷ ನಾನು ಮಾತನಾಡಿದ್ದೇನೆ, ಕೊನೇ ಪಕ್ಷ ಇಂದು ಲೆವೆಲ್ ಪ್ಲೇಯಿಂಗ್ ಗ್ರೌಂಡ್ ಇರಬೇಕೆಂದರೆ ಅವರಿಗೆ ಒಂದು ನಾಲ್ಕು ತಿಂಗಳು ಮಾತನಾಡಲು ಬಿಡಬೇಕು. ನಾನು ನಾಲ್ಕು ವರ್ಷ ಮಾತನಾಡಿದ್ದೇನೆ. ಅವರು ನಾಲ್ಕು ತಿಂಗಳು ಮಾತನಾಡಲಿ. ನಾನು ಸವಾಲು ಹಾಕಿದಾಗ ಮಾತನಾಡಿರಲಿಲ್ಲ. ಈಗ ಅವರು ಪ್ರತಿ ಸವಾಲು ಹಾಕಿದಾಗ ನಾನ್ಯೇಕೆ ಮಾತನಾಡಬೇಕು? ನಾನು ನಾಲ್ಕು ತಿಂಗಳು ಟೈಂ ತಗೆದುಕೊಳ್ಳುತ್ತೇನೆ. ಅವರು ನಾಲ್ಕು ವರ್ಷದಿಂದ ಮಾತನಾಡಿರಲಿಲ್ಲ, ಈಗ ನಾಲ್ಕು ತಿಂಗಳು ಅವಕಾಶ ಕೊಟ್ಟು ರಿಸಲ್ಟ್ ಬಂದ ಮೇಲೆ ಮಾತನಾಡುತ್ತೇನೆ ಎಂದು ಪ್ರೀತಂ ಗೌಡ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ; ಒಬ್ಬ ಅಪ್ಪನಿಗೆ ಹುಟ್ಟದ ನಿನಗೆ ಅಂತ್ಯ ಹಾಡುವ ಕಾಲ ಬಂದಿದೆ'.

Tue Jan 17 , 2023
ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ವಿಚಾರವಾಗಿ ಮುರುಗೇಶ ನಿರಾಣಿ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ವಾಕ್ಸಮರ ನಡೆಯುತ್ತಿದೆ. ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ವಿಚಾರವಾಗಿ ಮುರುಗೇಶ ನಿರಾಣಿ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ವಾಕ್ಸಮರ ನಡೆಯುತ್ತಿದೆ. ಆರಂಭದಲ್ಲಿ ಜೊತೆಗಿದ್ದ ನಿರಾಣಿ ಸಚಿವ ಸ್ಥಾನ ಸಿಕ್ಕ ಬಳಿಕ ತಮ್ಮ ವರಸೆ ಬದಲಾಯಿದ್ದಾರೆಂಬ ಆರೋಪ […]

Advertisement

Wordpress Social Share Plugin powered by Ultimatelysocial