ಲಕ್ಷಾಂತರ ಜನರಿಗೆ ‘ಜೇಮ್ಸ್’ ವಿಶೇಷವಾಗಿರಲಿದೆ: ಟಾಲಿವುಡ್ ನಟ ಪ್ರಭಾಸ್!

ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಲ್ಲೂ ಇದೀಗ ಜೇಮ್ಸ್ ಜಪ ಶುರುವಾಗಿದೆ. ಪರ ಭಾಷೆಗಳ ಹೀರೋಗಳು ಅಪ್ಪು ಅವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಟೀಸರ್’ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಜೇಮ್ಸ್ ಚಿತ್ರದಲ್ಲಿ ಅಪ್ಪು ಅವರ ಅಭಿನಯಕ್ಕೆ ಸಾಕಷ್ಟು ಜನರು ಫಿದಾ ಆಗಿದ್ದಾರೆ.ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಟೀಸರ್’ಗೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.ಜೇಮ್ಸ್ ಚಿತ್ರದ ಟೀಸರ್’ಗೆ ಡಾರ್ಲಿಂಗ್ ಪ್ರಭಾಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜೇಮ್ಸ್ ಚಿತ್ರದ ಟೀಸರ್ ಶೇರ್ ಮಾಡಿರುವ ಅವರು, ಸಿನಿಮಾ ಮಾಸ್ಟರ್ ಪೀಸ್ ಆಗೋದ್ರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದ್ದಾರೆ.ಟೀಸರ್ ನೋಡಲು ಇಲ್ಲಿ ಕ್ಲಿಕ್ ಮಾಡಿ: ಪುನೀತ್ ನಟನೆಯ ‘ಜೇಮ್ಸ್’ ಟೀಸರ್ ಬಿಡುಗಡೆ’ಜೇಮ್ಸ್’ ಸಿನಿಮಾ ಮೂಲಕ ನಾವು ಒಂದು ಮಾಸ್ಟರ್‌ಪೀಸ್‌ಗೆ ಸಾಕ್ಷಿಯಾಗಲಿದ್ದೇವೆ. ಪುನೀತ್ ರಾಜ್‌ಕುಮಾರ್ ಸರ್ ಅವರನ್ನು ಮೆಚ್ಚುವ ಲಕ್ಷಾಂತರ ಜನರಿಗೆ ‘ಜೇಮ್ಸ್’ ಸಿನಿಮಾ ಯಾವಾಗಲೂ ತುಂಬಾನೇ ವಿಶೇಷವಾಗಿರುತ್ತದೆ. ವಿ ಮಿಸ್ ಯೂ” ಎಂದು ಇನ್ಸ್ಟಾಗ್ರಾಮ್‌ನಲ್ಲಿ ಪ್ರಭಾಸ್ ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಂಬಾ ಶುಂಠಿ ತಿನ್ನುತ್ತಿದ್ದೀರಾ? ನೀವು ಈ 5 ಅಡ್ಡ ಪರಿಣಾಮಗಳನ್ನು ಅನುಭವಿಸಬಹುದು!!

Sat Feb 12 , 2022
ಶುಂಠಿಯು ಸೂಪ್, ಸಬ್ಜಿ ಅಥವಾ ಮೇಲೋಗರಕ್ಕೆ ಪರಿಮಳವನ್ನು ಸೇರಿಸಲು ಬಳಸುವ ಸಾಮಾನ್ಯ ಮಸಾಲೆಯಾಗಿದೆ. ಶುಂಠಿಯು ಹುಚ್ಚುಚ್ಚಾದ ಪ್ರಮಾಣದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ವಾಕರಿಕೆ, ಬೆಳಗಿನ ಬೇನೆ, ಉರಿಯೂತ ಮತ್ತು ನೋವಿನ ಅವಧಿಗಳನ್ನು ಸೋಲಿಸಲು ಸಹಾಯ ಮಾಡುತ್ತದೆ. ಶುಂಠಿಯು ಕೆಲವರಿಗೆ ವರದಾನವಾದರೆ ಇನ್ನು ಕೆಲವರಿಗೆ ಅದು ಬಾಧೆಯೂ ಆಗಬಹುದು. ಹೌದು, ಶುಂಠಿಯಿಂದಲೂ ಕೆಲವು ಅಡ್ಡ ಪರಿಣಾಮಗಳಿವೆ. ಇದರ ಸೇವನೆಯಿಂದ ಮಿತಿಮೀರಿ ಹೋಗುವುದು ಆರೋಗ್ಯ ಸಮಸ್ಯೆಗಳ ಮಹಾಪೂರಕ್ಕೆ ಕಾರಣವಾಗಬಹುದು. ಅತಿಯಾದ ಸೇವನೆಯು […]

Advertisement

Wordpress Social Share Plugin powered by Ultimatelysocial