ಪುಣೆ: ಶಿಕ್ಷಕರ ಅರ್ಹತಾ ಪರೀಕ್ಷೆ ಹಗರಣ : ಐಎಎಸ್ ಅಧಿಕಾರಿ ಪೊಲೀಸ್ ವಶಕ್ಕೆ

ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಸಂಬಂಧಪಟ್ಟಂತೆ ಬಂಧಿತರಾಗಿರುವ ಐಎಎಸ್ ಅಧಿಕಾರಿ ಸುಶೀಲ್ ಕೊಡ್ವಾಕರ್ ಅವರನ್ನು ಜ.31ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಮಹಾರಾಷ್ಟ್ರದ ಕೃಷಿ ಇಲಾಖೆಯ ಉಪಕಾರ್ಯದರ್ಶಿಯಾಗಿರುವ ಸುಶೀಲ್ ಕೊಡ್ವಾಕರ್ ಅವರನ್ನು ನಿನ್ನೆ ಪುಣೆಯ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದರು.ಜನವರಿಯಲ್ಲಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿನ ಅಕ್ರಮಗಳಲ್ಲಿ ಐಎಎಸ್ ಅಧಿಕಾರಿ ಭಾಗಿಯಾಗಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಕಳೆದ ನವೆಂಬರ್‍ನಲ್ಲಿ ಕೃಷಿ ಇಲಾಖೆಗೆ ವರ್ಗಾವಣೆಯಾಗುವ ಮೊದಲು ಸುಶೀಲ್ ಅವರು ಶಿಕ್ಷಣ ಮತ್ತು ಕ್ರೀಡಾ ಇಲಾಖೆಯಲ್ಲಿ ಉಪಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.ಸೈಬರ ಕ್ರೈಂ ಪೊಲೀಸರ ಪರವಾಗಿ ವಕೀಲ ವಿಜಯ ಸಿನ್ಹಾ ಜಾದವ್ ಅವರು ಅಧಿಕಾರಿಯನ್ನು ಏಳು ದಿನಗಳ ಕಾಲ ವಿಚಾರಣೆಗೆ ಒಪ್ಪಿಸುವಂತೆ ಮನವಿ ಮಾಡಿದರು. ಆದರೆ ಏಳು ದಿನಗಳ ಬದಲಾಗಿ ಒಂದು ದಿನದ ಮಟ್ಟಿಗೆ ಪೊಲೀಸರ ವಶಕ್ಕೆ ನೀಡಲಾಗಿದೆ.ಹಗರಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವಾರು ಅಕ್ರಮಗಳು ನಡೆದಿವೆ ಎಂದು ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈವರೆಗೂ 12 ಮಂದಿಯನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

LEGEND LEGUE:ಲೆಜೆಂಡ್ಸ್ ಕ್ರಿಕೆಟ್ ಕಪ್ ಗೆದ್ದ ವರ್ಲ್ಡ್ ಜೈಂಟ್ಸ್;

Sun Jan 30 , 2022
 ಕೋರಿ ಆಯಂಡರ್ಸನ್ ಬ್ಯಾಟಿಂಗ್ ಸಾಹಸದಿಂದ ಬೃಹತ್ ಮೊತ್ತ ಕಲೆಹಾಕಿದ ವರ್ಲ್ಡ್ ಜೈಂಟ್ಸ್ ತಂಡವು ಲೆಜೆಂಡ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಏಶ್ಯನ್ ಲಯನ್ಸ್ ವಿರುದ್ಧ ಜಯ ಸಾಧಿಸಿದೆ. ಈ ಮೂಲಕ ಡ್ಯಾರೆನ್ ಸ್ಯಾಮಿ ನಾಯಕತ್ವದ ವರ್ಲ್ಡ್ ಜೈಂಟ್ಸ್ ತಂಡವು ಲೆಜೆಂಡ್ಸ್ ಕ್ರಿಕೆಟ್ ಲೀಗ್ ನ ಚೊಚ್ಚಲ ವಿಜಯಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ವರ್ಲ್ಡ್ ಜೈಂಟ್ಸ್ ತಂಡವು ಐದು ವಿಕೆಟ್ ಕಳೆದುಕೊಂಡು 256 ರನ್ ಗಳಿಸಿತು. ಗುರಿ ಬೆನ್ನತ್ತಿದ ಏಶ್ಯನ್ ಲಯನ್ಸ್ ತಂಡ […]

Advertisement

Wordpress Social Share Plugin powered by Ultimatelysocial