ತೆಲುಗು ನಟ ನಾಗ ಚೈತನ್ಯಗೆ ಪುನೀತ್ ರಾಜ್‌ಕುಮಾರ್ ಅವರೇ ಸ್ಪೂರ್ತಿಯಂತೆ!

 

ಟಾಲಿವುಡ್ ನಟ ನಾಗಚೈತನ್ಯ ಅಕ್ಕಿನೇನಿ ಇತ್ತೀಚೆಗೆ ಹೆಚ್ಚು ಸುದ್ದಿಯಾಗಿದ್ದು, ನಟಿ ಶೋಭಿತಾ ವಿಚಾರಕ್ಕೆ. ಶೋಭಿತಾ ಧುಲಿಪಾಲ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಸುದ್ದಿಯಾಗಿದ್ದರು‌. ಆದರೆ ಈಗ ಕನ್ನಡ ಚಿತ್ರರಂಗದ ಬಗ್ಗೆ ಮಾತಾಡಿ ಗಮನ ಸೆಳೆದಿದ್ದಾರೆ.

ಬೆಂಗಳೂರಿಗೆ ಆಗಮಿಸಿದ್ದ ನಾಗ ಚೈತನ್ಯ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ.

ಕನ್ನಡ ಫಿಲ್ಮ್ ಇಂಡಸ್ಟ್ರಿ ಬಗ್ಗೆ ಮಾತನಾಡಿರುವ ನಾಗಚೈತನ್ಯ ತಾನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಕನ್ನಡ ಸಿನಿಮಾಗಳನ್ನು ಹಾಡಿಹೊಗಳಿದ್ದಾರೆ. ನಾಗಚೈತನ್ಯ ಅವರು ಕನ್ನಡ ಸಿನಿಮಾಗಳನ್ನು ಹೊಗಳಿದ್ದಾರೆ.

ಸಮಂತಾ ಜೊತೆಗೆ ಡಿವೋರ್ಸ್ ಪಡೆದ ಮೇಲೆ ಹೆಚ್ಚು ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳದ ನಾಗಚೈತನ್ಯ ನಟಿ ಶೋಭಿತಾ ಅವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ನಡುವೆ ಬೆಂಗಳೂರಿಗೆ ಬಂದಾಗ ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿ, “ನನಗೆ ಪುನೀತ್ ರಾಜ್ ಕುಮಾರ್ ಅವರ ಡ್ಯಾನ್ಸ್ ತುಂಬಾ ಇಷ್ಟ. ಅವರಂತೆ ಡ್ಯಾನ್ಸ್ ಮಾಡಲು ನಮಗೆ ಯಾರಿಂದಲೂ ಆಗುವುದಿಲ್ಲ. ಪುನೀತ್ ಸರ್ ಒಳ್ಳೆಯ ಡ್ಯಾನ್ಸರ್. ಪುನೀತ್ ಸರ್ ಅವರ ಡ್ಯಾನ್ಸ್ ನನಗೆ ಸ್ಪೂರ್ತಿ. ನಾನು ಅವರ ದೊಡ್ಡ ಅಭಿಮಾನಿ ಎಂದು ನಾಗಚೈತನ್ಯ ಹೇಳಿದ್ದಾರೆ. ಅಲ್ಲದೇ ಈ ವೇಳೆ ಬೆಂಗಳೂರಿನ ಬಗ್ಗೆಯೂ ಮಾತನಾಡಿದ್ದು, ಬೆಂಗಳೂರು ಎಂದರೇನೇ ಒಂದು ಎನರ್ಜಿ. ಇಲ್ಲಿರುವ ಜನರೆಲ್ಲಾ ಸದಾ ಒಂದಲ್ಲ ಒಂದು ವಿಚಾರಕ್ಕೆ ತುಡಿಯುತ್ತಿರುತ್ತಾರೆ. ಯಾವಾಗಲೂ ಆಕ್ಟಿವ್ ಆಗಿರುತ್ತಾರೆ ಎಂದು ಹೇಳಿದ್ದಾರೆ.

ಇನ್ನು ಕನ್ನಡ ಫಿಲ್ಮ್ ಇಂಡಸ್ಟ್ರಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ‘ಕೆಜಿಎಫ್ 2’ ಚಿತ್ರ ನೋಡಿದ್ದು, ಸಿನಿಮಾ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಪ್ರತಿ ಬಾರಿ ತಮ್ಮ ಸಿನಿಮಾಗಳು ರಿಲೀಸ್ ಆದಾಗಲೆಲ್ಲಾ ಬೆಂಗಳೂರಿನಿಂದ ತುಂಬಾ ಒಳ್ಳೆಯ ರೆಸ್ಪಾನ್ಸ್ ಬರುತ್ತದೆ. ಇದು ನಮ್ಮನ್ನು ಇನ್ನಷ್ಟು ಹುರಿದುಂಬಿಸುತ್ತದೆ ಎಂದು ಹೇಳಿದ್ದಾರೆ. ಇನ್ನು ನಾಗಚೈತನ್ಯ ಅವರಿಗೆ ಕನ್ನಡದ ಹಲವು ಚಿತ್ರಗಳು ಇಷ್ಟವಾಗಿದ್ದು, ಅದರಲ್ಲಿ ‘ಲೂಸಿಯಾ’ ಚಿತ್ರ ಸೂಪರ್. ತಮಗೆ ‘ಲೂಸಿಯಾ’ ಚಿತ್ರ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

Mon Jun 27 , 2022
ಬೆಂಗಳೂರು: 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಆಗಿದ್ದ ಶ್ರೀನಾಥ್ ಮಹದೇವ್ ಜೋಷಿ ಅವರನ್ನು ಲೋಕಾಯುಕ್ತ ಎಸ್ಪಿಯಾಗಿ ವರ್ಗಾವಣೆ ಮಾಡಿದರೆ, ಬೆಂಗಳೂರು ಪೂರ್ವ ವಿಭಾಗದ ಟ್ರಾಫಿಕ್ ಡಿಸಿಪಿ ಆಗಿದ್ದ ಕೆ.ಎಂ. ಶಾಂತರಾಜು ಅವರನ್ನ ಬೆಸ್ಕಾಂ ಎಸ್ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಯಾರು? ಎಲ್ಲಿಗೆ ವರ್ಗಾವಣೆ? ಶ್ರೀನಾಥ್ ಮಹದೇವ್ ಜೋಷಿ- ಲೋಕಾಯುಕ್ತ ಎಸ್ಪಿ ಕೆ.ಎಂ. ಶಾಂತರಾಜು- ಬೆಸ್ಕಾಂ ಎಸ್ಪಿ ಸಿಕೆ […]

Advertisement

Wordpress Social Share Plugin powered by Ultimatelysocial