ರಾಜ್ಯಸಭೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಆಸ್ತಿ ವಿವರ ಘೋಷಣೆ: ಕೆಲವು ಅಭ್ಯರ್ಥಿಗಳು ಕೋಟಿ ಕುಬೇರರು!

ಬೆಂಗಳೂರು: ಇದೇ ಜೂನ್ 10ರಂದು ನಡೆಯಲಿರುವ ರಾಜ್ಯಸಭೆ ಚುನಾವಣಾ ಕಣ ರಂಗೇರುತ್ತಿದೆ. ಕಾಂಗ್ರೆಸ್ ನಿನ್ನೆ ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸುವ ಮೂಲಕ ನಿಜವಾದ ರಾಜಕೀಯ ಚದುರಂಗದಾಟ ಶುರುವಾಗಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಆಸ್ತಿವಿವರ ಘೋಷಣೆ ಮಾಡುವುದು ಸಾಮಾನ್ಯ.

ಅದೇ ರೀತಿ ನಿನ್ನೆ ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳು ತಮ್ಮ ಬಳಿಯಿರುವ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ನಟ ಜಗ್ಗೇಶ್: ಬಿಜೆಪಿ ಅಭ್ಯರ್ಥಿ ನಟ ಜಗ್ಗೇಶ್ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿವಿವರ ಘೋಷಿಸಿಕೊಂಡಿದ್ದಾರೆ. ಜಗ್ಗೇಶ್​ ಒಟ್ಟು ಆಸ್ತಿ ಮೌಲ್ಯ 17.64 ಕೋಟಿ ರೂಪಾಯಿಯಾಗಿದ್ದು, ಸ್ಥಿರಾಸ್ತಿ 13.25 ಕೋಟಿ, ಚರಾಸ್ತಿ 4.39 ಕೋಟಿ ರೂಪಾಯಿಗಳಾಗಿವೆ. ತಮ್ಮ ಬಳಿ 2 ಲಕ್ಷ ರೂಪಾಯಿ ಹಾಗೂ ಪತ್ನಿ ಪರಿಮಳ ಬಳಿ 1,60 ಸಾವಿರ ರೂಪಾಯಿ ನಗದು ಇದೆ, 500 ಗ್ರಾಂ ಚಿನ್ನ ಮತ್ತು ಒಂದು ಕೆಜಿ ಬೆಳ್ಳಿ ಇದೆ, ಪತ್ನಿ ಬಳಿ 500 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿ ಇದೆ.6.7 ಕೋಟಿ ರೂಪಾಯಿ ಮೌಲ್ಯದ ಕೃಷಿಭೂಮಿ, 6.50 ಕೋಟಿ ರೂಪಾಯಿ ಮೌಲ್ಯದ ಮನೆ, ಪತ್ನಿ ಹೆಸರಿನಲ್ಲಿ 4.50 ಕೋಟಿ ರೂಪಾಯಿ ಮೌಲ್ಯದ ಮನೆ ಹೊಂದಿರುವುದಾಗಿ ತಿಳಿಸಿದ್ದಾರೆ.

ಜಗ್ಗೇಶ್ ಬಳಿ ಎರಡು ಬಿಎಂಡಬ್ಲ್ಯು ಕಾರು, ಒಂದು ಇನ್ನೋವಾ ಕಾರು 3 ದ್ವಿಚಕ್ರ ವಾಹನಗಳಿವೆ.2.91 ಕೋಟಿ ರೂಪಾಯಿ ಸಾಲ, ಪತ್ನಿಯ ಹೆಸರಿನಲ್ಲಿ 4 ಲಕ್ಷ ರೂಪಾಯಿ ಸಾಲವಿದೆ.

ಕುಪೇಂದ್ರ ರೆಡ್ಡಿ: ಇನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರ ಒಟ್ಟು ಆಸ್ತಿ ಮೌಲ್ಯ 575 ಕೋಟಿಯ 89 ಲಕ್ಷದ 75 ಸಾವಿರದ 550 ರೂಪಾಯಿಗಳು. ಸ್ಥಿರಾಸ್ತಿ 222 ಕೋಟಿಯ 47 ಲಕ್ಷದ 60 ಸಾವಿರದ 624 ರೂಪಾಯಿ, ಚರಾಸ್ತಿ 353 ಕೋಟಿಯ 42 ಲಕ್ಷದ 14 ಸಾವಿರದ 926 ರೂಪಾಯಿಗಳು. ಅವರ ಕೈಯಲ್ಲಿ 21 ಲಕ್ಷದ 12 ಸಾವಿರದ 381 ರೂಪಾಯಿ, ಪತ್ನಿ ಬಳಿ 43 ಲಕ್ಷದ 41 ಸಾವಿರದ 108 ರೂಪಾಯಿಗಳಿವೆ. ಆಭರಣ ಮೌಲ್ಯ 1 ಕೋಟಿಯ 74 ಲಕ್ಷದ 35 ಸಾವಿರದ 500 ರೂಪಾಯಿ, ಪತ್ನಿ ಬಳಿ 3 ಕೋಟಿಯ 51 ಲಕ್ಷದ 77 ಸಾವಿರದ 870 ಕೋಟಿ ರೂಪಾಯಿ ಮೌಲ್ಯದ ಆಭರಣಗಳಿವೆ. 20 ಕೋಟಿಯ 91 ಲಕ್ಷದ 54 ಸಾವಿರದ 125 ರೂಪಾಯಿ ಮೌಲ್ಯದ ಕೃಷಿ ಭೂಮಿಯಿದೆ.

ನಿರ್ಮಲಾ ಸೀತಾರಾಮನ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ 2 ಕೋಟಿಯ 50 ಲಕ್ಷದ 99 ಸಾವಿರದ 396 ರೂಪಾಯಿ ಮೌಲ್ಯದ ಆಸ್ತಿಯಿದ್ದು ಸ್ಥಿರಾಸ್ತಿ 1 ಕೋಟಿಯ 87 ಲಕ್ಷದ 60 ಸಾವಿರದ 200 ರೂಪಾಯಿ, ಚರಾಸ್ತಿ 63 ಲಕ್ಷದ 39 ಸಾವಿರದ 196 ರೂಪಾಯಿ ಮೌಲ್ಯದ್ದಾಗಿದೆ. 315 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, 17, 200 ರೂಪಾಯಿ ಹಣ ಕೈಯಲ್ಲಿ, 45 ಲಕ್ಷದ 04 ಸಾವಿರದ 479 ರೂಪಾಯಿ ಎಫ್ ಡಿಯಿದೆ.

ಜೈರಾಂ ರಮೇಶ್: ಇನ್ನು ಕಾಂಗ್ರೆಸ್ ಅಭ್ಯರ್ಥಿ ಜೈರಾಂ ರಮೇಶ್ ಅವರ ಬಳಿ ಒಟ್ಟು ಆಸ್ತಿ ಮೌಲ್ಯ 4.56 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಸ್ಥಿರಾಸ್ತಿ 1.72 ಕೋಟಿ ರೂಪಾಯಿ, ಚರಾಸ್ತಿ 2.48 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ವಿವಿಧ ಹಣಕಾಸು ಸಂಸ್ಥೆಗಳಲ್ಲಿ 35.47 ಲಕ್ಷ ರೂಪಾಯಿ ಸಾಲ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೂನ್ 3ಕ್ಕೆ ತೆರೆಮೇಲೆ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ ಮೇಜರ್ ರಿಲೀಸ್... ಬೆಂಗಳೂರಿನಲ್ಲಿ ಸಂದೀಪ್ ಅಭಿಮಾನಿಗಳಿಗಾಗಿ ಫ್ರೀ ಶೋ ಆಯೋಜಿಸಿದ್ದ ಚಿತ್ರತಂಡ

Wed Jun 1 , 2022
ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಕುರಿತಾಗಿ ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೇಜರ್ ಸಿನಿಮಾ‌ ಬರ್ತಾ ಇದೆ. ಇದೇ ತಿಂಗಳ ಮೂರಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಹೀಗಾಗಿ ಇಡೀ ತಂಡ ಬೆಂಗಳೂರಿಗೆ ಆಗಮಿಸಿ ಪ್ರಚಾರ ನಡೆಸಿತು.ತೆಲುಗು ನಟ ಅಡಿವಿ ಶೇಷ್ ಸಂದೀಪ್ ಉನ್ನಿಕೃಷ್ಣನ್ ಪಾತ್ರ ನಿರ್ವಹಿಸುವುದರ ಜೊತೆಗೆ ಸಿನಿಮಾಗೆ ಕಥೆ ಕೂಡ ಬರೆದಿದ್ದು, ಪ್ರಿನ್ಸ್ ಮಹೇಶ್ ಬಾಬು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ […]

Advertisement

Wordpress Social Share Plugin powered by Ultimatelysocial