ಅತ್ಯಂತ ವೇಗವಾಗಿ 30 ಟೆಸ್ಟ್ ಶತಕ ಸಿಡಿಸಿದ 3 ಕ್ರಿಕೆಟಿಗರು

 

ಟೆಸ್ಟ್ ಕ್ರಿಕೆಟ್ ಈಗಲೂ ಕ್ರಿಕೆಟ್ ಮಾದರಿಯ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಮಾದರಿ ಎನಿಸಿಕೊಂಡಿದೆ. ಕ್ರಿಕೆಟ್ ಆಡುವ ಬಹುತೇಕ ಆಟಗಾರರು ಟೆಸ್ಟ್ ಮಾದರಿಯಲ್ಲಿ ಆಡುವ ಕನಸನ್ನು ಇಟ್ಟುಕೊಂಡಿರುವುದು ಇದಕ್ಕೆ ಸಾಕ್ಷಿ. ಈ ಮಾದರಿಯಲ್ಲಿ 30 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸುವುದು ಸುಲಭದ ಮಾತಲ್ಲ.ಈ ಮೈಲಿಗಲ್ಲನ್ನು ಕೆಲವೇ ಶ್ರೆಷ್ಠ ಆಟಗಾರರು ದಾಟಿ ಮುನ್ನುಗ್ಗಿದ್ದಾರೆ. ಅನೇಕ ಶ್ರೇಷ್ಠ ಆಟಗಾರರಿಗೂ ಕೂಡ ಈ ಮೈಲಿಗಲ್ಲು ದಾಟಲು ಸಾಧ್ಯವಾಗಿಲ್ಲ.ಆದರೆ ಕೆಲ ಆಟಗಾರರು ಈ 30 ಟೆಸ್ಟ್ ಶತಕದ ಸಾಧನೆಯನ್ನು ವೇಗವಾಗಿ ಸಾಧಿಸಿ ಮಿಂಚಿದ್ದಾರೆ. 170ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳನ್ನು ಬಳಸಿಕೊಂಡು 30 ಶತಕ ಸಿಡಿಸಿದ ಸಾಧನೆ ಮಾಡಿದ ಕೇವಲ ಮೂವರು ಕ್ರಿಕೆಟಿಗರು ಮಾತ್ರವೇ ಇದ್ದಾರೆ. ಹೀಗಾಗಿ ಟೆಸ್ಟ್ ಮಾದರಿಯಲ್ಲಿ 170ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳನ್ನು ಬಳಸಿಕೊಂಡು 30 ಶತಕ ಸಿಡಿಸಿದ ಸಾಧನೆ ಮಾಡಿದ ಮೂವರು ಆಟಗಾರರು ಯಾರು ಎಂಬುದನ್ನು ನೋಡೋಣ. ಮುಂದೆ ಓದಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿರುವ ಆಟಗಾರ. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿದ್ದ ಹೇಡನ್ ಟೆಸ್ಟ್ ಮಾದರಿಯಲ್ಲಿಯೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಇವರು ಟೆಸ್ಟ್ ಮಾದರಿಯಲ್ಲಿ ತಮ್ಮ 30ನೇ ಶತಕವನ್ನು 167 ಇನ್ನಿಂಗ್ಸ್‌ಗಳಲ್ಲಿ ಸಿಡಿಸಿದ್ದಾರೆ. ವಿಶ್ವದ ಯಾವುದೇ ಶ್ರೇಷ್ಠ ಬೌಲಿಂಗ್ ಲೈನಪ್‌ಅನ್ನು ಧ್ವಂಸಮಾಡಬಲ್ಲ ಸಾಮರ್ಥ್ಯ ಹೊಂದಿದ್ದರು ಹೇಡನ್. ಆಸ್ಟ್ರೇಲಿಯಾ ಪರವಾಗಿ ಹಲವು ಸುದೀರ್ಘ ಇನ್ನಿಂಗ್ಸ್‌ಗಳನ್ನು ಆಡಿ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ ಹೇಡನ್ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಸ್ಟೀವ್ ಸ್ಮಿತ್ ಶತಕ ಸಿಡಿಸುವ ಮೂಲಕ ಮಿಂಚಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರವಾಗಿ ಅತ್ಯಂತ ವೇಗವಾಗಿ 30 ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಹೇಡನ್ ಅವರನ್ನು ಹಿಂದಿಕ್ಕಿದ್ದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆಇಂಡಿಯಾದ ಮಾಜಹಿ ಆಟಗಾರ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ಅತ್ಯಂತ ವೇಗವಾಘಿ 30 ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ಅಗ್ರಸ್ಥಾನದಲ್ಲಿದ್ದಾರೆ. ಅಭಿಮಾನಿಗಳಿಂದ ಕ್ರಿಕೆಟ್‌ನ ದೇವರು ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಈ ವಿಶೇಷ ಸಾಧನೆ ಮಾಡಲು ಬಳಸಿಕೊಂಡಿದ್ದು 159 ಇನ್ನಿಂಗ್ಸ್ ಮಾತ್ರ. ಈ ಮೂಲಕ 160ಕ್ಕೂ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಕೂಡ ಹೊಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ವಿಧಾನಸೌಧದಲ್ಲಿ ಹಣ ಸಿಕ್ಕ ವಿಚಾರ.

Sat Jan 7 , 2023
ಪೊಲೀಸರ ಕೈೆಗೆ ತಗಲಾಕಿಕೊಂಡಿದ್ದ ಜಗದೀಶ್ ಹೇಳಿಕೆ.. ಇದೊಂದು ತಪ್ಪು ಮಾಹಿತಿ‌ ರವಾನೆ ಆಗಿದೆ.. ನಾವು ಬೆಂಗಳೂರಿಗೆ ಬಂದಿದ್ದು ಸ್ವಂತ ಕೆಲಸಕ್ಕಾಗಿ.. ನಮ್ಮ ರಿಲೇಟೀವ್ಸ್ ಮುಖಾಂತರ ಹಣ ಕಲೆಕ್ಟ್‌ ಮಾಡಿದ್ದೆ.. ಕೋರ್ಟ್ ಮುಖಾಂತರ ಸಬ್ಮಿಟ್ ಮಾಡಬೇಕಿತ್ತು ಅಮೌಂಟ್.. 21 ನೇ ತಾರೀಖಿನಂದು ಕಟ್ಟಬೇಕಿತ್ತು.. ಎಲ್ಲಾ ದಾಖಲಾತಿಗಳು ಸಹ ಕೊಟ್ಟಿದ್ದೀನಿ‌. ಪೊಲೀಸರಿಗು ಕೊಟ್ಟಿದ್ದೀನಿ ಕೋರ್ಟ್ ಗು ಸಹ ಕೊಟ್ಟಿದ್ದೀನಿ‌. ಮಂಡ್ಯಕ್ಕೆ ಹೋಗಬೇಕಿತ್ತು, ಆಗ ನನಗೆ ವಿಧಾನಸೌಧಕ್ಕೆ ಹೋಗಬೇಕಾಗಿ ಬಂತು.. ಆಗ ಸುಮಾರು 6 […]

Advertisement

Wordpress Social Share Plugin powered by Ultimatelysocial