”ಬಾಹುಬಲಿ-2” ದಾಖಲೆ ಧೂಳಿಪಟ ಮಾಡಲು ರಾಕಿಬಾಯ್ ರೆಡಿ..!

ಸಿನಿಮಾ ಅಂದ್ರೆನೇ `ಕೆಜಿಎಫ್ 2′ ಅನ್ನೋಷ್ಟರ ಮಟ್ಟಿಗೆ ದಶದಿಕ್ಕುಗಳ ಸುದ್ದಿ ಮಾಡ್ತಿರೋ ಯಶ್ ಸಿನಿಮಾ. ದಿನದಿಂದ ದಿನಕ್ಕೆ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸದ್ಯ ಎಲ್ಲಾ ಭಾಷೆಯ ಸಿನಿಮಾ ಕಲೆಕ್ಷನ್ ನಿಂತಿರೋ ರಾಕಿಭಾಯ್ ಸಿನಿಮಾ ಇದೀಗ 1200 ಕೋಟಿ ಗಳಿಕೆ ಮಾಡುತ್ತ `ಕೆಜಿಎಫ್ 2′ ಚಿತ್ರ ಮುನ್ನುಗ್ಗುತ್ತಿದೆ.

ಬಾಲಿವುಡ್ ಬಾಕ್ಸ್‌ಆಫೀಸ್ ಅಡ್ಡಾದಲ್ಲಿ ಘಟಾನುಘಟಿಗಳ ಸ್ಟಾರ್ ಚಿತ್ರಗಳನ್ನೇ ಹಿಂದಿಕ್ಕಿ ಯಶ್ ಸಿನಿಮಾ, ಯಶಸ್ವಿಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡುತ್ತಿದೆ.

ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರಕ್ಕೆ ವಿಶ್ವದ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈಗಾಗಲೇ ಚಿತ್ರ ವರ್ಲ್ಡ್ ವೈಡ್ ಕಲೆಕ್ಷನ್ 1160 ಕೋಟಿ ಬಾಚಿ, 1200 ಕೋಟಿ ಕಲೆಕ್ಷನ್ ಮಾಡುತ್ತ ಯಶ್ ಚಿತ್ರ ಮುನ್ನುಗ್ಗುತ್ತಿದೆ. ಕೆಜಿಎಫ್ 2′ ಚಿತ್ರ ರಿಲೀಸ್ ಆಗಿ 25 ದಿನಗಳು ಪೂರೈಸಿದ್ದರು ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ಎಲ್ಲೂ ಕುಗ್ಗದೇ ಈ ಚಿತ್ರದ ಮುಂದೆ ಅದ್ಯಾವುದೇ ಹೊಸ ಸಿನಿಮಾ ಬಂದ್ರು ಗಟ್ಟಿ ಪೈಪೋಟಿ ನೀಡುತ್ತಾ ಸಾಗುತ್ತಿದೆ.

ತಮಿಳಿನ `ಬೀಸ್ಟ್’, ಹಿಂದಿಯ `ರನ್‌ವೇ 24′, `ಜೆರ್ಸಿ’, `ಕೆಜಿಎಫ್ 2′ ಮುಂದೆ ತೆರೆಕಂಡರೂ ಪೈಪೋಟಿ ಗೆಲ್ಲಲು ಸಾಧ್ಯವಾಗಲಿಲ್ಲ. ಈಗ ಹಾಲಿವುಡ್‌ನ `ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’ ಚಿತ್ರ ತೆರೆಕಂಡರೂ `ಕೆಜಿಎಫ್ 2′ ಚಿತ್ರ ಭಾರೀ ಕಲೆಕ್ಷನ್ ಮಾಡುತ್ತಿದೆ. `ಕೆಜಿಎಫ್ 2′ ಸಿನಿಮಾ ತಾಯಿಯ ಸೆಂಟಿಮೆಂಟ್ ಕಥೆಯ ಜತೆ ಕಲಾವಿದರ ನಟನೆ, ನಿರ್ದೇಶನ, ಛಾಯಗ್ರಹಣ, ರವಿ ಬಸ್ರೂರು ನಿರ್ದೇಶನ ಇವೆಲ್ಲವೂ ಸೇರಿ `ಕೆಜಿಎಫ್ 2′ ಈ ವರ್ಷದ ಟಾಪ್ ಚಿತ್ರವಾಗಿ ಹೊರಹೊಮ್ಮಿದೆ. ಯಶ್‌ನ ಕೆಜಿಎಫ್ ೩ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೆಹಲಿಯಲ್ಲಿ ಯಾವ ವರಿಷ್ಠರನ್ನೂ ಭೇಟಿ ಮಾಡಿಲ್ಲ : ಆರಗ ಜ್ಞಾನೇಂದ್ರ!

Thu May 12 , 2022
ಬೆಂಗಳೂರು : ‘ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಬೆಳಗ್ಗೆ ಹೇಳಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ.ರಾತ್ರಿ ಹೋಗಿ ಈಗ ಬಂದಿದ್ದೇನೆ. ನಿನ್ನೆ ನಾನು ಹೋಗುವಾಗ ಸಿಎಂ ಕೂಡಾ ದೆಹಲಿಯಲ್ಲೇ ಇದ್ದರು, ಅವರನ್ನೂ ಭೇಟಿ ಮಾಡಿದ್ದೇನೆ ಎಂದರು. ಬೆಳಗ್ಗೆ 8 ಗಂಟೆಗೆ ಒಬ್ಬರನ್ನು ಭೇಟಿ ಮಾಡಬೇಕಿತ್ತು,ಯಾವ ವರಿಷ್ಠರನ್ನೂ ಭೇಟಿ ಮಾಡಿಲ್ಲ.ಪ್ರಹ್ಲಾದ್ ಜೋಷಿ ಅವರನ್ನು ಎಲ್ಲಿ ಭೇಟಿ ಮಾಡಿದ್ದೇನೆ? […]

Advertisement

Wordpress Social Share Plugin powered by Ultimatelysocial