ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು “ಗಂಧರ್ವ”ನ ಫಸ್ಟ್‌ ಲುಕ್‌.

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿರುವ ಉಮೇಶ್ ಕುಮಾರ್ ಜಿ ಪ್ರಥಮ ನಿರ್ದೇಶನದ “ಗಂಧರ್ವ” ಚಿತ್ರದ ಫಸ್ಟ್ ಲುಕನ್ನು ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ಕೂಡ ರಾಘಣ್ಣ ಅಭಿನಯಿಸುತ್ತಿದ್ದಾರೆ. ಆದರೆ ನಮ್ಮ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರನ್ನು ಈಗಿರುವ ರೀತಿ ತೋರಿಸಲ್ಲ. ಹಿಂದೆ ರಾಘಣ್ಣ ಹೇಗಿದ್ದರೊ ಹಾಗೆ ನೋಡಬಹುದು ಎಂದು ನಿರ್ದೇಶಕರು ತಿಳಿಸಿದ್ದಾರೆ.

ಗೋವಿಂದ್ ರಾಜ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನಾಯಕನಾಗಿ ಇವರಿಗೆ ಇದು ಮೊದಲ ಚಿತ್ರ.‌ ಹಿಂದೆ ಶಿವಾಜಿ ಸುರತ್ಕಲ್ ಚಿತ್ರ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಸುಕನ್ಯ ಗಿರೀಶ್ ಈ ಚಿತ್ರದ ನಾಯಕಿ. ನಾಗೇಂದ್ರ ಅರಸ್, ಲಕ್ಷ್ಮೀ ಸುಬ್ಬಯ್ಯ, ಕಿರಣ್ ಚಂದ್ರ, ಶಿವರಾಜ್ ಮುತ್ತಣ್ಣ, ಶರಣ್, ಹಿತ್ತೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಎನ ಎನ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಗರೆಡ್ಡಿ ಎನ್ ರಾಥೋಡ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರೋನಾಡ್ ಬಕೇಶ್ ಸಂಗೀತ ನಿರ್ದೇಶನ, ನವೀನ್ ಸೂರ್ಯ ಛಾಯಾಗ್ರಹಣ ಹಾಗೂ ನಾಗೇಂದ್ರ ಅರಸ್ ಸಂಕಲನ ಈ ಚಿತ್ರಕ್ಕಿದೆ.
ಸ್ನೇಹದ ಮಹತ್ವ ಸಾರುವ ಹಾಗೂ ಡಿಫರೆಂಟ್ ಲವ್ ಸ್ಟೋರಿಯ ಈ ಚಿತ್ರಕ್ಕೆ ಏಪ್ರಿಲ್ ನಲ್ಲಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ದಾಂಡೇಲಿ, ಹಂಪಿ, ಹೊಸಪೇಟೆ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾದಾಮಿಯಲ್ಲಿ ಯೋಗರಾಜ್ ಭಟ್ಟರ "ಗರಡಿ" .

Tue Mar 29 , 2022
ಸೂರ್ಯ – ಸೋನಾಲ್ ಮಾಂಟೆರೊ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕೌರವ ಬಿ.ಸಿ.ಪಾಟೀಲ್ . ಖ್ಯಾತ ನಟ ಯೋಗರಾಜ್ ಭಟ್ ನಿರ್ದೇಶನದ, ವನಜಾ ಪಾಟೀಲ್ ನಿರ್ಮಾಣದ “ಗರಡಿ” ಚಿತ್ರದ ಚಿತ್ರೀಕರಣ ಕನ್ನಡ ನಾಡಿನ ಐತಿಹಾಸಿಕ ತಾಣ ಬಾದಾಮಿಯಲ್ಲಿ ನಡೆದಿದೆ. ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಈ ಸುಂದರ ತಾಣದಲ್ಲಿ “ಗರಡಿ” ಚಿತ್ರದ ಟೈಟಲ್ ಸಾಂಗ್ ಅದ್ದೂರಿಯಾಗಿ ಚಿತ್ರೀಕರಣಗೊಂಡಿದೆ. ಕರ್ನಾಟಕ ರಾಜ್ಯದ […]

Advertisement

Wordpress Social Share Plugin powered by Ultimatelysocial