ಪ್ರಣಯ -ಜಿ. ಎಸ್. ಶಿವರುದ್ರಪ್ಪ

ಪ್ರಣಯ
-ಜಿ. ಎಸ್. ಶಿವರುದ್ರಪ್ಪ
ನೀನು ಮುಗಿಲು ನಾನು ನೆಲ
ನಿನ್ನ ಒಲವೆ ನನ್ನ ಬಲ,
ನಮ್ಮಿಬ್ಬರ ಮಿಲನದಿಂದ
ಉಲ್ಲಾಸವೆ ಶ್ಯಾಮಲ !
ನಾನು ಎಳೆವೆ, ನೀನು ಮಣಿವೆ ;
ನಾನು ಕರೆವೆ, ನೀನು ಸುರಿವೆ ;
ನಮ್ಮಿಬ್ಬರ ಒಲುಮೆ ನಲುಮೆ
ಜಗಕಾಯಿತು ಹುಣ್ಣಿಮೆ !
ನಾನಚಲದ ತುಟಿಯೆತ್ತುವೆ
ನೀ ಮಳೆಯೊಲು ಮುತ್ತನಿಡುವೆ,
ನಿನ್ನಿಂದಲೆ ತೆರೆವುದೆನ್ನ
ಚೈತನ್ಯದ ಕಣ್ಣೆವೆ !
ಸೂರ್ಯಚಂದ್ರ ಚಿಕ್ಕೆಗಣ್ಣ
ತೆರೆದು ನೀನು ಸುರಿವ ಬಣ್ಣ
ಹಸುರಾಯಿತು, ಹೂವಾಯಿತು,
ಚೆಲುವಾಯಿತು ಈ ನೆಲ !
ನೀನು ಗಂಡು ನಾನು ಹೆಣ್ಣು,
ನೀನು ರೆಪ್ಪೆ ನಾನು ಕಣ್ಣು ;
ನಮ್ಮಿಬ್ಬರ ಮಿಲನದಿಂದ
ಸುಫಲವಾಯ್ತು ಜೀವನ.
(ನಮ್ಮ ‘ಕನ್ನಡ ಸಂಪದ’ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ ‘ಸಂಸ್ಕೃತಿ ಸಲ್ಲಾಪ’ ತಾಣವಾದ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀನಿವಾಸ್ ಜಿ. ಕಪ್ಪಣ್ಣ

Fri Mar 4 , 2022
ಶ್ರೀನಿವಾಸ್ ಜಿ. ಕಪ್ಪಣ್ಣ ಶ್ರೀನಿವಾಸ್‌ ಜಿ ಕಪ್ಪಣ್ಣನವರು ರಂಗ ಚಳವಳಿ, ರಂಗಯಾತ್ರೆ, ರಂಗಭೂಮಿ ಮತ್ತು ಪ್ರಮುಖ ಸಾಂಸ್ಕೃತಿಕ ಸಂಘಟಕರೆಂದು ಖ್ಯಾತರಾಗಿದ್ದಾರೆ. ಶ್ರೀನಿವಾಸ್‌ ಜಿ ಕಪ್ಪಣ್ಣನವರು 1948ರ ಫೆಬ್ರುವರಿ 13ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಗಿರಿಯಪ್ಪನವರು. ತಾಯಿ ಶ್ರೀಮತಿ ಜಯಮ್ಮನವರು. ನ್ಯಾಷನಲ್ ಕಾಲೇಜಿನಿಂದ ಪದವಿ ಪಡೆದ ಕಪ್ಪಣ್ಣನವರು ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಶಾಲಾ ದಿನಗಳಿಂದಲೇ ನಾಟಕದತ್ತ ಒಲವು ಮೂಡಿಸಿಕೊಂಡ ಶ್ರೀನಿವಾಸ ಕಪ್ಪಣ್ಣನವರು, 1964ರ ವರ್ಷದಲ್ಲಿ ನ್ಯಾಷನಲ್ ಕಾಲೇಜಿನ […]

Advertisement

Wordpress Social Share Plugin powered by Ultimatelysocial