ಪ್ರೀತಿ ಶೆಣೈ ಭಾರತದ ಪ್ರಖ್ಯಾತ ಇಂಗ್ಲಿಷ್ ಬರಹಗಾರ್ತಿ.

ಪ್ರೀತಿ ಶೆಣೈ ಭಾರತದ ಪ್ರಖ್ಯಾತ ಇಂಗ್ಲಿಷ್ ಬರಹಗಾರ್ತಿ. ಪ್ರತಿಷ್ಠತೆಯ ಮಾನದಂಡ ಎನಿಸುವ ‘ಫೋರ್ಬ್ಸ್’ ಹೆಸರಿಸಿರುವ ಪ್ರಭಾವೀ ವ್ಯಕ್ತಿಗಳ ದೊಡ್ಡ ಪಟ್ಟಿಯಲ್ಲಿ ಇವರ ಹೆಸರೂ ಇದೆ. ಇವರ ಕೃತಿಗಳು ಅನೇಕ ಭಾಷೆಗಳಿಗೆ ತರ್ಜುಮೆಗೊಂಡಿವೆ.ಪ್ರೀತಿ ಶೆಣೈ 1971ರ ಡಿಸೆಂಬರ್ 21ರಂದು ಜನಿಸಿದರು. ಅವರ ಶಾಲಾ ಓದು ಭಾರತದಾದ್ಯಂತ ಕೇಂದ್ರಿಯ ವಿದ್ಯಾಲಯಗಳಲ್ಲಿ ನಡೆಯಿತು. ಸ್ವಯಂಪ್ರೇರಿತ ಚಿತ್ರಗಾರ್ತಿಯೂ ಆದ ಪ್ರೀತಿ, ತಮ್ಮ ಸುತ್ತಮುತ್ತಲಿನ ವರ್ಣರಂಜಿತ ವಿಶ್ವದ ಸೂಕ್ಷ್ಮತೆಗಳನ್ನು ಗ್ರಹಿಸಿ ಅವುಗಳನ್ನು ಬರಹರೂಪದಲ್ಲಿರಿಸಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ.ಪ್ರೀತಿ ಶೆಣೈ ಅವರ ವಿಷಯಗಳ ಹುಡುಕುವಿಕೆಯಲ್ಲೊಂದು ಹೊಸತನವಿದೆ. ಅವರ ಒಂದು ಕೃತಿಯ ಹೆಸರು ’34 ಬಬ್ಬಲ್ಗಮ್ಸ್ ಅಂಡ್ ಕ್ಯಾಂಡೀಸ್’. ಹೆಸರೇ ತಿನ್ನೋ ಹಾಗಿದೆ. ಈ ಕೃತಿ ಪ್ರೀತಿ ಶೆಣೈ ಅವರನ್ನು ಪ್ರೇರಿಸಿದ ನಿಜ ಜೀವನದ ಘಟನೆಗಳನ್ನು ಆಧರಿಸಿದ ಸಂಕಲನ. ಇದು ‘ಲವ್ ಎ ಲಿಟಲ್ ಸ್ಟ್ರಾಂಗರ್’ ಎಂಬ ಹೆಸರಲ್ಲಿ ಇನ್ನಷ್ಟು ಸ್ವಾದದೊಂದಿಗೆ ಮತ್ತೊಮ್ಮೆ ಪ್ರಕಟಗೊಂಡಿದೆ.ಅವರ 2011ರಲ್ಲಿ ಮೂಡಿಬಂದ ‘ಲೈಫ್ ಈಸ್ ವಾಟ್ ಯು ಮೇಕಿಟ್’ ದೇಶದ ಬಹುಮಾರಾಟವಾದ ಕೃತಿ ಎನಿಸಿತು. ಅವರ ಇತರ ಕೃತಿಗಳಲ್ಲಿ ‘ಟೀ ಫಾರ್ ಟೂ ಅಂಡ್ ಎ ಪೀಸ್ ಆಫ್ ಕೇಕ್’, ‘ದ ಸೀಕ್ರೆಟ್ ವಿಷ್ ಲಿಸ್ಟ್’, ‘ದ ಒನ್ ಯು ಕೆನಾಟ್ ಹ್ಯಾವ್’, ‘ಇಟ್ ಹ್ಯಾಪನ್ಸ್ ಫಾರ್ ಎ ರೀಸನ್’, ‘ವೈ ವಿ ಲವ್ ದ ವೇ ವಿ ಡು’, ‘ ಇಟ್ ಈಸ್ ಆಲ್ ಇನ್ ಪ್ಲಾನೆಟ್ಸ್’, ‘ಎ ಹಂಡ್ರೆಡ್ ಲಿಟಲ್ ಫ್ಲೇಮ್ಸ್’, ‘ದ ರೂಲ್ ಬ್ರೇಕರ್ಸ್’, ‘ವೇಕ್ ಅಪ್, ಲೈಫ್ ಈಸ್ ಕಾಲಿಂಗ್’, ‘ದ ಮ್ಯಾಜಿಕ್ ಮೈಂಡ್ಸೆಟ್: ಹೌ ಟು ಫೈಂಡ್ ಯುವರ್ ಹ್ಯಾಪಿ ಪ್ಲೇಸ್’ ಮುಂತಾದವು ಸೇರಿವೆ.ಪ್ರೀತಿ ಶೆಣೈ ಅವರ ಸಣ್ಣ ಕತೆಗಳು ಮತ್ತು ಕವಿತೆಗಳು ‘ಕಾಂಡೆ ನಾಸ್ಟ್’ ಮತ್ತು ‘ವೆರ್ವ್’ ಅಂತಹ ನಿಯತಕಾಲಿಕಗಳಲ್ಲಿ ಮೂಡಿವೆ. ಅವರದ್ದೇ ಪ್ರಸಿದ್ಧ ಬ್ಲಾಗ್ ಇದೆ. ಫೈನಾನ್ಷಿಯಲ್ ಕ್ರಾನಿಕಲ್ನಲ್ಲಿ ಅಂಕಣ ಬರೆಯುತ್ತಾರೆ. ಪ್ರವಾಸ, ಛಾಯಾಗ್ರಹಣ ಮತ್ತು ಯೋಗ ಅವರ ಇತರ ಹವ್ಯಾಸಗಳಲ್ಲಿ ಸೇರಿವೆ. ಉತ್ತಮ ಜನಪ್ರೇರಕ ಮಾತುಗಾರರೂ ಆದ ಅವರ ಕಾರ್ಯಕ್ರಮಗಳು ಐಐಟಿ, ಐಐಎಮ್ ಹಾಗೂ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಗಾಗ ನಡೆಯುತ್ತಿವೆ.ಪ್ರೀತಿ ಶೆಣೈ ಅವರನ್ನು ‘ಇಂಡಿಯಾ ಟುಡೇ’ ನಿಯತಕಾಲಿಕ ‘ಬೆಸ್ಟ್ ಸೆಲ್ಲಿಂಗ್ ಲೀಗ್’ನಲ್ಲಿರುವ ಏಕೈಕ ಮಹಿಳಾ ಲೇಖಕಿ ಎಂದು ಶ್ಲಾಘಿಸಿದೆ. ‘ಟೈಮ್ಸ್ ಆಫ್ ಇಂಡಿಯಾ’, ‘ದ ಡೈಲಿ ನ್ಯೂಸ್ ಅಂಡ್ ಅನಾಲಿಸಿಸ್’ ಅಂತಹ ಪತ್ರಿಕೆಗಳೂ ಇವರ ಬರಹಗಳ ಶೈಲಿ ಮತ್ತು ಜನಪ್ರಿಯ ಧಾಟಿಗೆ ಶಹಭಾಸ್ಗಿರಿ ನೀಡಿವೆ. 2017ರಲ್ಲಿ ಬ್ರಾಂಡ್ಸ್ ಅಕಾಡಮಿ ಪ್ರೀತಿ ಅವರಿಗೆ ‘ಇಂಡಿಯನ್ ಆಫ್ ದ ಇಯರ್’ ಗೌರವ ನೀಡಿದೆ. ನ್ಯೂಡೆಲ್ಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವ್ಯವಹಾರ ಚತುರತೆಗಾಗಿ ಪ್ರಶಸ್ತಿ ನೀಡಿದೆ.ಗಿರಿ ನೀಡಿವೆ. 2017ರಲ್ಲಿ ಬ್ರಾಂಡ್ಸ್ ಅಕಾಡಮಿ ಪ್ರೀತಿ ಅವರಿಗೆ ‘ಇಂಡಿಯನ್ ಆಫ್ ದ ಇಯರ್’ ಗೌರವ ನೀಡಿದೆ. ನ್ಯೂಡೆಲ್ಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವ್ಯವಹಾರ ಚತುರತೆಗಾಗಿ ಪ್ರಶಸ್ತಿ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ನಿಮಗೂ ಕೂಡ ಇಂತಹ ಅನುಭವ ಆಗಿರಬಹುದು.

Thu Dec 22 , 2022
ನಿರ್ಜನ ರಸ್ತೆಯಲ್ಲಿ ಧುತ್ತನೆ ಎದರುರಾಗ್ತಾನೆ ಆಗಂತುಕ ನಗರದಲ್ಲಿದ್ದಾನೆ ವಿಚಿತ್ರ ಸೈಕೋಪಾಥ್ ವಿಚಿತ್ರ ಸೈಕೋಪಾಥ್ ಗಾಗಿ ಪೊಲೀಸರಿಂದ ನಿರಂತರ ಹುಡುಕಾಟ ನಿಶಾಚರಿಯಂತೆ ಓಡಾಡಿ ವಾಹನ ಸವಾರರ ನಿದ್ದೆಗೆಡಿಸುತ್ತಿರುವ ಅಪರಿಚಿತ ನಡು ರಸ್ತೆಯಲ್ಲಿ ವಾಹನಗಳನ್ನ ಅಡ್ಡ ಹಾಕಿ ವಿಚಿತ್ರ ವರ್ತನೆ ನಡು ರಸ್ತೆಯಲ್ಲಿ ಕೈ ಚಾಚಿ ನಿಂತು ವಿಚಿತ್ರ ವರ್ತನೆ ಹೆಡ್ ಫೋನ್ ಹಾಕಿಕೊಂಡು ನಡು ರಸ್ತೆಯಲ್ಲಿ ನಿಂತು ವಾಹನಗಳನ್ನ ಅಡ್ಡ ಹಾಕುವ ವಿಚಿತ್ರ ಸೈಕೋಪಾಥ್ ಗಾಡಿ ನಿಲ್ಲಿಸಿ ವಿಚಿತ್ರವಾಗಿ ನಡೆದುಕೊಳ್ಳುವ ಸೈಕೋಪಾಥ್ […]

Advertisement

Wordpress Social Share Plugin powered by Ultimatelysocial